ಶಿವಮೊಗ್ಗದಿಂದ ಕಡೂರಿಗೆ ಸಾಗಿಸ್ತಿದ್ದ 3550 ಕೆ.ಜಿ. ರೇಷನ್​ ಅಕ್ಕಿ ಜಪ್ತಿ ಮಾಡಿದ ಭದ್ರಾವತಿ ಪೊಲೀಸರು!

Malenadu Today

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು Bhadravati Taluk ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರುವರೆ ಟನ್​  ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಗೂಡ್ಸ್ ಟೆಂಪೋ ವಾಹನದಲ್ಲಿ ಶಿವಮೊಗ್ಗದಿಂದ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಬೆನ್ನಲ್ಲೆ  ಪೇಪರ್ ಟೌನ್ ಪೊಲೀಸ್ ಠಾಣೆ (Paper Town Police Station) ಪೊಲೀಸರು  ಬೈಪಾಸ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ಧಾರೆ. ವಾಹನವನ್ನು ಅಡ್ಡಗಟ್ಟಿ 3,550 ಕೆ.ಜಿ ಅಕ್ಕಿ ವಶಕ್ಕೆ ಪಡೆಯಲಾಗಿದೆ.  ಅಕ್ಕಿಯನ್ನು ಕಡೂರಿನಲ್ಲಿ ಪಾಲಿಶ್​ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.   


ಇನ್ನಷ್ಟು ಸುದ್ದಿಗಳು 


 

 

Share This Article