ಶರಾವತಿ, ವರಾಹಿಗೆ ಪಂಪ್​, ತುಂಗೆಗೆ ಸೋಲಾರ್! ಪವರ್ ಮಿನಿಸ್ಟರ್​ಗೆ ಮಲೆನಾಡು ಜನಪ್ರತಿನಿಧಿಗಳು ಇಟ್ಟ ಬೇಡಿಕೆಗಳೇನು ಓದಿ!

Shivamogga | Feb 3, 2024 |  ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಇಂಧನ ಸಚಿವ ಕೆ.ಜೆ ಜಾರ್ಜ್ ಮೆಸ್ಕಾಂ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಮೊದಲು ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಚಿವರು ಮಾತನಾಡಿದರು. ಪ್ರಸ್ತುತ ರಾಜ್ಯದಲ್ಲಿ ಮಳೆಯ ಕೊರತೆಯಿಂದ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಸೋಲಾರ್ ಮತ್ತು ವಿಂಡ್ ಎನೆರ್ಜಿ ಸೇರಿದಂತೆ ಗ್ರೀನ್ ಹೈಡ್ರೋಜನ್ ಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಹೇಳಿದರು. 

ವರಾಹಿ, ಶರಾವತಿಗೆ ಪಂಪ್​ ಸ್ಟೋರೇಜ್​

ಇಂತಹ ಸಂದಿಗ್ಧ ಪುರಿಸ್ಥಿತಿಯಲ್ಲೂ ವಿದ್ಯುತ್ ಸಮಸ್ಯೆಯನ್ನು ಸರ್ಕಾರ ನೀಗಿಸಿದೆ,. ಬರುವಂತ ದಿನಗಳಲ್ಲಿ ಓಪನ್ ಮಾರ್ಕೇಟ್ ನಲ್ಲಿ ವಿದ್ಯುತ್ ಖರೀದಿ ಮಾಡಲಾಗುವುದು. ರಾಜ್ಯದಲ್ಲಿ ವಿದ್ಯುತ್ ಉತ್ಪಾಧಿಸುವವರು ಹೊರ ರಾಜ್ಯಗಳಿಗೆ ವಿದ್ಯುತ್ ಕೊಡದಂತೆ ಸರ್ಕಾರ ಸೂಚನೆ ನೀಡಿದೆ. ವಿದ್ಯುತ್ ಸಮಸ್ಯೆ ನೀಗಿಸಲು ಎಲ್ಲಾ ಸಬ್ ಸ್ಟೇಷನ್ ಗಳಲ್ಲೂ ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಜಾರ್ಜ್ ಹೇಳಿದರು. ವರಾಹಿ ಮತ್ತು ಶರಾವತಿ ಗೆ ಪಂಪ್ ಸ್ಟೋರೇಜ್ ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ.ಬಳಕೆಯಾದ ನೀರನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು

 

 ಮಾಜಿ ಸಚಿವ ಆರಗ ಜ್ಞಾನೇಂದ್ರ 

ವಿದ್ಯುತ್ ಉತ್ಪಾಧಿಸುವ ಪ್ರದೇಶದಲ್ಲಿದ್ದರೂ ಮಲೆನಾಡಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಮಾಜಿ ಗೃಹಮಂತ್ರಿ ಆರಗಾ ಜ್ಞಾನೇಂದ್ರ. ಇಂಧನ ಸಚಿವರ ಗಮನ ಸೆಳೆದರು. ತೀರ್ಥಹಳ್ಳಿಯಲ್ಲಿ ವಿದ್ಯುತ್ ಸ್ಟೇಷನ್ ಮಾಡಬೇಕು. ಅದಕ್ಕಾಗಿ ಹತ್ತು ಎಕರೆ ಜಾಗವನ್ನು ಬೆಜ್ಜವಳ್ಳಿ ಸಬ್ ಸ್ಷೇಷನ್ ಪಕ್ಕದಲ್ಲಿಯೇ ಗುರುತಿಸಲಾಗಿತ್ತು. ಆದರೆ ಆ ಜಾಗವನ್ನು ಅರಣ್ಯ ಇಲಾಖೆ ತಮಗೆ ಸೇರಿದ್ದು ಎಂದು ಸಬೂಬು ಹೇಳುತ್ತಿದೆ. ಕೆಪಿಟಿಸಿಎಲ್ ಗೆ ಸೇರಿದ ಜಾಗವನ್ನು ಅರಣ್ಯ ಇಲಾಖೆಗೆ ನೀಡಿ , ಅರಣ್ಯ ಇಲಾಖೆಯ ಜಾಗದಲ್ಲಿ ಸಬ್ ಸ್ಷೇಷನ್ ಮಾಡಲು ಅವಕಾಶವಿದೆ. ಇದಕ್ಕೆ ಅನುಮತಿ ನೀಡಬೇಕು ಎಂದರು

