KARNATAKA NEWS/ ONLINE / Malenadu today/ Jun 27, 2023 SHIVAMOGGA NEWS
ತೀರ್ಥಹಳ್ಳಿ ಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ಧಾರೆ. ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣವನ್ನು ಮತ್ತೆ ಮರು ತನಿಖೆಗೆ ಮಾಡಲಿ ಎಂದಿರುವ ಅವರು, ಎಲ್ಲಾ ರೀತಿಯಲ್ಲೂ ತನಿಖೆ ಮಾಡಲಿ ಯಾರು ಅಪರಾಧಿಗಳಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಅಭಿಪ್ರಾಯ ಪಟ್ಟಿದ್ಧಾರೆ.
ಪಿಎಸ್ಐ ಕೇಸ್ ಕೋರ್ಟ್ ನಲ್ಲಿದೆ
ಇನ್ನೂ ಪಿಎಸ್ಐ ಪ್ರಕರಣದ ತನಿಖೆ ಈಗಾಗಲೇ ಮುಕ್ತಾಯವಾಗಿದೆ ಎಂದ ಅವರು, ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಏನಾಗುತ್ತದೆಯೋ ಗೊತ್ತಿಲ್ಲ. ಕೋರ್ಟ್ ನಲ್ಲಿ ಎಲ್ಲವೂ ನಿರ್ಧಾರವಾಗಲಿದೆ, ಮೇಲಾಗಿ, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾರೆ ಎಂದಿದ್ಧಾರೆ.
ತಟ್ಟೆ ಬಡಿದು ಇಲಿ ಹಿಡಿಯಬೇಡಿ
ಇದೇ ವೇಳೆ, ಕಾಂಗ್ರೆಸ್ ಸರ್ಕಾರ ಹಾಗೂ ನಮ್ಮ ಸರ್ಕಾರದ ಅವಧಿಯ ಎಲ್ಲ ಯೋಜನೆಗಳ ಬಗ್ಗೆ ತನಿಖೆ ನಡೆಸಲಿ, ಅದನ್ನು ಬಿಟ್ಟು ಏನೋ ಮಾಡುತ್ತೇವೆ ಎಂದು ಹೆದರಿಸುವುದನ್ನು ಬಿಡಲಿ ಎಂದ ಆರಗ ಜ್ಞಾನೇಂದ್ರರವರು, ಹಳ್ಳಿಯಲ್ಲಿ ಒಂದು ಗಾದೆಯಿದೆ ತಟ್ಟೆ ಬಡಿದು ಇಲಿ ಹೆದರಿಸಿದರು ಎಂದು ಹಾಗಾಗುವುದು ಬೇಡ ಎಂದು ವ್ಯಂಗ್ಯವಾಡಿದರು.
ವಿಧಾನಸೌಧದ ಒಳಗೆ ಹೋರಾಟ
ಒಟ್ಟಾರೆಯಾಗಿ ವ್ಯವಸ್ಥೆ ಚನ್ನಾಗಾಗಲಿ ಎಂಬುದು ನಮ್ಮ ಉದ್ದೇಶ. ರಾಜ್ಯ ಸರ್ಕಾರದ ಗ್ಯಾರಂಟಿ ಕೂಡಲೇ ಜಾರಿಗೊಳಿಸಬೇಕು. ಕೇಂದ್ರಸರ್ಕಾರದಿಂದ ನೀಡುವ ಐದು ಕೆಜಿ ಅಕ್ಕಿ ಈ ತಿಂಗಳ ಕೊನೆವರೆಗೂ ನೀಡಲಿದ್ದೇವೆ. ರಾಜ್ಯ ಸರ್ಕಾರ ತನ್ನ ಪಾಲಿನ ಅಕ್ಕಿಯನ್ನು ಕೂಡಲೇ ನೀಡಲಿ. ಇಲ್ಲದಿದ್ದಲ್ಲಿ ವಿಧಾನಸೌಧದ ಒಳಗೆ ಹೊರಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ಧಾರೆ.
