Key Health Schemes : ಬಹಳಷ್ಟು ಜನರಿಗೆ ಸರ್ಕಾರದಿಂದಲೇ ಸಿಗುವ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಆರೋಗ್ಯ ಯೋಜನೆಗಳ ಮಾಹಿತಿಯನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಇದಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಉಚಿತ ಕಣ್ಣಿನ ಚಿಕಿತ್ಸೆಯವರೆಗೆ ಲಭ್ಯವಿರುವ ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ.
ಶಿವಮೊಗ್ಗ ರೈಲುಗಳ ಹೊಸ ಟೈಮ್ ಟೇಬಲ್: ಯಾವ ರೈಲು ಎಷ್ಟು ಗಂಟೆಗೆ ಹೊರಡುತ್ತೆ?
ಹೃದಯದ ಆರೋಗ್ಯಕ್ಕೆ ‘STEMI’ ಮತ್ತು ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ
ಹೃದಯಾಘಾತವಾದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಎಲ್ಲರಿಗೂ ಈ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟಸಾಧ್ಯ ಹಾಗಾಗಿ ಸರ್ಕಾರ ಪುನೀತ್ ರಾಜಕುಮಾರ್ ಹೆಸರಲ್ಲಿ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಹಬ್ ಸ್ಟೋಕ್ ಆಂಡ್ ಸ್ಟೋಕ್ ಮಾದರಿಯಲ್ಲಿ ಕೆಲಸ ಮಾಡುವ ಈ ಯೋಜನೆಯ ಅಡಿಯಲ್ಲಿ ತುರ್ತು ಪರಿಸ್ಥಿತಿಯಲ್ಲ ಹೃದಯಾಘಾತದ ಲಕ್ಷಣಗಳನ್ನು ಪರಿಶೀಲಿಸಲು ತಾಲ್ಲೂಕು ಮಟ್ಟದಲ್ಲಿ ECG ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ AI ತಂತ್ರಜ್ಞಾನದ ಮೂಲಕ ತೀವ್ರ ಹೃದಯಾಘಾತ (STEMI) ಪ್ರಕರಣಗಳನ್ನು ಗುರುತಿಸಿ, ತಕ್ಷಣವೇ ‘ಟೆನೆಕ್ಟೇಪ್ಲೇಸ್’ ಎಂಬ ಉಚಿತ ಇಂಜೆಕ್ಷನ್ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಯಂತಹ (ಹಬ್) ಕೇಂದ್ರಗಳಿಗೆ ಕಳುಹಿಸುತ್ತಾಗುತ್ತದೆ. ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದೊಂದಿಗೆ 15 ಜಿಲ್ಲೆಗಳಲ್ಲಿ STEMI ಯೋಜನೆ ಅಳವಡಿಸಲಾಗಿದ್ದು, ಉಳಿದ 16 ಜಿಲ್ಲೆಗಳಲ್ಲಿ ಡಾ| ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಉಚಿತ ಡಯಾಲಿಸಿಸ್ ಸೇವೆ
ರಾಜ್ಯ ಸರ್ಕಾರ ಮತ್ತು ಕೇಂದ್ರದ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ (PMNDP) ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಗೆ ಕೇಂದ್ರವು NHM ಮೂಲಕ ನೆರವು ನೀಡುತ್ತದೆ. ಇತ್ತೀಚಿನ ಮಾಹಿತಿ ಪ್ಪ್ರಕಾರ, ರಾಜ್ಯದಲ್ಲಿ ಡಯಾಲಿಸಿಸ್ ಕೇಂದ್ರಗಳ ಸಂಖ್ಯೆಯನ್ನು 168 ರಿಂದ 219ಕ್ಕೆ ಏರಿಸಲಾಗಿದ್ದು, ಏಕ ಬಳಕೆಯ (Single Use) ಡಯಾಲೈಸರ್ ಬಳಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ 541 ಯಂತ್ರಗಳ ಮೂಲಕ ಸಾವಿರಾರು ರೋಗಿಗಳಿಗೆ ಉಚಿತವಾಗಿ ಲಕ್ಷಾಂತರ ಡಯಾಲಿಸಿಸ್ ಸೈಕಲ್‌ಗಳ ಸೇವೆಯನ್ನು ನೀಡಲಾಗುತ್ತಿದೆ
108 ಆರೋಗ್ಯ ಕವಚ – ತುರ್ತು ಸೇವೆ (EMS)
ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಸಲುವಾಗಿ 108 ಆಂಬುಲೆನ್ಸ್ ಸೇವೆಗಳನ್ನ ಸರ್ಕಾರದಿಂದಲೇ ಒದಗಿಸಲಾಗುತ್ತಿದೆ. ಈ ಯೋಜನೆಗೆ ಆರೋಗ್ಯ ಕವಚಎಂದು ಹೆಸರಿಡಲಾಗಿದೆ. ಈ ಆಂಬುಲೆನ್ಸ್ಗಳಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಬೇಕಿರುವ ವ್ಯವಸ್ಥೆಯ ಜೊತೆಗೆ ಲೈಫ್ ಸಪೋರ್ಟ್ ಸ್ಟಿಸ್ಟಮ್ಗಳನ್ನು ಅಳವಡಿಸಲಾಗಿದೆ. ‘
ಜೀವಸಾರ್ಥಕತೆ (SOTTO)
SOTTO (State Organ and Tissue Transplant Organisation) ಯೋಜನೆಯ ಅಡಿಯಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಪಟ್ಟಿ ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲದೆ ಅಂಗದಾನದ ಬಗ್ಗೆ ಜಾಗೃತಿ ಮೂಡಿಸುವುದು, ಅಂಗದಾನದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಮತ್ತು ಅಂಗಗಳ ನ್ಯಾಯಯುತ ಹಂಚಿಕೆಯ ವ್ಯವಸ್ಥೆಯನ್ನು ನಿರ್ವಹಿಸುದು ಈ ಯೋಜನೆಯ ಗುರಿಯಾಗಿದೆ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಯ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆಯಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಅಂಗಾಂಗ ಕಸಿ ಮಾಡಲಾಗುತ್ತಿದ್ದು, ಈ ಸಾಧನೆಗಾಗಿ ಕೇಂದ್ರ ಸರ್ಕಾರದಿಂದ ರಾಜ್ಯವು ಪ್ರಶಸ್ತಿಯನ್ನೂ ಪಡೆದಿದೆ.

ಮೆದುಳಿನ ಆರೋಗ್ಯಕ್ಕೆ ‘KABHI’
ನಿಮಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (KaBHI) ಮೂಲಕ ನರ ದೌರ್ಬಲ್ಯದಿಂದ ಬಳಲುತ್ತಿರುವ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಈ ಸೇವೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ.

ಆಶಾಕಿರಣ – ಅಂಧತ್ವ ಮುಕ್ತ ಕರ್ನಾಟಕ
ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆಗಾಗಿ ಈ ಯೋಜನೆ ಜಾರಿಯಲ್ಲಿದೆ. ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಯಶಸ್ವಿಯಾದ ನಂತರ, ಇತರೆ ಜಿಲ್ಲೆಗಳಿಗೂ ಇದನ್ನು ನಿರ್ಧರಿಸಲಾಗಿದೆ.
ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (SAST
ಈ ಯೋಜನೆಯಡಿ ಸುಮಾರು 1650 ಚಿಕಿತ್ಸಾ ವಿಧಾನಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಈ ಯೋಜನೆಯಡಿ 3498 ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ . ಫಲಾನುಭವಿಗಳಿಗೆ ಉಚಿತ PVC Co-branded ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಮತ್ತು ರಾಜ್ಯ ಸರ್ಕಾರದ ‘ಆರೋಗ್ಯ ಕರ್ನಾಟಕ’ ಯೋಜನೆಗಳನ್ನು ಸಂಯೋಜಿಸಿ ಇದನ್ನು ರೂಪಸಿಲಾಗಿದೆ. ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ (BPL) ಕಾರ್ಡ್ ಹೊಂದಿರುವ ಕುಟುಂಬಗಳು ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಎಪಿಎಲ್ (APL) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚದ ಶೇ. 30 ರಷ್ಟು ರಿಯಾಯಿತಿ ಸಿಗಲಿದ್ದು, ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಸೌಲಭ್ಯ ದೊರೆಯುತ್ತದೆ . ಯೋಜನೆಯ ಅಡಿಯಲ್ಲಿ ರೋಗಿಯು ಮೊದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ, ಆಸ್ಪತ್ರೆಯವರು ‘ರೆಫರಲ್’ (Referral) ಪತ್ರವನ್ನು ನೀಡುತ್ತಾರೆ. ಈ ಪತ್ರದೊಂದಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ತುರ್ತು ಸಂದರ್ಭಗಳಲ್ಲಿ (Emergency) ರೆಫರಲ್ ಇಲ್ಲದೆಯೇ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು , ಅಗತ್ಯವಿರುವ ದಾಖಲೆಗಳೆಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ (ಬಿಪಿಎಲ್ ಅಥವಾ ಎಪಿಎಲ್), AB-PMJAY-ARK ಕಾರ್ಡ್ (ಆಯುಷ್ಮಾನ್ ಕಾರ್ಡ್)
ಶಿವಮೊಗ್ಗ ರೈಲುಗಳ ಹೊಸ ಟೈಮ್ ಟೇಬಲ್: ಯಾವ ರೈಲು ಎಷ್ಟು ಗಂಟೆಗೆ ಹೊರಡುತ್ತೆ?
ಆರೋಗ್ಯ ಇಲಾಖೆಯಿಂದ ಸಿಗುವ ಪ್ರಮುಖ ಆರೋಗ್ಯ ಯೋಜನೆಗಳು: ಸಂಪೂರ್ಣ ವಿವರ ಇಲ್ಲಿದೆ Key Health Schemes Provided by the Health Department: Complete Details, ಆರೋಗ್ಯ ಇಲಾಖೆ ಯೋಜನೆಗಳು | Key Health Schemes | karnataka
