KARNATAKA NEWS/ ONLINE / Malenadu today/ Jul 29, 2023 SHIVAMOGGA NEWS
ಶಿವಮೊಗ್ಗದಲ್ಲಿ ಸಂಚರಿಸುವ ಕೆಲವು ರೈಲುಗಳು ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ಇದೇ ಆಗಸ್ಟ್ ಒಂದರಂದು ವ್ಯತ್ಯಯವಾಗಲಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ರೈಲುಗಳು ರದ್ದು/ ಮಾರ್ಗ ಮಧ್ಯ ನಿಯಂತ್ರಣ
ಮಂಡ್ಯ ನಿಲ್ದಾಣ ಹತ್ತಿರದ ಲೆವೆಲ್ ಕ್ರಾಸ್ ಗೇಟ್ ನಂ-73ರ ಕೆಳ ಸೇತುವೆ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿಯ ವಿವರ.
I. ರೈಲುಗಳ ರದ್ದು:
1. ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮೈಸೂರು ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಂದು ರದ್ದುಗೊಳಿಸಲಾಗುತ್ತಿದೆ.
2. ರೈಲು ಸಂಖ್ಯೆ 06268 ಮೈಸೂರು-ಅರಸಿಕೆರೆ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 31 ರಂದು ರದ್ದುಗೊಳಿಸಲಾಗುತ್ತಿದೆ.
II. ಮಾರ್ಗ ಮಧ್ಯ ನಿಯಂತ್ರಣ:
1. ಜುಲೈ 30 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16591 ಎಸ್.ಎಸ್.ಎಸ್ ಹುಬ್ಬಳ್ಳಿ-ಮೈಸೂರು ದೈನಂದಿನ ಹಂಪಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
2. ಜುಲೈ 30 ರಂದು ಮೈಲಾಡುತುರೈ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16231 ಮೈಲಾಡುತುರೈ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
3. ಜುಲೈ 30 ರಂದು ತಾಳಗುಪ್ಪಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 45 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
4. ಜುಲೈ 30 ರಂದು ತಿರುಪತಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16220 ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
5. ಜುಲೈ 30 ರಂದು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16021 ಡಾ ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 120 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
II. ರೈಲುಗಳು ಭಾಗಶಃ ರದ್ದು/ತಡವಾಗಿ ಪ್ರಾರಂಭ/ನಿಯಂತ್ರಣ
ತುಮಕೂರು-ಅರಸೀಕೆರೆ ಭಾಗದ ಹೆಗ್ಗೆರೆ ನಿಲ್ದಾಣದ ಪಾದಾಚಾರಿಗಳ ಮೇಲ್ಸೆತುವೆ ಕಾಮಗಾರಿ ಸಲುವಾಗಿ ಆಗಸ್ಟ್ 1 ರಂದು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ವಿವರ.
a) ರೈಲು ಭಾಗಶಃ ರದ್ದು:
1. ರೈಲು ಸಂಖ್ಯೆ 06514 ಶಿವಮೊಗ್ಗ ಟೌನ್-ತುಮಕೂರು ವಿಶೇಷ ಡೆಮು ರೈಲನ್ನು ತಿಪಟೂರು ಮತ್ತು ತುಮಕೂರು ನಿಲ್ದಾಣಗಳ ನಡುವೆ ಆಗಸ್ಟ್ 1 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ.
b) ರೈಲುಗಳು ತಡವಾಗಿ ಪ್ರಾರಂಭ:
1. ಆಗಸ್ಟ್ 1 ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06512 ತುಮಕೂರು-ಬಾನಸವಾಡಿ ಡೆಮು ವಿಶೇಷ ರೈಲು 120 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.
2. ಆಗಸ್ಟ್ 1 ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16567 ತುಮಕೂರು-ಶಿವಮೊಗ್ಗ ಟೌನ್ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು 15 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.
ಸಿ) ರೈಲು ನಿಯಂತ್ರಣ:
1. ರೈಲು ಸಂಖ್ಯೆ 12089 ಕೆ.ಎಸ್.ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 1 ರಂದು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
BIG EXCLUSIVE / ಶರತ್ಗಾಗಿ ಜ್ಯೋತಿರಾಜ್ ಹುಡುಕಾಟ! ಡ್ರೋಣ್ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!
