SHIVAMOGGA| Dec 16, 2023 | ಶಿವಮೊಗ್ಗ ನಗರದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ನಿರೀಕ್ಷಣಾ ಕೊಠಡಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದು, ಅವರ ವಾರಸ್ಸುದಾರರ ಪತ್ತೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ವಾರ್ತಾ ಇಲಾಖೆ ಮೂಲಕ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆಯನ್ನ ಹೊರಡಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆ
ಶಿವಮೊಗ್ಗ ಸರ್ಕಾರಿ ಬಸ್ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿ ಕುಳಿತಲ್ಲೇ ಮೃತಪಟ್ಟಿದ್ದು, ಈತನ ವಿಳಾಸ, ಹೆಸರು, ವಾರಸ್ಸುದಾರರು ಇರುವುದಿಲ್ಲ. ಮೃತದೇಹವು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿರುತ್ತದೆ.
ಅಪರಿಚಿತ ವ್ಯಕ್ತಿಯು ಸುಮಾರು 5.8 ಅಡಿ ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತನ ಕುತ್ತಿಗೆಯ ಎಡಭಾಗದಲ್ಲಿ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಹಸಿರು ನೀಲಿ ಬಿಳಿ ಮಿಶ್ರಿತ ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಬರ್ಮುಡಾ ಚಡ್ಡಿ, ಕಪ್ಪು ಬಿಳಿ ಮಿಶ್ರಿತ ಬಣ್ಣದ ಟವೇಲ್ ಧರಿಸಿರುತ್ತಾರೆ.
ಮೃತರ ವಾರಸುದಾರರು ಯಾರಾದರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ದೂ.ಸಂ : 08182-261414, 9611761255 ನ್ನು ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ : ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಪ್ರೊಸೆಸ್ ಸರ್ವರ್-ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ! Job News
ಭದ್ರಾವತಿ: ಮೆಸ್ಕಾಂ ಜನ ಸಂಪರ್ಕ ಸಭೆ
ಭದ್ರಾವತಿ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಡಿ:19 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ:9448289507.
