ಶಿವಮೊಗ್ಗ ನಾಗರಿಕರಿಗೆ ಪಾಲಿಕೆಯಿಂದ ಗುಡ್ ನ್ಯೂಸ್! ಆಶ್ರಯ ಯೋಜನೆಯಡಿ ಅರ್ಜಿ ಆಹ್ವಾನ!

Good news for the citizens of Shimoga! Applications invited under the Ashraya scheme!

ಶಿವಮೊಗ್ಗ ನಾಗರಿಕರಿಗೆ  ಪಾಲಿಕೆಯಿಂದ ಗುಡ್ ನ್ಯೂಸ್! ಆಶ್ರಯ ಯೋಜನೆಯಡಿ ಅರ್ಜಿ ಆಹ್ವಾನ!

KARNATAKA NEWS/ ONLINE / Malenadu today/ Jun 27, 2023 SHIVAMOGGA NEWS

ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19.23 ಎಕರೆ ಜಮೀನಿನಲ್ಲಿ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.  

 

ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿದ್ದು, ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು.

 

ಅರ್ಜಿದಾರರು ಅಥವಾ ಅವರ ಕುಟುಂಬದವರು ಸ್ವಂತ ನಿವೇಶನ/ ಮನೆಯನ್ನು ಹೊಂದಿರಬಾರದು. ಅರ್ಜಿಯನ್ನು ಮಹಿಳಾ ಫಲಾನುಭವಿಯ ಹೆಸರಿನಲ್ಲಿಯೇ ಸಲ್ಲಿಸುವುದು, 

 

ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿಸೈನಿಕ, ವಿಕಲಚೇತನ, ಸ್ವಾತಂತ್ರ್ಯ ಯೋಧ, ವಿಧುರ ಹಾಗೂ ಹಿರಿಯ ನಾಗರೀಕರಾಗಿರಬೇಕು.  

 

ಬೇರೆ ಯಾವುದೇ ಯೋಜನೆಯಡಿಯಲ್ಲಿ ನಿವೇಶನ/ವಸತಿ ಸೌಲಭ್ಯವನ್ನು ಪಡೆದಿರಬಾರದು ಹಾಗೂ ಈ ಹಿಂದೆ ಯಾವುದಾದರೂ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರ ನೀಡುವುದು. 

 

ವಾರ್ಷಿಕ ರೂ. 86,700/-ಗಳಿಂದ ಆದಾಯ ಹೊಂದಿರಬೇಕು. ತೃತೀಯ ಲಿಂಗಿಗಳೂ ಸಹ ಅರ್ಜಿ ಸಲ್ಲಿಸಬಹುದು.

 

ಆಸಕ್ತರು  ಪಾಲಿಕೆ ವೆಬ್‍ಸೈಟ್ shivamoggacitycorp.org ರ ‘ಆಶ್ರಯ ಯೋಜನೆ ಅಪ್ಲಿಕೇಷನ್’ ಮೆನುವಿನಲ್ಲಿ ಸೆಪ್ಟಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸುವುದು. 

 

ಅಕ್ಟೋಬರ್ 07 ರೊಳಗಾಗಿ ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

 

ಹೆಚ್ಚಿನ ಸಲಹೆ/ಮಾಹಿತಿಗಾಗಿ ದೂ.ಸಂ.:08182-220799 ಹಾಗೂ ತಾಂತ್ರಿಕ ಸಲಹೆಗಾಗಿ ದೂ.ಸಂ.: 08182-268544/268545 ಗಳನ್ನು ಸಂಪರ್ಕಿಸುವುದು. 

