KARNATAKA NEWS/ ONLINE / Malenadu today/ Apr 25, 2023 GOOGLE NEWS
ಸಾಗರ/ ಶಿವಮೊಗ್ಗ ಇಲ್ಲಿನ ತುಮರಿ ಸಮೀಪದಲ್ಲಿ ಸಿಗುವ ಶರಾವತಿ ಹಿನ್ನೀರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಕಾರ್ಗಲ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ
ಸುಮಾರು 30 ವರ್ಷದ ಮಹಿಳೆಯ ಶವವೊಂದು ಇಲ್ಲಿನ ಕಳಸವಳ್ಳಿ ಬಳಿ ಪತ್ತೆಯಾಗಿದೆ. ಶವ ಗುರುತು ಸಿಗದಷ್ಟು ಕೊಳೆತು ಹೋಗಿದೆ. ಹೀಗಾಗಿ ಮೃತರ ಪರಿಚಯ ಗೊತ್ತಾಗಿಲ್ಲ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಕಾರ್ಗಲ್ ಪೊಲೀಸರು ಬಂದು ಮಹಜರ್ ಮುಗಿಸಿ, ಶವವನ್ನು ಸಾಗರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ
ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್
ನಿದಿಗಾಗಿ ದೇವಿಯ ವಿಗ್ರಹ ಕಿತ್ತ ದುಷ್ಕರ್ಮಿಗಳು
ಆನಂದಪುರ/ ಸಾಗರ ಇಲ್ಲಿನ ತ್ಯಾಗರ್ತಿ ಬಳಿಯಲ್ಲಿ ಇರುವ ಹಳೆಯದಾದ ಲಕ್ಷ್ಮೀ ದೇವರ ವಿಗ್ರಹವನ್ನು ಕಿತ್ತು ದುಷ್ಕರ್ಮಿಗಳು ನಿಧಿ ಶೋಧ ನಡೆಸಿದ್ದಾರೆ.
ವಿಗ್ರಹದ ಅಡಿಯಲ್ಲಿ ನಿದಿ ಇದೆ ಎಂದು ಭಾವಿಸಿ, ವಿಗ್ರಹವನ್ನು ತೆಗೆದು ಅದರ ಅಡಿಯಲ್ಲಿ ಸುಮಾರು 10 ಅಡಿಯಷ್ಟು ಹೊಂಡ ತೋಡಲಾಗಿದೆ. ವಾರಕ್ಕೊಮ್ಮೆ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತಿದ್ದು, ಸ್ಥಳಕ್ಕೆ ಬಂದಾಗ ಘಟನೆ ಗೊತ್ತಾಗಿದೆ.
ಸದ್ಯ ಘಟನೆ ಸಂಬಂಧ ಆನಂದಪುರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸ್ತಿದ್ದಾರೆ.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
Malenadutoday.com Social media
