shimoga water bill payment / ನೀರಿನ ಬಿಲ್​ ಕಟ್ಟಲು ಶಿವಮೊಗ್ಗದಲ್ಲಿ ವಿಶೇಷ ಕೌಂಟರ್​ ವ್ಯವಸ್ಥೆ! ಎಲ್ಲೆಲ್ಲಿ ಇದೆ ಕೌಂಟರ್​

 SHIVAMOGGA |  Jan 4, 2024  |  shimoga water bill payment / ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ\

ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 

ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 07/01/2024 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ ವಿವಿದೆಡೆ ವಿಶೇಷ ಕೌಂಟರ್​ ಗಳನ್ನು ಆರಂಭಿಸಿದೆ. 

READ : ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಫೈನಲ್! ಶೀಘ್ರದಲ್ಲಿಯೇ ಬಿಡುಗಡೆ !

ಎಲ್ಲೆಲ್ಲಿ ಇದೆ ನೀರಿನ ಕಂದಾಯದ ಕೌಂಟರ್ /shimoga water bill payment

ಭಾರತೀಯ ಸಭಾಭವನ ಎದುರು, ಆರ್.ಎಂ.ಎಲ್.ನಗರ, ಬಸವೇಶ್ವರ ದೇವಸ್ಥಾನದ ಹತ್ತಿರ, ಗಾಂಧಿ ಬಜಾರ್, ದೇವರಾಜ್ ಅರಸ್ ಬಡಾವಣೆ ಪೆಟ್ರೋಲ್ ಬಂಕ್ ಹತ್ತಿರ, ಸೋಮಿನಕೊಪ್ಪ ರಸ್ತೆ, ಬಾಪೂಜಿನಗರ ಮುಖ್ಯರಸ್ತೆ ರಾಮಮಂದಿರ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್, ದ್ರೌಪದಮ್ಮ ಸರ್ಕಲ್ ಆಟೋ ಸ್ಟ್ಯಾಂಡ್ ಹತ್ತಿರ ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ. 

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

Leave a Comment