Feb 11, 2024 | ಮಾಜಿ ಡಿಸಿಎಂ ಹಾಗೂ ಹಾಲಿ ಡಿಸಿಎಂ ನಡುವಿನ ವಾಕ್ಸಮರ ಜೋರಾಗಿ ಬುಸುಗುಟ್ಟುತ್ತಿದೆ. ಅದರಲ್ಲಿಯು ಸೆಟ್ಲೆಮೆಂಟ್ ಪದ ಸಿನಿಮಾ ಡೈಲಾಗ್ನ ರೀತಿಯಲ್ಲಿ ವಿನಿಮಯವಾಗುತ್ತಿದೆ.
ಡಿಕೆ ಶಿವಕುಮಾರ್ ಮತ್ತು ಕೆ.ಎಸ್.ಈಶ್ವರಪ್ಪ
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರವರು ದಾವಣಗೆರೆಯಲ್ಲಿ ಆಡಿದ ಮಾತಿನ ಕುರಿತಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸುತ್ತಾ ಸೆಟ್ಲೆಮೆಂಟ್ ಎಂಬ ಪದ ಬಳಸಿದ್ದರು. ಈಶ್ವರಪ್ಪನವರು ಸದನದಲ್ಲಿ ನಮ್ಮ ತಂದೆ ಯನ್ನು ನೆನಪಿಸಿಕೊಂಡರು. ಅದಕ್ಕಾಗಿ ಈಗಾಗಲೇ ಒಂದು ಸುತ್ತಿನ ಸೆಟ್ಲಮೆಂಟ್ ಆಗಿದೆ. ಡಿ.ಕೆ. ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ ಬಿಡಿ. ಡಿ.ಕೆ. ಸುರೇಶ್ ಮೈಯಲ್ಲಿರುವುದು ಈಶ್ವರಪ್ಪನ ಗುಂಡಿನ ಬೆದರಿಕೆಗೆ ಹೆದರುವ ರಕ್ತವಲ್ಲ’ ಎಂದಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ, ದೇಶ ವಿಭಜನೆಯ ಮಾತುಗಳನ್ನು ಆಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ನೀಡಿದ್ದ ಹೇಳಿಕೆ ಕುರಿತು ಡಿಕೆ ಶಿವಕುಮಾರ್ ಈ ಮಾತನ್ನ ಹೇಳಿದ್ದರು.
ನಮ್ಮ ಸುದ್ದಿಗೆ ಬಂದವರಿಗೆಲ್ಲಾ ಒಂದೊಂದಾಗಿ ಸೆಟ್ಲಮೆಂಟ್ ಆಗಿದೆ. ಈಶ್ವರಪ್ಪರಿಗೂ ಈಗಾಗಲೇ ಒಂದು ಸುತ್ತಿನ ಸೆಟ್ಲ ಮೆಂಟ್ ಆಗಿದೆ. ಈಗ ಈಶ್ವರಪ್ಪ ಎಲ್ಲಿದ್ದಾರೆ ಎಂದು ಗೊತ್ತಿದೆಯೆಲ್ಲಾ? ಎಂದಿದ್ದರು. ಅಲ್ಲದೆ ಕೆಂಪೇಗೌಡರ ಇತಿಹಾಸ ಗೊತ್ತಿದೆ ಯಲ್ಲವೇ? ಬೆಂಗಳೂರಿನಲ್ಲಿ ನಮ್ಮದೇ ಆದ ಇತಿಹಾಸ ಇದೆ. ನಾವು ರಾಜಕಾರಣ ಮಾಡಬೇಕಾದವರು ನಾವೇನು ಕಿವಿಮೇಲೆ
ಹೂವು ಇಟ್ಟುಕೊಂಡುಬಂದಿಲ್ಲ. ಎಲ್ಲದಕ್ಕೂ ಸೆಟ್ಲಮೆಂಟ್ ಮಾಡುತ್ತೇವೆ ಎಂದಿದ್ದರು.
ಸದ್ಯ ಈ ಮಾತಿಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ ಮೈಸೂರಿನಲ್ಲಿ ಮಾತನಾಡಿದ ಈಶ್ವರಪ್ಪ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಇಬ್ಬರು ಗೂಂಡಾಗಳು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಸಿನಿಮಾ ಸ್ಟೈಲ್‍ನಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.
ಡಿಕೆಶಿ ಅವರ ಅರ್ಧ ಜೀವನ ತಿಹಾರ್ ಜೈಲಿನಲ್ಲಿ ಸೆಟಲ್‍ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟಲ್‍ಮೆಂಟ್ ಆಗುತ್ತೆ. ನೋಡ್ತಾ ಇರಿ, ಎಂದಿದ್ದಾರೆ.
ನಾಡಪ್ರಭು ಕೆಂಪೇಗೌಡ ಅವರು ಡಿಕೆ ಶಿವಕುಮಾರ್ ಅವರ ಆಸ್ತಿಯಲ್ಲ. ತಮ್ಮನ್ನು ರಾಜ್ಯ ಕಟ್ಟಿದ ವ್ಯಕ್ತಿಯ ಜೊತೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದ ಈಶ್ವರಪ್ಪ, ರಾಷ್ಟ್ರದ್ರೋಹಿ ಹೇಳಿಕೆಗೆ ಡಿಕೆ ಸುರೇಶ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ರು.
