ಬಸ್​…ಬೇಕು ಬಸ್! 400 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಿಗಬೇಕಿದೆ ಸರ್ಕಾರಿ ಸಾರಿಗೆಯ ಶಕ್ತಿ!

Malenadu Today

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS  

ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಲೆನಾಡಿನ ಬಹುತೇಕ ಜನತೆಗೆ ಲಭ್ಯವಾಗುತ್ತಿಲ್ಲ . ಇದಕ್ಕೆ ಕಾರಣ ಜಿಲ್ಲೆಯ 431 ಹಳ್ಳಿಗಳಿಗೆ ಬಸ್ ಸೌಲಭ್ಯವಿಲ್ಲದೆ ಇರೋದು. ಪರಿಣಾಮ ವಿದ್ಯಾರ್ಥಿಗಳು ಹಾಗು ಮಹಿಳೆಯರು ಪ್ರತಿನಿತ್ಯದ ಓಡಾಟಕ್ಕೆ ಪರ್ಯಾಯ ದಾರಿಯನ್ನು ನೋಡಿಕೊಳ್ಳುವುದು ಅನಿವಾರ್ಯ. ಸರ್ಕಾರಿ ಬಸ್ ಸೇವೆ ಇಲ್ಲದ ಹಳ್ಳಿಗಳಲ್ಲಿ ಜನರು ದುಡ್ಡು ಕೊಟ್ಟು ಪ್ರಯಾಣಿಸಬೇಕಿದೆ 

ಭದ್ರಾವತಿ ಶಿಕಾರಿಪುರ ಹೊರತು ಪಡಿಸಿದರೆ, ಎಲ್ಲಾ ತಾಲೂಕುಗಳಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ ಗಳ ಸಂಪರ್ಕವೇ ಇಲ್ಲ.  ಶಾಲಾ ಕಾಲೇಜು ಮತ್ತು ಕಛೇರಿಗೆ ಕೆರಳುವವರ ಅನಿವಾರ್ಯವಾಗಿ ಖಾಸಗಿ ಬಸ್ ಅಥವಾ ಸ್ವಂತ ವಾಹನಗಳನ್ನ ಅವಲಂಬಿಸಿದ್ದಾರೆ.  ಮಲೆನಾಡಿನ ಕೆಲವು ಹಳ್ಳಿ ಗಳಲ್ಲಿ ರಸ್ತೆ ಸಂಪರ್ಕ ಇರುವುದಿಲ್ಲ. ಮತ್ತೆ ಕೆಲವು ಹಳ್ಳಿಗಳಿಗೆ ರಸ್ತೆ ಸಂಪರ್ಕವಿದ್ದರೂ, ಸರ್ಕಾರ ಬಸ್ ಸೌಲಭ್ಯ ಒದಗಿಸಿಲ್ಲ. . ಶಕ್ತಿಯೋಜನೆ ಜಾರಿ ಯಾದ ಮೇಲೂ ಸಹ ಹಲವು ಹಳ್ಳಿಗರು ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ಧಾರೆ. ಆದಾಗ್ಯು ಕೆಂಪು ಬಸ್ ಓಡಾಡುವುದು ಮಲ್ನಾಡ್​ನ ಹಳ್ಳಿಗಳಲ್ಲಿ ಕನಸಿನ ಮಾತೆಂಬಂತಾಗಿದೆ. 

ಬಸ್ ಸೌಲಭ್ಯವಿಲ್ಲದ ಹಳ್ಳಿಗಳು

ಭದ್ರಾವತಿಯಲ್ಲಿ 13, ಹೊಸನಗರ 116, ಸಾಗರ 74, ಸೊರಬ 46, ಶಿಕಾರಿಪುರ 15, ಶಿವಮೊಗ್ಗ 36, ತೀರ್ಥಹಳ್ಲಿ 137 ಒಟ್ಟು 413 ಹಳ್ಳಿಗಳಲ್ಲಿ ಬಸ್ ಸೌಲಭ್ಯಗಳಿಲ್ಲ. ಹೊಸನಗರಕ್ಕೆ ಪ್ರಸ್ಥುತ ನಾಲ್ಕು ಬಸ್ ಸೌಲಭ್ಯಗಳಿದ್ದು, ಅದರಲ್ಲಿ ಶಿವಮೊಗ್ಗದಿಂದ ಬರೀ ಎರಡಿದೆ. ಈ ಹಿಂದೆ ಸಾಗರದಿಂದ ಮಣಿಪಾಲ್ ಗೆ ತೆರಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬಸ್ ಒದಗಿಸಲಾಗಿತ್ತು. ಉತ್ತಮ ಬೇಡಿಕೆ ಇದ್ದರೂ ದಿಢೀರ್ ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೇ ರೀತಿ ರಾಮಚಂದ್ರಾಪುರ ಬೆಂಗಳೂರು ಬಸ್ ಅನ್ನು ಸ್ಥಗಿತಗೊಳಿಸಲಾಗಿದೆ. ಸಾಗರ ತೀರ್ಥಙಳ್ಳಿ ಮತ್ತು ಹೊಸನಗರದಲ್ಲಿ ಅತೀ ಹೆಚ್ಚು ಹಳ್ಳಿಗಳು ಕೆಎಸ್ ಆರ್ ಟಿಸಿ ಬಸ್ ಮುಖವನ್ನೇ ನೋಡಿಲ್ಲ. ಮಲೆನಾಡಿನ ಮತ್ತು ಕರಾವಳಿ ಭಾಗಕ್ಕೆ ಸಂಚಾರದ ಕೊಂಡಿಯಾಗಿ ಸಹಕಾರಿ ಸಾರಿಗೆ ಸಂಸ್ಥೆ ಬಸ್ ಸೇವೆ ಒದಗಿಸಿತ್ತು. ಆದರೆ ಕೋವಿಡ್ ಕಾರಣದಿಂದ ಉಂಟಾದ ಆರ್ಥಿಕ ಸಮಸ್ಯೆಯಿಂದಾಗಿ ಸಂಸ್ಥೆ ಬಾಗಿಲು ಹಾಕಿದ್ದರಿಂದ, ಗ್ರಾಮಸ್ಥರು ಬಸ್ ಸೇವೆಯಿಂದ ವಂಚಿತರಾಗಿದ್ದಾರೆ. 


ಇನ್ನಷ್ಟು ಸುದ್ದಿಗಳು 


 

 

Share This Article