KARNATAKA NEWS/ ONLINE / Malenadu today/ Nov 8, 2023 SHIVAMOGGA NEWS
Shivamogga | ಜೆಡಿಎಸ್ ತೆನೆಯ ಭಾರವನ್ನು ಕೆಳಗಿಳಿಸುವರೇ ಶಾರದ ಪೂರ್ಯನಾಯಕ್. ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕ್ಷೇತ್ರದಲ್ಲಿ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರೆ ಶಾರದಾ ಪೂರ್ಯನಾಯ್ಕ್?
ರಾಜಕೀಯ ಜೀವನಕ್ಕೆ ನೆಲೆ ಒದಗಿಸಿದ ಜೆಡಿಎಸ್ ಪಕ್ಷವನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್ಯನಾಯಕ್ ತೊರೆಯುವರೇ ಎಂಬ ಚರ್ಚೆ ಶಿವಮೊಗ್ಗ ಜಿಲ್ಲೆಯಲ್ಲಿ ಜೋರಾಗಿ ನಡೆಯತ್ತಿದೆ. ಕಳೆದ ಕೆಲವು ದಿನಗಳಿಂದಲೂ ಈ ಚರ್ಚೆ ನಡೆಯುತ್ತಿದ್ದು ಹೋದರೆ ಒಳ್ಳೇಯದಲ್ಲವಾ? ಹೋಗಲು ಆದೀತಾ? ಎಂಬಂತಹ ಮಾತುಕತೆಗಳು ಕೇಳಿಬರುತ್ತಿವೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗು ಕುಮಾರಣ್ಣರಿಗೆ ಆತ್ಮೀಯರಾಗಿರುವ ಶಾರದ ಪೂರ್ಯ ನಾಯಕ್ ಎರಡನೇ ಬಾರಿ ಜೆಡಿಎಸ್ ಪಕ್ಷದಿಂದಲೇ ಶಾಸಕಿಯಾಗಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಯಾವುದೇ ಭಾಷಣದಲ್ಲಿ ಮಾತನಾಡುವಾಗ ಸಹೋದರಿ ತಂಗಿ ಎಂದೇ ಶಾರದಾ ಪೂರ್ಯನಾಯಕ್ ರನ್ನು ಕರೆಯವುದು ಸಾಮಾನ್ಯ. ಅಣ್ಣ ತಂಗಿಯರ ಭಾಂದವ್ಯ ಗಟ್ಟಿಯಾಗಿರುವ ಸನ್ನಿವೇಶದಲ್ಲಿ ಈಗ ಶಾರದಾ ಪೂರ್ಯ ನಾಯಕ್ ಕಾಂಗ್ರೇಸ್ ಪಕ್ಷ ಸೇರುತ್ತಾರಾ ಎಂಬ ಗುಸುಗುಸು ಚರ್ಚೆಗಳು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
READ :Shivamogga | ಮಧು ಬಂಗಾರಪ್ಪರವರ ನೇತೃತ್ವದ ಕೆಡಿಪಿ ಸಭೆಗೆ ನಾಲ್ಕು ಶಾಸಕರ ಗೈರು!?
ಜೆಡಿಎಸ್ ಮತ್ತು ಬಿಜೆಪಿ ರಾಜ್ಯ ಮಟ್ಟದಲ್ಲಿ ಹೊಂದಾಗುತ್ತಿರುವುದು ಶಾರದ ಪೂರ್ಯ ನಾಯಕ್ ಕ್ಷೇತ್ರದ ಪಾಲಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿಯನ್ನು ಪ್ರಬಲ ಎದುರಾಳಿ ಪಕ್ಷವಾಗಿ ತಮ್ಮ ಕ್ಷೇತ್ರದಲ್ಲಿ ಶಾರದಾ ಪೂರ್ಯನಾಯ್ಕ್ ಎದುರಿಸಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಶಾರದಾ ಪೂರ್ಯ ನಾಯಕ್ ಬಿಜೆಪಿ ವಿರೋಧಿ ಅಲೆಯಲ್ಲಿಯೇ ಗೆಲುವು ಸಾಧಿಸಿದವರು. ಬಿಜೆಪಿ ವಿರೋಧಿ ಮತಗಳೇ ಕಾಂಕ್ರೀಟ್ ಆಗಿ ಶಾರದಕ್ಕನ ಗೆಲುವಿಗೆ ಕಾರಣವಾಗಿತ್ತು. ಆದರೆ ಈಗ ಅಧೇ ಜೆಡಿಎಸ್ ಪಕ್ಷ ರಾಜ್ಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪಾಲಿಗೆ ನುಂಗಲಾದರ ತುತ್ತೇ ಸರಿ.
ತಮಗೆ ಮತಹಾಕಿದವರು ಜೆಡಿಎಸ್ನ ವಿಲೀನವನ್ನು ಒಪ್ಪುತ್ತಾರೆಯೇ ಎಂಬ ಅನುಮಾನ ಶಾರದ ಪೂರ್ಯನಾಯ್ಕ್ರಲ್ಲಿರಬಹುದು. ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದಾರಾ? ಗೊತ್ತಿಲ್ಲ. ಆದರೆ ಹೌದು ಹೌದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಹಿಂದೊಮ್ಮೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ನ ಅಡಿಪಾಯವಾಗಿದ್ದ ಮಧು ಬಂಗಾರಪ್ಪ, ಎಂ. ಶ್ರೀಕಾಂತ್, ಆರ್ ಎಂ ಮಂಜುನಾಥ್ ಗೌಡರೆಲ್ಲರೂ ಈಗಾಗಲೇ ಕಾಂಗ್ರೆಸ್ ಮನೆಯನ್ನು ಹೊಕ್ಕಾಗಿದೆ. ಅದೇ ಸಂದರ್ಭದಲ್ಲಿ ಜೆಡಿಎಸ್ನ ಮಹಿಳಾ ಶಕ್ತಿಯಾಗಿದ್ದ ಶಾರದಾ ಪೂರ್ಯನಾಯ್ಕ್ರವರು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆಯೇ ಎಂಬುದಕ್ಕೆ ಇನ್ನೂ ಉತ್ತರ ಸಿಗಬೇಕಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದೆ. ಸಚಿವರಾಗಿ ಮಧು ಬಂಗಾರಪ್ಪ ಪಕ್ಷಕ್ಕೆ ಬರುವಂತೆ ಶಾರದಾ ಪೂರ್ಯನಾಯ್ಕ್ರಿಗೆ ಆಹ್ವಾನ ನೀಡಿದ್ದಾರೆ. ಆದರೆ ಪಕ್ಷ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳಲು ಶಾರದಾ ಪೂರ್ಯನಾಯ್ಕ್ ಸುತಾರಾಂ ಸಿದ್ದರಿಲ್ಲ. ಹಾಗಾದರೆ ಮುಂದೇನು ಉತ್ತರ ಸ್ವತಃ ಅವರೇ ನೀಡಬೇಕಿದೆ.