Shivamogga | Feb 1, 2024 | KSRTC bus stand in Shivamogga ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದು ಆತನ ವಾರಸ್ಸುದಾರರ ಪತ್ತೆಗೆ ಪ್ರಕಟಣೆ ನೀಡಲಾಗಿದೆ. ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದ ಹತ್ತಿರದ ಫುಟ್ಪಾತ್ ಪಕ್ಕದಲ್ಲಿ ಸುಮಾರು 60 ರಿಂದ 65 ವರ್ಷದ ಅಪರಿಚಿತ ವ್ಯಕ್ತಿ ಮಲಗಿದ್ದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಆದರೆ ಈತನ ವಿಳಾಸ, ಹೆಸರು, ವಾರಸ್ಸುದಾರರ ಮಾಹಿತಿ ಪೊಲೀಸರಿಗೆ ಸ್ಪಷ್ಟವಾಗಿಲ್ಲ. ಸದ್ಯ ಈತನ ಮೃತದೇಹವು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಸ್ಟೇಷನ್
ಅಪರಿಚಿತ ವ್ಯಕ್ತಿಯು ಸುಮಾರು 5.10 ಅಡಿ ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತನ ಕುತ್ತಿಗೆಯ ಎಡಭಾಗದಲ್ಲಿ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮಾಸಲು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೃತರ ವಾರಸುದಾರರು ಯಾರಾದರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ದೂ.ಸಂ : 08182-261414, 9611761255 ನ್ನು ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———————-
ಸೊರಬ: ಮೆಸ್ಕಾಂ ಜನ ಸಂಪರ್ಕ ಸಭೆ
ಸೊರಬ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 02 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ:9448289518.