 


ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ! ಶಿವಮೊಗ್ಗ ತಹಶೀಲ್ದಾರ್​ ಮಹತ್ವದ ಪ್ರಕಟಣೆ



ಶಿವಮೊಗ್ಗ  ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2023ಕ್ಕೆ ಈಗಾಗಲೇ ಸಿದ್ದತೆ ಆರಂಭಗೊಂಡಿದೆ. ಈ ನಿಟ್ಟಿನಲ್ ಲಿಕಳೆದ  ಏಪ್ರಿಲ್20 ರಂದು ಪ್ರಕಟವಾದ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಯಲಿ ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ಮತದಾರರು ಪರೀಶೀಲಿಸುವಂತೆ ಹಾಗೂ ಈ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಜುಲೈ 04 ರೊಳಗಾಗಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕಚೇರಿಗೆ ಲಿಖಿತವಾಗಿ ಸಲ್ಲಿಸುವಂತೆ ತಹಶೀಲ್ದಾರ್ ದಲ್ಜೀತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

 


ಭಗೀರಥ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಮಂಜುನಾಥ್,ಉಪಾಧ್ಯಕ್ಷರಾಗಿ ವಸಂತ್ ಹೋಬಳಿದಾರ್​ ಆಯ್ಕೆ

ಶಿವಮೊಗ್ಗ  ಜಿಲ್ಲಾ ಮಟ್ಟದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಶ್ರೀ ಭಗೀರಥ ಸಹಕಾರ ಸಂಘ ನಿಯಮಿತ ಇದರ ನೂತನ ಅಧ್ಯಕ್ಷರಾಗಿ ಎನ್.ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ವಸಂತ್ ಹೋಬಳಿದಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ನಿಬಂಧಕರ ಕಛೇರಿ ಶಿವಮೊಗ ಉಪವಿಭಾಗದ ಅಧೀಕ್ಷರಾದ ಪ್ರಕಾಶ್ ಟಿ.ವಿ ಅವರು ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಕಛೇರಿಯಲ್ಲಿ ಸೋಮವಾರ ಮಧ್ಯಾಹ್ನ ಚುನಾವಣಾ ಪ್ರಕ್ರಿಯೆ ನಡೆಸಿದರು.

 

ನಿರ್ದೇಶಕರುಗಳಾಗಿ

೧)ಎಲ್.ಮಂಜುನಾಥ್ (ಬೊಮ್ಮನಕಟ್ಟೆ)

೨)ಚಿದಾನಂದ ಜಿ(ಅತ್ತಿಗುಂದ)

೩)ಎಂ.ಜಿ.ಕೆ.ಹನುಮಂತಪ್ಪ (ಶಿವಮೊಗ್ಗ)

೪)ಶ್ರೀಮತಿ ಶಾಂತಮ್ಮ( ಶಿವಮೊಗ್ಗ)

೫)ಹೆಚ್.ರವಿ(ಶಿವಮೊಗ್ಗ)

೬)ಎಲ್.ಚಂದ್ರುಶೇಖರ್(ಶಿವಮೊಗ್ಗ)

೭)ಕೆ.ಶ್ರೀನಿವಾಸ್ (ಮಾರಶೆಟ್ಟಿಹಳ್ಳಿ)

೮)ವೆಂಕಟೇಶ್.ಯು.ಕೆ (ಹೊಳೆಹೊನ್ನೂರು)

೯)ಸುಧಾಕರ್.ಎಸ್.ಪಿ (ಶಿವಮೊಗ್ಗ)

೧೦)ರಮೇಶ್.ಯು.ಕೆ  (ಹೊಳೆಹೊನ್ನೂರು)

೧೧)ಕೆ.ಟಿ.ಶ್ರೀನಿವಾಸ್(ಭದ್ರಾವತಿ)

೧೨)ವೈ.ಬಿ.ಲೋಕೇಶ್ (ಶಿಕಾರಿಪುರ)

೧೩)ಅರ್ಚನಾ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು  ಚುನಾವಣಾಧಿಕಾರಿ ಘೋಷಿಸಿ ಎಲ್ಲರನ್ನು ಅಭಿನಂದಿಸಿದರು.

 


ಖಾತೆ ಮಾಡಿಸಲು ಸಾಹೇಬ್ರಿರಿಂದ ಹಿಡಿದು ಬಿಲ್ ಕಲೆಕ್ಟರ್​ವರೆಗೂ ಕೊಡಬೇಕು ಎಂದು ಲಂಚ ಕೇಳಿದ ಕೇಸ್​ವರ್ಕರ್​ ಲೋಕಾಯುಕ್ತ ಬಲೆಗೆ !

ಶಿವಮೊಗ್ಗ ಲೋಕಾಯುಕ್ತ ಪೊಲೀಸರು, ಪ್ರಕರಣವೊಂದರಲ್ಲಿ ಖಾತೆ ಮಾಡಿಸಿಕೊಡಲು 15 ಸಾವಿರ ರೂಪಾಯಿ ಲಂಚ ಕೇಳಿದ್ದ ಸೊರಬ ಪುರಸಭೆಯ ಕೇಸ್​ವರ್ಕರ್​ನ್ನ ಟ್ರ್ಯಾಪ್ ಮಾಡಿದ್ದಾರೆ. ಚಂದ್ರಕಲಾ ಲೋಕಾಯುಕ್ತರ ಬಲೆಗೆ ಬಿದ್ದ ಕೇಸ್​ ವರ್ಕರ್​

ಪ್ರಕರಣವೇನು? 

ಬೆಂಗಳೂರಿನಲ್ಲಿರುವ ಭಾಸ್ಕರ್​ ಎಂಬವರ ಜಾಗ ಹಳೆಸೊರಬದಲ್ಲಿದೆ. ಈ ಜಾಗದ ಅಲಿನೇಷನ್ ಆಗಿದ್ದು, ಹಿಂದೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಇದೀಗ ಪರಸಭೆಯ ವ್ಯಾಪ್ತಿಗೆ ಬಂದಿದೆ. ಹೀಗಾಗಿ ಇದರ ಖಾತೆ ಮಾಡಿಸಿಕೊಡುವಂತೆ ಭಾಸ್ಕರ್​ರವರ ಸಹೋದರ ಮಂಜುನಾಥ್ ಪುರಸಭೆಗೆ ತೆರಳಿ ಸಂಬಂಧ ಅರ್ಜಿ ಸಲ್ಲಿಸಿದ್ದರು. 

 

ಒಂದರೆಡು ದಿನಗಳ ಬಳಿಕ ಅರ್ಜಿಯ ಬಗ್ಗೆ ವಿಚಾರಿಸಲು  ತೆರಳಿದ್ದಾರೆ. ಈ ವೇಳೆ ಕೇಸ್​ವರ್ಕರ್​ ಚಂದ್ರಕಲಾ ಖಾತೆ ಮಾಡಿಸಲು ಖರ್ಚಾಗುತ್ತದೆ ಎಂದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಫೋನ್ ಕಾಲ್​ ಮಾಡಿದಾಗಲೂ ಚಂದ್ರಕಲಾರವರು,  ನಿವೇಶನವನ್ನು ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡಲು ಸಾಹೇಬ್ರಿಗೆ, ಆರ್‌ಓ, ಆರ್‌ಐ, ಮ್ಯಾನೇಜರ್, ಬಿಲ್‌ ಕಲೆಕ್ಟರ್ ಇವರಿಗೆ ಕೊಡಲು ಖರ್ಚಾಗುತ್ತದೆ, ನೀವು 15,000/-ಗಳನ್ನು ತೆಗೆದುಕೊಂಡು ಬನ್ನಿ ಎಂದಿದ್ದರಂತೆ. 

 

ಈ ವಿಚಾರವನ್ನು ಮಂಜುನಾಥ್​ ಲೋಕಾಯುಕ್ತರಿಗೆ ತಿಳಿಸಿ ದೂರುಕೊಟ್ಟಿದ್ದಾರೆ. ದೂರು ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಪೊಲೀಸರು ಚಂದ್ರಕಲಾರವರು ದುಡ್ಡುಪಡೆಯುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಸಂಬಂಧ ಕೇಸ್​ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.