ಮಂಡಗದ್ದೆ ಎಂಕೆ ಬೈಲು, ಹಾಗು ಅಮೃತ ಬಳಿ ಸಬ್ ಸ್ಷೇಷನ್ ಮಾಡಬೇಕಿದೆ.  ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ, ರೈತರು ಕೂಡ ಕಂಗಾಲಾಗಿದ್ದಾರೆ ಎಂದು ಹೇಳಿದಾಗ ಅದಕ್ಕೆ ಪ್ರತಿಕ್ರೀಯಿಸಿದ ಜಾರ್ಜ್​ ಸಬ್ ಸ್ಟೇಷನ್​ಗಳನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ತೀರ್ಥಹಳ್ಳಿಯಲ್ಲೂ ಮಾಡಲಾಗುವುದು ಎಂದು ಹೇಳಿದರು. ಮಲೆನಾಡಿನಲ್ಲಿ ಲೈನ್ ಮನ್ ಗಳ ಕೊರತೆ ಇದೆ ಎಂದು ಆರಗಾ ಹೇಳಿದಾಗ,, ಜಾರ್ಜ್ ರಾಜ್ಯಾದ್ಯಂತ ನಾಲ್ಕು ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದಾಗಿ ತಿಳಿಸಿದರು.

ಉಸ್ತುವಾರಿ ಸಚಿವ ಮಧು ಬಂಗಾರಪ್ಪ

ರಾಜ್ಯದ ಬೇರೆ ಭಾಗದ ವಿದ್ಯುತ್ ಸಮಸ್ಯೆಯನ್ನು ಮಲೆನಾಡಿನ ಸಮಸ್ಯೆ ಜೊತೆ ಹೋಲಿಸುವುದು ಬೇಡ. ಮಲೆನಾಡಿನಲ್ಲಿ ಮೆಸ್ಕಾಂ, ಅರಣ್ಯ ಹಾಗು ಕಂದಾಯ ಇಲಾಖೆಗಳ ನಡುವೆ ಕಾನೂನಿನ ತೊಡಕುಗಳಿವೆ. ರಿಮೋಟ್ ವಿಲೇಜ್ ಗಳಲ್ಲಿ ಇಂದಿಗೂ ಕರೆಂಟ್ ಇಲ್ಲ. ಮೆಸ್ಕಾಂ ನವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ವಿದ್ಯುತ್ ಕಂಬ ಹಾಕಲು ಬಿಡುತ್ತಿಲ್ಲ. ಯುಜಿ ಗೂ ಅನುಮತಿ ನೀಡುತ್ತಿಲ್ಲ. ಈ ಜ್ವಲಂತ ಸಮಸ್ಯೆಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಸಚವರಿಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ  ಸಮಸ್ಯೆ ಮನವರಿಕೆ ಮಾಡಿಕೊಟ್ಟರು

ಶಿವಮೊಗ್ಗ ಎಂಎಲ್​ಎ ಎಸ್​.ಎನ್​. ಚನ್ನಸಬಪ್ಪ

ಸಭೆಯ ಆರಂಭದಿಂದಲೂ ಜಿಲ್ಲೆಯ ವಿದ್ಯುತ್ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟವರು ಶಿವಮೊಗ್ಗ ಶಾಸಕ ಚೆನ್ನಬಸಪ್ಪ. ಶಿವಮೊಗ್ಗದ ತುಂಗಾ ನಾಲೆಯು 14 ಕಿಲೋಮೀಟರ್ ಉದ್ದವಿದೆ. ಈ ನಾಲೆ ಹಾದು ಹೋಗುವ ಮಾರ್ಗದಲ್ಲಿ ಸೋಲಾರ್ ಉತ್ಪಾಧನೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು. ವರಾಹಿ ಯೋಜನೆಯ ನಾಲ್ಕು ವಿದ್ಯುತ್ ಸ್ಥಾವರಗಳಲ್ಲಿ ಎರಡು ಸ್ಥಾವರಗಳು ಕೆಟ್ಟು ಹೋಗಿವೆ, ವಿದ್ಯುತ್ ಸಮಸ್ಯೆ ಇರುವ ಸಂದರ್ಭದಲ್ಲಿ ಅವುಗಳನ್ನು ಪುನಃ ಪ್ರಾರಂಭಿಸಲು ಸಚಿವರು ಮುಂದಾಗಬೇಕು ಎಂದು ಹೇಳಿದಾಗ ಅದಕ್ಕೆ  ಪ್ರತಿಕ್ರಿಯಿಸಿ ಜಾರ್ಜ್ ನಾಳೆ ಶರಾವತಿ ಮತ್ತು ವರಾಹಿಗೆ ಹೋಗುತ್ತಿರುವುದಾಗಿ ಹೇಳಿದರು. ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. 

