ದ್ವಾದಶ ರಾಶಿಗಳ ಇಂದಿನ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಮಂಗಳವಾರದ ಸಂಪೂರ್ಣ ವಿವರ

shivamogga Daily Horoscope 27 January 2026 |  ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತುವಿನ ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ನವಮಿ ತಿಥಿಯು ಸಂಜೆ 4.55 ರವರೆಗೆ ಇದ್ದು, ನಂತರ ದಶಮಿ ತಿಥಿ ಆರಂಭವಾಗುತ್ತದೆ. ಭರಣಿ ನಕ್ಷತ್ರವು ಬೆಳಗ್ಗೆ 9.28 ರವರೆಗೆ ಇರಲಿದ್ದು, ತದನಂತರ ಕೃತ್ತಿಕಾ ನಕ್ಷತ್ರವು ಪ್ರವೇಶಿಸಲಿದೆ.  ಶುಭಕಾರ್ಯಗಳಿಗೆ ಅಮೃತ ಗಳಿಗೆ  ಬೆಳಗಿನ ಜಾವ 5.34 ರಿಂದ 7.04 ರವರೆಗೆ ಲಭ್ಯವಿದೆ. ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಮತ್ತು ಯಮಗಂಡ ಕಾಲ ಬೆಳಗ್ಗೆ 9.00 ರಿಂದ 10.30 ರವರೆಗೆ ಇರುತ್ತದೆ.

shivamogga Daily Horoscope
shivamogga Daily Horoscope

ಇವತ್ತಿನ ರಾಶಿಫಲ

ಮೇಷ | ಅಂದುಕೊಂಡ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ಗೌರವ ಹೆಚ್ಚಾಗಲಿದ್ದು, ಆಸ್ತಿ ಲಾಭದ ಸೂಚನೆಗಳಿವೆ. ಪರಿಚಯ ಹೆಚ್ಚಾಗಲಿದ್ದು, ದೂರದ ಸಂಬಂಧಿಗಳ ಭೇಟಿ ಸಾಧ್ಯವಾಗಗಲಿದೆ. ಇನ್ನೂ ವ್ಯಾಪಾರ ವಿಸ್ತರಣೆ ಯೋಗವಿದೆ, ಉದ್ಯೋಗದಲ್ಲಿ ವಾತಾವರಣ ಅನುಕೂಲಕರವಾಗಿದೆ. 

elephant : ಹಾಸನದಿಂದ ತೀರ್ಥಹಳ್ಳಿಗೆ ಬಂದ ಒಂಟಿ ಸಲಗ | ವಿಡಿಯೋ ಮಾಡ್ತಿದ್ದವರ ಮೇಲೆ ದಾಳಿಗೆ ಯತ್ನ

ವೃಷಭ | ವ್ಯವಹಾರದಲ್ಲಿ ಲಾಭ ಆದರೆ ಶ್ರಮ ಹೆಚ್ಚಾಗಲಿದೆ. ಬಂಧು-ಮಿತ್ರರೊಂದಿಗೆ ಕಲಹ ಮತ್ತು ಸಾಲ  ಆಗಬಹುದು. ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದು, ಉದ್ಯೋಗದಲ್ಲಿ ಕೆಲಸ ಜಾಸ್ತಿ ಇರಲಿದೆ. 

ಮಿಥುನ | ಶ್ರಮಕ್ಕೆ ತಕ್ಕ ಫಲ ಸಿಗಲಿದ್ದು, ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ,  ವಾಹನ ಯೋಗ ಮತ್ತು ಮಾತುಕತೆಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದಾಯಕ ವಾತಾವರಣ. 

shivamogga Daily Horoscope
shivamogga Daily Horoscope

ಕರ್ಕಾಟಕ | ಹಳೆಯ ಸ್ನೇಹಿತರ ಭೇಟಿ, ಔತಣಕೂಟ ಮತ್ತು ಮನರಂಜನೆಯಲ್ಲಿ ಕಾಲ ಕಳೆಯುವಿರಿ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ವಾಹನ ಲಾಭ ಹಾಗೂ ಭೂ ವಿವಾದ ಪರಿಹಾರ. ದೇವವಾಲಯಗಳಿಗೆ ಭೇಟಿ, ವ್ಯಾಪಾರ ಮತ್ತು ಉದ್ಯೋಗದಲ್ಲಿನ ಕಿರಿಕಿರಿ ದೂರ.

