ತವರು ಮನೆ ಆಸ್ತಿಗಾಗಿ ಕೊಲೆಯಾಗುತ್ತಿವೆ ಕರುಳ ಸಂಬಂಧಗಳು! ಅಕ್ಕನನ್ನೆ ಕೊಂದ ತಮ್ಮ! ಏನಿದು ಪ್ರಕರಣ!

Malenadu Today

KARNATAKA NEWS/ ONLINE / Malenadu today/ May 21, 2023  

ದಾವಣಗೆರೆ/ ಕಾಯ್ದೆ ಕಟ್ಟಳೆಗಳ ಬಳಕೆ ಹಾಗೂ ದರ್ಬಳಕೆಯ ಪರಿಣಾಮದಿಂದಾಗಿ, ಕೌಟುಂಬಿಕ ಸಂಬಂಧಗಳು ಛಿದ್ರವಾಗುತ್ತಿದೆ. ಅದರಲ್ಲಿಯು ಒಡಹುಟ್ಟಿದ ಅಣ್ಣ-ತಂಗಿ, ಅಕ್ಕ -ತಮ್ಮಂದಿರ ಸಂಬಂಧಗಳು ನಂಟನ್ನೆ ಕಳೆದುಕೊಳ್ಳುತ್ತಿದೆ. 

ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡ್ತಿದ್ದ ಕಾಡಾನೆ ಸೆರೆ

ಅಷ್ಟೆಯಾಕೆ ಕೊಲೆಯಾಗುವ ಮಟ್ಟಕ್ಕೆ ಈ ದ್ವೇಷಗಳು ಬೆಳೆಯುತ್ತಿದೆ ಎನ್ನುವುದಕ್ಕೆ ನ ದಾವಣಗೆರೆಯ, ಚನ್ನಗಿರಿಯ ಗುಳ್ಳಹಳ್ಳಿಯ ಘಟನೆ ಸಾಕ್ಷಿಯಾಗಿದೆ.   ಇಲ್ಲಿ, ತಮ್ಮನೇ ಅಕ್ಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ಸಂಭವಿಸಿದೆ. ಈ ಸಂಬಂದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. 

ಸಾರ್ವಜನಿಕರಿಗೆ ಮಾಹಿತಿ! ನಾಳೆ ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

ಗುಳ್ಳಹಳ್ಳಿ ಗ್ರಾಮದ ಅಕ್ಕಮ್ಮ(64) ಮೃತರು. ಪ್ರಭಾಕರ್, ಆತನ ಪುತ್ರ ದಿಲೀಪ್‌ ಮತ್ತು ಪುತ್ರಿ ತ್ರಿವೇಣಿ ಬಂಧಿತ ಆರೋಪಿಗಳು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕಮ್ಮ ಮತ್ತು ಪ್ರಭಾಕರ್ ಕುಟುಂಬಗಳ ನಡುವೆ ವಿವಾಧವಿತ್ತು. ತವರಿನ ಆಸ್ತಿಯಲ್ಲಿ ತಮಗೂ ಪಾಲು ಕೇಳಿ ಅಕ್ಕಮ್ಮ ಇತರ ಸಹೋದರಿಯರ ಜೊತೆಗೆ ಕೋರ್ಟ್​ ಮೆಟ್ಟಿಲೇರಿದ್ದರು.  ಪ್ರಕರಣದಲ್ಲಿ  ನ್ಯಾಯಾಲಯದ ಆದೇಶದಂತೆ ಶನಿವಾರ ಜಮೀನು ಸರ್ವೆ ಕಾರ್ಯ ನಡೆಯುತ್ತಿತ್ತು. ಸರ್ವೆಯ‌ರ್ ಒಬ್ಬರು ಅಕ್ಕಮ್ಮನ ಜತೆ ಜಮೀನು ಅಳತೆ ಮಾಡಲು ತೆರಳಿದ್ದರು. 

ದುಡ್ಡು..ದುಡ್ಡು..ದುಡ್ಡು..! ಕೊಟ್ಟ ಹಣ ವಾಪಸ್ ಕೇಳುತ್ತಿರುವ ಪರಾಚಿತ ಅಭ್ಯರ್ಥಿಗಳು!

ಈ ವೇಳೆ ಆರೋಪಿ ಪ್ರಭಾಕರ್‌, ಆತನ ಪುತ್ರ ದಿಲೀಪ್ ಮತ್ತು ಪುತ್ರಿ ತ್ರಿವೇಣಿ ಕೂಡ ಜಮೀನನಲ್ಲಿ ಇದ್ದರು. ಈ ವೇಳೆ ನಮ್ಮ ಜಮೀನು ಅಳತೆ ಮಾಡಿಸಲು ನೀನು ಯಾರು ಎಂದು ಹೇಳುತ್ತಾ ದಿಲೀಪ ಕುಡುಗೋಲಿನಿಂದ ಅಕ್ಕಮ್ಮನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅದೇ ಸಂದರ್ಭದಲ್ಲಿ, ಪ್ರಭಾಕರ್​ ಅಕ್ಕಮ್ಮನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅಕ್ಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ಧಾರೆ.

ಹಳೆ ಸಿಟ್ಟಿಗೆ 6 ವರ್ಷದ ಬಾಲಕಿ ಫೋಟೋ ಮೇಲೆ ಅಶ್ಲೀಲ ವಿಕೃತಿ! ಮಹಿಳೆಗೆ ಕೋರ್ಟ್ ಶಿಕ್ಷೆ! ಸೋಶಿಯಲ್​ ಮೀಡಿಯಾದಲ್ಲಿ ಹೀಗೆಲ್ಲಾ ಮಾಡಬೇಡಿ ಹುಷಾರ್!

Share This Article