ಶಿವಮೊಗ್ಗ ರೈಲುಗಳ ಹೊಸ ಟೈಮ್ ಟೇಬಲ್: ಯಾವ ರೈಲು ಎಷ್ಟು ಗಂಟೆಗೆ ಹೊರಡುತ್ತೆ?

ಹಂಚಿಕೊಳ್ಳಿ
WhatsApp Facebook X Telegram
Yesvantpur Talguppa SWR Special Train Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train
Yesvantpur Talguppa SWR Special Train Shimoga Talaguppa Train Cancelled TShivamogga Train Timings alaguppa-Yeshvantpur train

ಶಿವಮೊಗ್ಗ | ನೈಋತ್ಯ ರೈಲ್ವೆ ವಿಭಾಗವು ತನ್ನ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಮಹತ್ವದ ಮಾರ್ಪಾಡು ಮಾಡಿದ್ದು, ಹೊಸ ವರ್ಷದ ಆರಂಭದಿಂದಲೇ ಅಂದರೆ ಜನವರಿ 1, 2026 ರಿಂದ ಹೊಸ ಸಮಯ ಜಾರಿಗೆ ಬರಲಿದೆ. ಶಿವಮೊಗ್ಗ ನಗರದಿಂದ ಬೆಂಗಳೂರು, ಚೆನ್ನೈ ಮತ್ತು ಮೈಸೂರು ಮಾರ್ಗವಾಗಿ ಚಲಿಸುವ ರೈಲುಗಳ ಟೈಮಿಂಗ್ಸ್‌ನಲ್ಲಿ ವ್ಯತ್ಯಾಸವಾಗಿದ್ದು, ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸುವ ಮುನ್ನ ಈ ಬದಲಾವಣೆಗಳನ್ನು ಗಮನಿಸುವುದು ಅವಶ್ಯಕವಾಗಿದೆ.

Shivamogga Train Timings 2026 New Schedule

ತಾಳಗುಪ್ಪ- ಶಿವಮೊಗ್ಗ-ಬೆಂಗಳೂರು ರೈಲುಗಳ ವೇಳಾಪಟ್ಟಿ ಬದಲು! ಯಾವ್ಯಾವ ಸ್ಟೇಷನ್​ಗೆ ಎಷ್ಟು ಬೇಗ ಬರುತ್ತವೆ ತಿಳಿಯಿರಿ 

ಶಿವಮೊಗ್ಗ ಟೌನ್‌ನಿಂದ ಯಶವಂತಪುರಕ್ಕೆ ನಿತ್ಯ ಸಂಚರಿಸುವ ರೈಲು ಸಂಖ್ಯೆ 20690 (16580) ಇನ್ಮುಂದೆ ಮಧ್ಯಾಹ್ನ 3.45ರ ಬದಲಾಗಿ ಮಧ್ಯಾಹ್ನ 3.50ಕ್ಕೆ ಹೊರಡಲಿದೆ. ಈ ರೈಲು ಭದ್ರಾವತಿಗೆ ಸಂಜೆ 4.08ಕ್ಕೆ ಹಾಗೂ ತರೀಕರೆಗೆ ಸಂಜೆ 4.28ಕ್ಕೆ ತಲುಪಲಿದೆ. ಅದೇ ರೀತಿ ಪ್ರತಿ ಶನಿವಾರ ಸಂಚರಿಸುವ ರೈಲು ಸಂಖ್ಯೆ 12692 ಶಿವಮೊಗ್ಗ-ಚೆನ್ನೈ ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಸುಮಾರು 25 ನಿಮಿಷಗಳ ಬದಲಾವಣೆ ಮಾಡಲಾಗಿದ್ದು, ಇದು ಜನವರಿ 3 ರಿಂದ ಸಂಜೆ 5.15ರ ಬದಲಾಗಿ ಸಂಜೆ 5.40ಕ್ಕೆ ಶಿವಮೊಗ್ಗದಿಂದ ಪ್ರಯಾಣ ಆರಂಭಿಸಲಿದೆ. ಈ ರೈಲು ಭದ್ರಾವತಿಗೆ ಸಂಜೆ 5.58ಕ್ಕೆ, ತರೀಕರೆಗೆ ಸಂಜೆ 6.18ಕ್ಕೆ, ಬಿರೂರಿಗೆ ಸಂಜೆ 6.43ಕ್ಕೆ ಹಾಗೂ ಅರಸೀಕೆರೆಗೆ ರಾತ್ರಿ 7.20ಕ್ಕೆ ತಲುಪಲಿದೆ. 

Shivamogga Train Timings 2026 New Schedule

ದಿನನಿತ್ಯದ ರೈಲು ಸಂಖ್ಯೆ 16226 ಶಿವಮೊಗ್ಗ-ಮೈಸೂರು ಎಕ್ಸ್‌ಪ್ರೆಸ್ ಕೂಡ ಸಮಯವನ್ನು ಬದಲಿಸಿಕೊಂಡಿದ್ದು, ಬೆಳಿಗ್ಗೆ 11.15ರ ಬದಲಾಗಿ ಬೆಳಿಗ್ಗೆ 11.25ಕ್ಕೆ ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದೆ. ಈ ರೈಲು ಶಿವಮೊಗ್ಗಕ್ಕೆ ಬೆಳಿಗ್ಗೆ 11.30ಕ್ಕೆ, ಭದ್ರಾವತಿಗೆ ಬೆಳಿಗ್ಗೆ 11.45ಕ್ಕೆ, ತರೀಕರೆಗೆ ಮಧ್ಯಾಹ್ನ 12.07ಕ್ಕೆ ಹಾಗೂ ಬಿರೂರಿಗೆ ಮಧ್ಯಾಹ್ನ 12.33ಕ್ಕೆ ಆಗಮಿಸಲಿದೆ. ಕಡೂರು ಮತ್ತು ದೇವನೂರು ನಿಲ್ದಾಣಗಳಿಗೆ ಕ್ರಮವಾಗಿ ಮಧ್ಯಾಹ್ನ 12.43 ಹಾಗೂ ಮಧ್ಯಾಹ್ನ 1.00 ಗಂಟೆಗೆ ತಲುಪಿ, ಅರಸೀಕೆರೆಗೆ ಮಧ್ಯಾಹ್ನ 1.25ಕ್ಕೆ ನಿಗದಿತ ಸಮಯಕ್ಕೆ ಬರಲಿದೆ. ಇದರೊಂದಿಗೆ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ (16228) ರೈಲು ಬಿರೂರಿಗೆ ಮಧ್ಯರಾತ್ರಿ 12.18ಕ್ಕೆ ಹಾಗೂ ತಿಪಟೂರಿಗೆ ರಾತ್ರಿ 1.23ಕ್ಕೆ ಆಗಮಿಸಲಿದೆ.

ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ (16227) ರೈಲು ಮೈಸೂರಿನಿಂದ ರಾತ್ರಿ 7.30ರ ಬದಲಾಗಿ 7.40ಕ್ಕೆ ಹೊರಡಲಿದ್ದು, ನಾಗನಹಳ್ಳಿಗೆ 7.51ಕ್ಕೆ, ಪಾಂಡವಪುರಕ್ಕೆ ರಾತ್ರಿ 8.02ಕ್ಕೆ ಹಾಗೂ ಎಲಿಯೂರಿಗೆ ರಾತ್ರಿ 8.19ಕ್ಕೆ ತಲುಪಲಿದೆ. ಇದಲ್ಲದೆ, ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್ (16222) ರೈಲು ಹಾಸನಕ್ಕೆ ಸಂಜೆ 4.50ಕ್ಕೆ ಹಾಗೂ ಬಾಗೇಶಪುರಕ್ಕೆ ಸಂಜೆ 5.11ಕ್ಕೆ ಆಗಮಿಸಲಿದೆ. ಹೊಸ ವರ್ಷದ ಪ್ರಯಾಣದಲ್ಲಿ ಯಾವುದೇ ಗೊಂದಲಗಳಾಗದಂತೆ ಪ್ರಯಾಣಿಕರು ಈ ಪರಿಷ್ಕೃತ ವೇಳಾಪಟ್ಟಿಯನ್ನು ಅನುಸರಿಸಿ ಸಹಕರಿಸಲು ರೈಲ್ವೆ ಇಲಾಖೆ ಮನವಿ ಮಾಡಿದೆ.

Shivamogga Train Timings 2026 New Schedule 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor