KARNATAKA NEWS/ ONLINE / Malenadu today/ Nov 8, 2023 SHIVAMOGGA NEWS
Shivamogga | ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ತ್ರೈಮಾಸಿಕ ಕೆಡಿಪಿ ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗಿದ್ದಾರೆ. ಅದರಲ್ಲಿಯು ಮುಖ್ಯವಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ರವರ ಗೈರುಹಾಜರಿ ಕುತೂಹಲ ಮೂಡಿಸಿದೆ.
ಇವತ್ತಿನ ಸಭೆಯಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಹಾಜರಾಗಿದ್ದರು. ಅಲ್ಲದೆ ಕ್ಷೇತ್ರದ ಸಮಸ್ಯೆಗಳನ್ನ ಸಭೆಯ ಮುಂದಿಟ್ಟರು.ಆದರೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಗೈರು ಹಾಜರಾಗಿದ್ದರು. ಇವತ್ತು ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಅವರು ನನಗೆ ಸಭೆಗೆ ಆಹ್ವಾನಿಸಿಲ್ಲ ಎಂದಿದ್ದರು.
ಇನ್ನೂ ಭದ್ರಾವತಿ ಶಾಸಕ ಸಂಗಮೇಶ್ ಸಹ ಸಭೆಗೆ ಗೈರು ಹಾಜರಾಗಿದ್ದಾರೆ. ಅವರ ಗೈರಿಗೆ ಕಾರಣ ತಿಳಿದುಬಂದಿಲ್ಲವಾದರು ಕಾಂಗ್ರೆಸ್ ಶಾಸಕರು ಸಚಿವರಿಂದ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಇನ್ನೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಶಿಕಾರಿಪುರ ಶಾಸಕ ವಿಜಯೇಂದ್ರರವರು ಸಹ ಗೈರಾಗಿದ್ದಾರೆ.