ರಾಜ್ಯಾಧ್ಯಕ್ಷರಾಗ್ತಾರಾ ಆರಗ ಜ್ಞಾನೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಆರಗ ಜ್ಞಾನೇಂದ್ರ ಹೆಸರು ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಆರಗ ಜ್ಞಾನೇಂದ್ರವರು, ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ. ನಮ್ಮ ಪಕ್ಷದ ಹಿರಿಯರು ತುರ್ತು ಪರಿಸ್ಥಿತಿಯಲ್ಲಿ ತಮ್ಮ ಮನೆ ಹಾಳು ಮಾಡಿಕೊಂಡು ಪಕ್ಷ ಕಟ್ಟಿದ್ದಾರೆ. ಅವರಿಗ ಕಣ್ಣೀರು ಹಾಕುತ್ತಾರೆ, ಒಂದು ಸೋಲಿಗೆ ದೃತಿಗೆಟ್ಟಿ ಪರಸ್ಪರ ಕೆಸರೆರಚಾಡಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಈಶ್ವರಪ್ಪರವರ ಹೇಳಿಕೆ ಬಗ್ಗೆ ಗೊತ್ತಿಲ್ಲ
ಹೊರಗಡೆ ಚರ್ಚೆ ಮಾಡುವ ಬದಲು ಬದಲಿಗೆ ಪಕ್ಷದ ವೇದಿಕೆಯಲ್ಲಿ ವಿಚಾರವನ್ನು ಪ್ರಸ್ತಾಪ ಮಾಡಬೇಕು. ಸೋಲನ್ನು ನಾವು ಸರಿಯಾದ ರೀತಿಯಲ್ಲಿ ಸ್ವೀಕರಿಸಬೇಕು.ಈ ಚುನಾವಣೆಯಲ್ಲಿನ ಸೋಲು ಕೆಲವರನ್ನು ಅಲ್ಲಾಡಿಸಿದೆ. ಆದರೆ ಬಿಜೆಪಿಯನ್ನು ಅಲ್ಲಾಡಿಸಿಲ್ಲ ಎಂದು ಅಭಿಪ್ರಾಯ ಪಟ್ಟಿದ್ಧಾರೆ. ಈ ಸಂಬಂಧ ಈಶ್ವರಪ್ಪ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದಿದ್ಧಾರೆ.
ಭದ್ರಾವತಿಯಲ್ಲಿ ಪೋಕ್ಸೋ ಕೇಸ್! ಆರೋಪಿಗೆ 2,80,000 ದಂಡದ ಜೊತೆ 3 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್ !
ಭದ್ರಾವತಿ 2019 ನೇ ಸಾಲಿನಲ್ಲಿ ನಡೆದಿದ್ದ ಪೋಕ್ಸೋ ಕೇಸ್ ಸಂಬಂಧ The Addl District and Sessions Court, FTSC–II (POCSO) Shivamogga ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗೆ ಮೂರು ವರ್ಷ ಶಿಕ್ಷೆ ವಿಧಿಸಿದಿ 2,80,000 ದಂಡ ವಿಧಿಸಿದೆ..
ಏನಿದು ಕೇಸ್ ?
ಭದ್ರಾವತಿ ತಾಲ್ಲೂಕಿನ 23 ವರ್ಷದ ವ್ಯಕ್ತಿಯೊಬ್ಬನು, 11 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆಂದು ಬಾಲಕಿಯು ದೂರು ನೀಡಿದ್ದಳು. ಈ ಸಂಬಂಧ ಭದ್ರಾವತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆಗಿನ ತನಿಖಾಧಿಕಾರಿ ಸಿಪಿಐ ಎನ್ ನಂಜಪ್ಪ ಈ ಸಂಬಂಧ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಶಿವಮೊಗ್ಗ ನಾಗರಿಕರಿಗೆ ಪಾಲಿಕೆಯಿಂದ ಗುಡ್ ನ್ಯೂಸ್! ಆಶ್ರಯ ಯೋಜನೆಯಡಿ ಅರ್ಜಿ ಆಹ್ವಾನ!
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ The Addl District and Sessions Court, FTSC–II (POCSO) Shivamogga ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಈ ಸಂಬಂಧ ಇದೀಗ ತೀರ್ಪು ಹೊರಬಿದ್ದಿದ್ದು ಆರೋಪಿತನಿಗೆ 3 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 2,80,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರಾ ಆರಗ ಜ್ಞಾನೇಂದ್ರ!? ಮಾಜಿ ಗೃಹಸಚಿವರು ಹೇಳಿದ್ದೇನು? #shivamogga #AragaJnanendra pic.twitter.com/FhKm0al4pt
— malenadutoday.com (@CMalenadutoday) June 27, 2023