ಶಾಲೆಗಳಲ್ಲಿ ಪ್ರಸ್ತುತ ವರ್ಷದಿಂದ ವಿದ್ಯುತ್ ಬಿಲ್ ಬರೋದಿಲ್ಲ

ನವಂಬರ್ ಒಂದರಂದು ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ವಿದ್ಯುತ್ ದರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಾ ಮಾಡಿ ಝೀರೋ ವಿದ್ಯುತ್ ಬಿಲ್ ಘೋಷಣೆ ಮಾಡಿದ್ದರು. ಆದರೆ ಅದು ಜಾರಿಯಾಗಿಲ್ಲ ಎಂದು ಚೆನ್ನಬಸಪ್ಪ ಗಮನ ಸೆಳೆದಾಗ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳು ಹೇಳಿದಂತೆ ನವೆಂಬರ್​ ತಿಂಗಳಿನಿಂದಲೇ ಯೋಜನೆ ಜಾರಿಯಾಗಿದೆ. ಇದರ ಬಗ್ಗೆ ಗೊಂದಲ ಬೇಡ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಸಣ್ಣ ಗುತ್ತಿಗೆದಾರರರಿಗೆ ಅವಕಾಶ ನೀಡಿ

ಮೆಸ್ಕಾಂ ಗುತ್ತಿಗೆಯಲ್ಲಿ ದೊಡ್ಡ ಗುತ್ತಿಗೆದಾರರಿಗೆ ಕೆಲಸ ನೀಡಿದರೆ ಅವರು ಸಬ್ ಕಂಟ್ರಾಕ್ಟರ್ ಗಳಿಗೆ ವಹಿಸುತ್ತಾರೆ. ಅದರ ಬದಲು ಸ್ಥಳೀಯ ಗುತ್ತಿಗೆದಾರರರಿಗೆ ಎಸ್ ಆರ್ ದರದಲ್ಲಿಯೇ ಗುತ್ತಿಗೆ ನೀಡಿದರೆ ಅನುಕೂಲವಾಗುತ್ತದೆ. ವಿದ್ಯುತ್ ಸಮಸ್ಯೆ ಎದುರಾದಾಗ ದೂರದಲ್ಲಿ ಎಲ್ಲೋ ಇರುವ ಗುತ್ತಿಗೆದಾರನನ್ನು ಸಂಪರ್ಕಿಸಲ ಆಗೋದಿಲ್ಲ. ಸ್ಥಳೀಯ ಗುತ್ತಿಗೆದಾರರಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದಾಗ ಜಾರ್ಜ್ ಐದು ಲಕ್ಷದವರೆಗಿನ ಗುತ್ತಿಗೆಯನ್ನು ಸ್ಥಳೀಯವಾಗಿ ನೀಡಲಾಗುತ್ತಿದೆ. ಇದರ ಮೌಲ್ಯ ಹೆಚ್ಚಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ 

ಅರಣ್ಯಾಧಿಕಾರಿಗಳಿಗೆ ಬೇಳೂರು ತರಾಟೆ

ಇನ್ನು ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. ಸಾಗರ ತಾಲೂಕಿನ ಉರುಳುಗಲ್ಲು ಹಾಗು ಮೇಘಾನೆ ಕುಗ್ರಾಮಗಳಿಗೆ ಇಂದಿಗೂ ವಿದ್ಯುತ್ ಇಲ್ಲ. ಅರಣ್ಯ ಇಲಾಖೆಯ ನೀತಿಯಿಂದಾಗಿ ಅಲ್ಲಿನ ಜನರು ಬದುಕಲು ಸಾಧ್ಯವಾಗುತ್ತಿಲ್ಲ. ಉರುಳುಗಲ್ಲು ಗ್ರಾಮಕ್ಕೆ ಕರೆಂಟ್ ಗೆ ಅನುಮತಿ ನೀಡಿಲ್ಲ. ಕಾಡಿನ ಬಗ್ಗೆ ಕಾಳಜಿ ಇರುವ ಅಧಿಕಾರಿಗಳು ನೀವೆಷ್ಟು ಕಾಡು ಉಳಿಸಿದ್ದೀರಿ ಎಂದು ರೇಗಿದರು. ಆಗ ಅಧಿಕಾರಿಯು ಉರುಳುಗಲ್ಲು ಗ್ರಾಮಕ್ಕೆ ಕಾಡಿನಲ್ಲಿ ಭೂಗರ್ಭದಲ್ಲಿ ವಿದ್ಯುತ್ ಕೊಂಡೊಯ್ಯಲು ಅನುಮತಿ ನೀಡಿರುವುದಾಗಿ ಹೇಳಿದರು. ಆರಗ ಜ್ಞಾನೇಂದ್ರ ಉಡೋಡಿ ಕುಗ್ರಾಮದಲ್ಲಿ ವಿದ್ಯುತ್ ಇಲ್ಲದಿರುವ ಬಗ್ಗೆ ಗಮನ ಸೆಳೆದರು ಇಂದನ ಸಚಿವರು ಸಮಸ್ಯೆ ಬಗೆಹಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು


Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು