ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾ ಅರ್ಜಿ ಆಹ್ವಾನ

Malenadu Today

KARNATAKA NEWS/ ONLINE / Malenadu today/ Apr 26, 2023 GOOGLE NEWS


ಶಿವಮೊಗ್ಗ   ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿಗೆ ಉಚಿತ ಪ್ರವೇಶಾತಿಗಾಗಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  

ಅರ್ಹತೆ ಏನು?

ಅಭ್ಯರ್ಥಿಯು 09 ರಿಂದ 13 ವಯೋಮಾನದವರಾಗಿದ್ದು, 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  

ವಿದ್ಯಾರ್ಥಿಯ ಇತ್ತಿಚಿನ ಭಾವಚಿತ್ರ,  ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಶಾಲಾ ಘೋಷಣಾ ಪ್ರಮಾಣ ಪತ್ರದೊಂದಿಗೆ ಆಯಾ ಶಾಲೆಯಲ್ಲಿ ಅರ್ಜಿ ಸಲ್ಲಿಸುವುದು. 

ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶೇ75% ರಷ್ಟು ದಾಖಲಾತಿ, ಇತರೆ ಸಮುದಾಯದ ಮಕ್ಕಳಿಗೆ ಶೇ.25% ರಷ್ಟು ದಾಖಲಾತಿಗಾಗಿ ಹಾಗೂ ಬಾಲಕಿಯರಿಗಾಗಿ ಶೇ.50% ಸ್ಥಾನಗಳನ್ನು ಮೀಸಲಿರಿಸಲಾಗಿದೆ. 

ನುರಿತ ಅನುಭವಿ ಶಿಕ್ಷಕರಿಂದ ಆಂಗ್ಲ ಮಾಧ್ಯಮದಲ್ಲಿ ಭೋಧನೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೊಟ್ ಪುಸ್ತಕ ಲೇಖನ ಸಾಮಗ್ರಿಗಳನ್ನ ನೀಡಲಾಗುವುದು. 

ಶಾಲಾ ಬ್ಯಾಗ್, ಎರಡು ಜೊತೆ ಉಚಿತ ಸಮವಸ್ತ್ರ, ಎರಡು ಜೊತೆ ಶೂ ಮತ್ತು ಸಾಕ್ಸ್, ಉಚಿತ ಬಿಸಿ ಊಟನ ವ್ಯವಸ್ಥೆಯಿದೆ

ಉಚಿತ ಕಂಪ್ಯೂಟರ್ ತರಬೇತಿ, ಸ್ಮಾರ್ಟ್ ಕ್ಲಾಸ್, ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೌಲಭ್ಯ, ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯ, ವಿದ್ಯಾರ್ಥಿಗಳ ದೈಹಿಕ ವಿಕಾಸಕ್ಕಾಗಿ ಕ್ರೀಡಾ ಚಟುವಟಿಕೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಸೌಲಭ್ಯಗಳು ನೀಡಲಾಗುವುದು. 

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 

ಸಂಪರ್ಕಿಸುವುದು ಹೇಗೆ?

ಮೌಲಾನಾ ಅಜಾದ್ ಮಾದರಿ ಶಾಲೆ ಲಷ್ಕರ್ ಮೊಹಲ್ಲಾ, ಶಿವಮೊಗ್ಗ-7676621339, 

ಮೌಲಾನಾ ಅಜಾದ್ ಮಾದರಿಶಾಲೆ ಬಸವೇಶ್ವರ ಸರ್ಕಲ್ ಓಲ್ಡ್ ಟೌನ್, ಭದ್ರಾವತಿ-9844081633, 

ಮೌಲಾನಾ ಅಜಾದ್ ಮಾದರಿ ಶಾಲೆ ಗುರುಭವನ್ ಹತ್ತಿರ, ಶಿಕಾರಿಪುರ-9886657635, ಮೌಲಾನಾ ಅಜಾದ್ ಮಾದರಿ ಶಾಲೆ ಮಟದಗದ್ದೆ, ಶಿರಾಳಕೊಪ್ಪ-9986254703, 

ಮೌಲಾನಾ ಅಜಾದ್ ಮಾದರಿ ಶಾಲೆ ಪ್ರೈವೇಟ್ ಬಸ್ ಸ್ಟಾಂಡ್ ಹತ್ತಿರ, ಸೊರಬ- 9743031530, 

ಮೌಲಾನಾ ಅಜಾದ್ ಮಾದರಿ ಶಾಲೆ ಗಾಂಧಿನಗರ, ಸಾಗರ-9449946429. 

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಈ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಿ: 15/05/2023ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಉಚಿತವಾಗಿ ಅರ್ಜಿ ಪಡೆಯಲು ಹಾಗೂ ಮಾಹಿತಿಗಾಗಿ ಜಿಲ್ಲಾ ಮಾಹಿತಿ ಕೇಂದ್ರ 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಾಲ್ ರಸ್ತೆ, ದುರ್ಗಿಗುಡಿ ಶಿವಮೊಗ್ಗ-7676888388,

ತಾಲ್ಲೂಕು ಮಾಹಿತಿ ಕೇಂದ್ರ ಇಂದಿರನಗರ, ಸೇಂಟ್ ಮೇರೀಸ್ ಸ್ಕೂಲ್ ಹತ್ತಿರ ತೀರ್ಥಹಳ್ಳಿ-8861982835, 

ತಾಲ್ಲೂಕು ಮಾಹಿತಿ ಕೇಂದ್ರ ತಾಲ್ಲೂಕು ಪಂಚಾಯತ್ ಹತ್ತಿರ ಭದ್ರಾವತಿ-9538853680, 

ತಾಲ್ಲೂಕು ಮಾಹಿತಿ ಕೇಂದ್ರ ದೇವರಾಜ್ ಅರಸ್ ಭವನ್ ಮರುರ್ ರಸ್ತೆ ಸೊರಬ-9513815513, 

ತಾಲ್ಲೂಕು ಮಾಹಿತಿ ಕೇಂದ್ರ ತಾಲ್ಲೂಕು ಪಂಚಾಯತ್ 2ನೇ ಮಹಡಿ ಶಿಕಾರಿಪುರ- 7829136724, 

ತಾಲ್ಲೂಕು ಮಾಹಿತಿ ಕೇಂದ್ರ ತಾಲ್ಲೂಕು ಕಛೇರಿ ಹಳೆ ಡಿ.ಸಿ ಕಛೇರಿ ಹೊಸನಗರ-9008447029, 

ತಾಲ್ಲೂಕು ಮಾಹಿತಿ ಕೇಂದ್ರ ಇಂದಿರನಗರ ಹತ್ತಿರ ಎಸ್,ಎನ್ ನಗರ್ ಸಾಗರ-7338222907 ಗಳನ್ನು ಸಂಪರ್ಕಿಸುವುದು. 

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ.    1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಾಲ್ ರಸ್ತೆ, ದುರ್ಗಿಗುಡಿ ದೂರವಾಣಿ:(08182) 220206, ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು, ಶಿವಮೊಗ್ಗ   ತಾಲ್ಲೂಕು  ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು, ಸಾಗರ 7795315517/7760822213 / 9900132234 ಸಂಪರ್ಕಿಸಬಹುದಾಗಿದೆ. 

——————

Malenadutoday.com Social media

 

Share This Article