SHIVAMOGGA | SORABA| Dec 8, 2023 | ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕಟ್ಟಿನ ಕೇರಿಯಲ್ಲಿ ನಡೆದಿದ್ದ ಕೇರಳ ಮೂಲದ ವ್ಯಕ್ತಿಯ ಕೊಲೆ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಘಟನೆಯ ವಿವರದ ಬಗ್ಗೆ ಸುದ್ದಿ ಇಲ್ಲಿದೆ ಕ್ಲಿಕ್ ಮಾಡಿ : ರಬ್ಬರ್ ತೋಟದಲ್ಲಿ ಕೇರಳದ ಕಣ್ಣೂರು ಮೂಲದ ವ್ಯಕ್ತಿಯ ಕೊಲೆ! ಎಸ್ಪಿ ಮಿಥುನ್ ಕುಮಾರ್ ಮಾಹಿತಿ!
READ : ಜಾಗ್ರತೆ! ಕುಡಿದು ಗಾಡಿ ಓಡಿಸಿದ್ದಕ್ಕೆ ಬಿತ್ತು ₹11 ಸಾವಿರ ದಂಡ!
ಕೇರಳದ ಕಣ್ಣೂರು ಮೂಲದ ವ್ಯಕ್ತಿಯ ಕೊಲೆ
ಕಳೆದ ಡಿ.5 ರಂದು ಸೊರಬ ತಾಲೂಕಿನ ಕಟ್ಟಿನಕೇರಿಯಲ್ಲಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಈ ಘಟನೆ ನಡೆದಿತ್ತು. ಇಲ್ಲಿನ ಕೆಲಸ ಮಾಡುತ್ತಿದ್ದ ಕೇರಳ ನಿವಾಸಿ ಶಿಜು (40) ಎಂಬಾತನನ್ನ ಕೊಲೆ ಮಾಡಲಾಗಿತ್ತು. ಪ್ರಾಥಮಿಕ ಮಾಹಿತಿಯಲ್ಲಿ ಈತನೊಂದಿಗೆ ಕೆಲಸ ಮಾಡುತ್ತಿದ್ದವರು ಈ ಕೊಲೆ ಮಾಡಿರುವ ಅನುಮಾನ ಪೊಲೀಸರಿಗೆ ಮೂಡಿತ್ತು. ಈ ನಿಟ್ಟಿನಲ್ಲಿ 24 ಗಂಟೆಯೊಳಗೆ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿರುವ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
READ : ಮನೆಗೆ ನುಗ್ಗಿದ್ದ ಕಳ್ಳರು ಬೇಲಿ ಹಾರಿ ಎಸ್ಕೇಪ್! ಛೇಸಿಂಗ್ ಮಾಡಿ ಹಿಡಿದ ಗ್ರಾಮಸ್ಥರು! ಏನಿದು ಸಾಗರ ಘಟನೆ
ಮೂವರು ಆರೋಪಿಗಳು ಅರೆಸ್ಟ್
ಸೊರಬ ಸಿಪಿಐ ರಾಜಶೇಖರ್ ನೇತೃತ್ವದಲ್ಲಿ ಪಿಎಸ್ಐ ನಾಗರಾಜ್, ಮತ್ತು ಪಿಎಸ್ಐ ಮಾಳಪ್ಪ ಸಿಬ್ಬಂದಿಗಳಾದ ನಾಗೇಶ್ ದಪೆದಾರ್ ರಾಘವೇಂದ್ರ, ವಿನಯ, ಲೋಕೇಶ್ ರವರುಗಳ ತಂಡ, ಪ್ರಕರಣ ಸಂಬಂಧ A1 ಜಯನ್ ಸಿ, ತಂದೆ ಚಂದನ್ ತಿರುವಂತಪುರಂ A 2 ಶಿಬು ತಂದೆ ಗೋಪಾಲನ್ ಕಣ್ಣೂರು, A3 ಸುಮನ್ ಕುಮಾರ್ ತಂದೆ ಜ್ಞಾನಮುತ್ತು ತಿರುವಂತಪುರಂ ರನ್ನ ಬಂಧಿಸಿದೆ.
ಹೊಸನಗರದ ಜಯನಗರದ ಬಳಿ ಅರೆಸ್ಟ್
ಕೊಲೆ ಪ್ರಕರಣದ ಬೆನ್ನಲ್ಲೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಅವರನ್ನ ಟ್ರೇಸ್ ಮಾಡಿದ ಪೊಲೀಸರು ಹೊಸನಗರ ಬಳಿಯ ಜಯನಗರ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