ಸಿಂಹ | ಸಾಲದಾತರ ಒತ್ತಡ ಮತ್ತು ಆಧ್ಯಾತ್ಮಿಕ ಚಿಂತನೆ. ವ್ಯವಹಾರಗಳಲ್ಲಿ ಕಿರಿಕಿರಿ, ಯೋಜನೆಗಳಲ್ಲಿ ಹಿನ್ನಡೆ ಮತ್ತು ಜವಾಬ್ದಾರಿ ಹೆಚ್ಚಾಗಲಿವೆ. ಉದ್ಯೋಗ-ವ್ಯಾಪಾರದಲ್ಲಿ ತೊಂದರೆ ಬರಬಹುದು. 

ತೀರ್ಥಹಳ್ಳಿಯ ಶಿವರಾಜಪುರದಲ್ಲಿ ಅಪಘಾತ, ವ್ಯಕ್ತಿ ಸಾವು

ಕನ್ಯಾ | ಪ್ರಮುಖ ಕೆಲಸ ಮಂದಗತಿಯಲ್ಲಿ ಸಾಗಲಿದೆ, ಆಸ್ತಿ ವಿವಾದ ಮತ್ತು ಸಹೋದರರೊಂದಿಗೆ ಜಗಳ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆ ಮತ್ತು ಹಠಾತ್ ಪ್ರಯಾಣ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಧಾರಣ ದಿನ

ತುಲಾ | ಹಳೆಯ ಬಾಕಿ ಹಣ ವಸೂಲಾಗಲಿದ್ದು,  ಪ್ರಮುಖ ಮಾಹಿತಿ ಸಿಗಲಿದೆ. ಮಿತ್ರರಿಂದ ಸಹಾಯ ಮತ್ತು ಹೊಸ ಕಾಂಟ್ರಾಕ್ಟ್ ದೊರೆಯಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಆಸೆ ಚಿಗುರಲಿವೆ. 

shivamogga Daily Horoscope
shivamogga Daily Horoscope

ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿರಸಿ, ಯುಲ್ಲಾಪುರ, ಕುಮುಟಾ! ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ!?

ವೃಶ್ಚಿಕ | ಪ್ರಯತ್ನಗಳು ಸಫಲವಾಗಲಿದೆ, ಗಣ್ಯರ ಪರಿಚಯವಾಗಲಿದೆ. ಆರ್ಥಿಕವಾಗಿ ತೃಪ್ತಿಕರ,  ವಸ್ತು ಲಾಭ ದೊರೆಯಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿನ ಒತ್ತಡ ನಿವಾರಣೆಯಾಗಲಿವೆ.

ಧನು | ಸಂಬಂಧಿಕರೊಂದಿಗೆಜಗಳ. ಹಠಾತ್ ಪ್ರಯಾಣ, ಕುಟುಂಬದಲ್ಲಿ ಒತ್ತಡ ಮತ್ತು ಆರೋಗ್ಯದಲ್ಲಿ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ. 

ಮಕರ | ಕೆಲಸ ಮುಂದೆ ಸಾಗದು, ಆರ್ಥಿಕ ವ್ಯವಹಾರ ಅಷ್ಟಾಗಿ ಕೈ ಹಿಡಿಯುವುದಿಲ್ಲ. ಆಸ್ತಿ ವಿವಾದ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ವಿವಾದ 

ಕುಂಭ |  ಕೆಲಸಗಳಲ್ಲಿನ ಅಡೆತಡೆ ದೂರ,ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ, ಹೊಸ ವಿಷಯ ಕಲಿಯುವಿರಿ. ಉದ್ಯೋಗ ಯೋಗ, ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. 

ಲಾಡ್ಜ್​​ನಲ್ಲಿ ರೇಡ್​ ಮಹಿಳೆ ರಕ್ಷಣೆ, ಆರೋಪಿ ಎಸ್ಕೇಪ್ | ತೀರ್ಥಹಳ್ಳಿಯಲ್ಲಿ ಅಡಿಕೆ ಗೊನೆಗಳೇ ಕಾಣೆ | ಬೆಜ್ಜವಳ್ಳಿ ಜಾತ್ರೆಯಲ್ಲಿ ಹಿಂಗಾಯ್ತು!

shivamogga Daily Horoscope
shivamogga Daily Horoscope

ಮೀನ |  ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಜಗಳ, ಆರೋಗ್ಯ ಸಮಸ್ಯೆ, ಕೆಲಸದಲ್ಲಿ ಅಡೆತಡೆ ಮತ್ತು ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ದಿನ ಭವಿಷ್ಯ 27 ಜನವರಿ 2026: ಮಂಗಳವಾರದ ರಾಶಿ ಭವಿಷ್ಯ, ಮೇಷ ರಾಶಿಗೆ ಆಸ್ತಿ ಲಾಭ shivamogga Daily Horoscope 27 January 2026: Tuesday Rashi Bhavishya, Property Gains for Aries
shivamogga Daily Horoscope
shivamogga Daily Horoscope