ತೀರ್ಥಹಳ್ಳಿಯ ಶಿವರಾಜಪುರದಲ್ಲಿ ಅಪಘಾತ, ವ್ಯಕ್ತಿ ಸಾವು

ಕೊನೆಯ ನವೀಕರಣ: 19 ಜನವರಿ 2026, 4:19 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Thirthahalli Accident Ramesh of Shivarajapura Dies
Thirthahalli Accident Ramesh of Shivarajapura Dies

 ತೀರ್ಥಹಳ್ಳಿ: ಮನುಷ್ಯನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ನಡೆದ ಅಪಘಾತದಲ್ಲಿ ಶಿವರಾಜಪುರದಲ್ಲಿ ಸಣ್ಣ ಅಂಗಡಿ ನಡೆಸುತ್ತಾ ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾಯಕ ಮಾಡುತ್ತಿದ್ದ ರಮೇಶ್ ಎಂಬುವವರು ಮೃತಪಟ್ಟಿದ್ದಾರೆ.

ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ

Thirthahalli Accident ರಮೇಶ್ ಅವರು ಶಿವರಾಜಪುರದ ಆಗುಂಬೆ ರಸ್ತೆಯ ಬದಿಯಲ್ಲಿರುವ ತಮ್ಮ ಅಂಗಡಿಯ ಎದುರು ಮಾರುತಿ ವ್ಯಾನ್ ನಿಲ್ಲಿಸಿ, ಅದರಿಂದ ಸಾಮಗ್ರಿಗಳನ್ನು ಹೊರತೆಗೆಯುತ್ತಿದ್ದರು. ಇನ್ನು ಕೆಲವೇ ಹೊತ್ತಿನಲ್ಲಿ ಅವರು ಶಿವಮೊಗ್ಗಕ್ಕೆ ಸಂಬಂಧಿಕರ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಆಗುಂಬೆ ಕಡೆಯಿಂದ ಅತಿವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಏಕಾಏಕಿ ರಾಂಗ್ ಸೈಡ್‌ಗೆ ನುಗ್ಗಿ ರಸ್ತೆ ಬದಿಯಲ್ಲಿದ್ದ ವ್ಯಾನ್ ಹಾಗೂ ರಮೇಶ್ ಅವರಿಗೆ ಬಲವಾಗಿ ಅಪ್ಪಳಿಸಿದೆ.

Thirthahalli Accident Ramesh of Shivarajapura Dies
Ramesh of Shivarajapura Dies

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ

ಅತಿವೇಗದ ಕಾರಿನ ಹೊಡೆತಕ್ಕೆ ಸಿಲುಕಿದ ರಮೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತಿವೇಗವಾಗಿ ಕಾರು ಚಲಾಯಿಸಿದ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Thirthahalli Accident Ramesh of Shivarajapura Dies
Ramesh of Shivarajapura Dies
Thirthahalli Accident Ramesh of Shivarajapura Dies

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor