KARNATAKA NEWS/ ONLINE / Malenadu today/ Aug 8, 2023 SHIVAMOGGA NEWS
ಶಿವಮೊಗ್ಗದ ಮಲ್ಲಿಗೇನಹಳ್ಳಿಯಿಂದ ಶಾಂತಿ ನಗರದವರೆಗೆ ಪದೇಪದೇ ಆಕ್ಸಿಡೆಂಟ್ ಆಗ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಶಿವಮೊಗ್ಗ ಎಸ್ಪಿ, ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಭದ್ರಾವತಿ ತಹಶೀಲ್ದಾರ್ರವರಿಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೋಹನ್ ವೀರಭದ್ರಪ್ಪ ಎಂಬವರು ಎಸ್ಹೆಚ್ 57 ನಲ್ಲಿ ಸಂಭವಿಸಿದ ಆಕ್ಸಿಡೆಂಟ್ಗಳ ಫೋಟೋಗಳನ್ನು ಹಾಕಿ ಅದರ ಬಗ್ಗೆ ವಿವರಿಸಿ, ಸ್ಥಳದಲ್ಲಿ ಬ್ಯಾರಿಕೇಡ್ ಅಥವಾ ಸೂಚನ ಫಲಕವನ್ನು ಅಳವಡಿಸುವಂತೆ ಮಾಡಿದ್ದಾರೆ.
ಫೇಸ್ಬುಕ್ ಪೋಸ್ಟ್ ನಲ್ಲಿ ಏನಿದೆ
ಮಾನ್ಯ ಪೊಲೀಸ್ ಇಲಾಖೆ SP Shivamogga SP Shivamogga /ಗ್ರಾಮ ಪಂಚಾಯತ್ /ತಹಶೀಲ್ದಾರ್ ರವರು ಭದ್ರಾವತಿ /ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ.
#ಮನವಿ: ಮಲ್ಲಿಗೇನಹಳ್ಳಿ ಇಂದ ಶಾಂತಿನಗರದ ವರೆಗೆ SH57 ರಸ್ತೆಯಲ್ಲಿ ನೆಡೆಯುತ್ತಿರುವ ಅಪಘಾತಗಳನ್ನು ತಡೆಯಲು ಬ್ಯಾರಿಗೇಡ್ ಅಥವಾ ಸೂಚನಾ ಫಲಕ ಹಾಕುವ ಬಗ್ಗೆ.
#ಮಾನ್ಯರೇ :
ತಮಲ್ಲಿ ಕೇಳಿಕೊಳ್ಳುವುದು ಏನಂದರೆ ಕಳೆದ ಎರಡು ತಿಂಗಳಿಂದ ಮಲ್ಲಿಗೇನಹಳ್ಳಿ ಇಂದ ಶಾಂತಿನಗರದ ವರೆಗೆ SH57 ರಸ್ತೆಯಲ್ಲಿ ತುಂಬಾ ಸಂಖ್ಯೆಯಲ್ಲಿ ವಾಹನ ಅಪಘಾತ ಸಾವು ನೋವುಗಳು ಸಂಬಂವಿಸಿದ್ದು ಇದರ ಬಗ್ಗೆ ಎಲ್ಲಾ ಅಧಿಕಾರಿ ವರ್ಗಗಳು ಮೌನವ್ಹಿಸಿದ್ದು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ..
1:ಈ ರಸ್ತೆಯಲ್ಲಿ ವೇಗ ಮಿತಿ ಬೋರ್ಡ್ ಗಳನ್ನ ಅಳವಡಿಸಿ ರೋಡ್ ಅಮ್ಸ್ ಗಳನ್ನು ನಿರ್ಮಿಸಿ.
2: ಗ್ರಾಮ ಪಂಚಾಯಿತಿ ವತಿಯಿಂದ ಸರಿಯಾದ ಕಸದ ವಿಲೇವಾರಿ ಆಗದ ಕಾರಣ ನಾಯಿಗಳು ಬೈಕ್ ಸವಾರರಿಗೆ ತುಂಬಾ ಅಡಚಣೆ ಮಾಡುತ್ತಿದೆ.
3:ಬೀದಿ ದೀಪದ ಸರಿಯಾದ ವ್ಯವಸ್ತೆಯನ್ನು ಸರಿಪಡಿಸಿ ಅಮಾಯಕ ಜೀವಿಗಳನ್ನು ಉಳಿಸಬೇಕಾಗಿ ತಮ್ಮಲ್ಲಿ ಸಮಸ್ತ ಗ್ರಾಮಸ್ಥರ ಪರವಾಗಿ ಕೇಳಿಕೊಳ್ಳುತ್ತೇವೆ.
