ಹೆಲ್ಮೆಟ್​ ಧರಿಸದೇ ಬಂದ ಯುವಕರಿಗೆ ಟ್ರಾಫಿಕ್​ ಪೊಲೀಸರಿಂದ ಹೆಲ್ಮೆಟ್​ ಗಿಫ್ಟ್​

ಹಂಚಿಕೊಳ್ಳಿ
WhatsApp Facebook X Telegram
Shivamogga Traffic Police Gift Free Helmets 
Shivamogga Traffic Police Gift Free Helmets 

ಶಿವಮೊಗ್ಗ: ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸರು ಎಂದರೆ ಕೇವಲ ದಂಡ ವಸೂಲಿ ಮಾಡುತ್ತಾರೆ ಅಥವಾ ಪ್ರಚಾರಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವ ಆರೋಪಗಳ ನಡುವೆ, ಶಿವಮೊಗ್ಗದ ಸಂಚಾರಿ ಪೊಲೀಸರು ಇಂದು ಅತ್ಯಂತ ಅರ್ಥಪೂರ್ಣ ಅಭಿಯಾನವೊಂದಕ್ಕೆ ಸಾಕ್ಷಿಯಾಗಿದ್ದಾರೆ.

Shivamogga Traffic Police Gift Free Helmets 
Shivamogga Traffic Police Gift Free Helmets

ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಕೇಂದ್ರ ಕಾರಾಗೃಹದ ಸಜಾ ಬಂಧಿ ಸಾವು 

ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ನಗರದ ಎ.ಎ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಬಂದ ವಾಹನ ಸವಾರರನ್ನು ತಡೆದು, ಅವರಿಗೆ ದಂಡ ಹಾಕುವ ಬದಲು ಉಚಿತವಾಗಿ ಹೆಲ್ಮೆಟ್ ವಿತರಿಸಿದ್ದಾರೆ.ಈ ಅಭಿಯಾನದ ವೇಳೆ ಹೊಸ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವಕರನ್ನು ತಡೆದ ಪೊಲೀಸರು, ಅಪಘಾತದ ಸಮಯದಲ್ಲಿ ಹೆಲ್ಮೆಟ್ ಹೇಗೆ ಜೀವ ಉಳಿಸುತ್ತದೆ ಎಂಬ ಬಗ್ಗೆ ಅರಿವು ಮೂಡಿಸಿದರು.ನಂತರ ಅವರಿಗೆ ಪೊಲೀಸ್ ಇಲಾಖೆಯ ವತಿಯಿಂದಲೇ ಹೊಸ ಹೆಲ್ಮೆಟ್‌ಗಳನ್ನು ತೊಡಿಸಿ ಸುರಕ್ಷಿತ ಪ್ರಯಾಣಕ್ಕೆ ಹಾರೈಸಿದರು. 

Shivamogga Traffic Police Gift Free Helmets 

Shivamogga Traffic Police Gift Free Helmets 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor