ನಂಜಪ್ಪ ಲೈಫ್​ ಕೇರ್​ ನಲ್ಲಿ ಮೈಕ್ರೋವೇವ್ ಅಬ್ಲೇಶನ್ ಮೂಲಕ ಆಪರೇಷನ್ ಯಶಸ್ವಿ! ವಿಶೇಷ ವಿಷಯವಿದೆ ಓದಿ!

ajjimane ganesh

Nanjappa Life Care : ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯು ಆಪರೇಷನ್​ ಒಂದರಲ್ಲಿ ವೈದ್ಯಕೀಯ ಕ್ಷೇತ್ರದ ವಿಶೇಷ ಟೆಕ್ನಾಲಿಜಿಯನ್ನು ಬಳಸಿಕೊಂಡು ಯಶಸ್ವಿಯಾಗಿದೆ. 68 ವರ್ಷದ ವೃದ್ಧರೊಬ್ಬರಿಗೆ ಯಕೃತ್ತಿನ ಕ್ಯಾನ್ಸರ್ಗೆ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಯಲ್ಲಿ  ಮೈಕ್ರೋವೇವ್ ಅಬ್ಲೇಶನ್ ಎಂಬ ತಂತ್ರಜ್ಞಾನದ ಮೂಲಕದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. 

ಹೊಟ್ಟೆ ನೋವಿನಿಂದ ಪರೀಕ್ಷೆಯಿಂದ ಕ್ಯಾನ್ಸರ್ ಇರುವದು ಪತ್ತೆ

ಶಿವಮೊಗ್ಗ ಜಿಲ್ಲೆಯ ಅತ್ತಿಗುಂದದ ನಿವಾಸಿ ನಂಜಯ್ಯ ಎಂಬವರು ಬಲ ಹೊಟ್ಟೆಯ ನೋವಿನಿಂದ ನರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಗುರುಚನ್ನ ಬಸವಯ್ಯ ಪರೀಕ್ಷೆ ನಡೆಸಿದರು. ಅಲ್ಲದೆ ವಿವಿಧ ತಪಾಸಣೆಗೆ ಒಳಪಡಿಸಿದ್ದರು. ಬಳಿಕ ರೋಗಿಯ ಯಕೃತ್ತಿನಲ್ಲಿ 4.5 x 3.2 cm ಗಾತ್ರದ ಗಡ್ಡೆ ಇರುವುದು ದೃಢಪಟ್ಟಿತ್ತು. ಇದು ಹೆಪಟೋಸೆಲ್ಯೂಲರ್ ಕಾರ್ಸಿನೋಮ (ಯಕೃತ್ತಿನ ಕ್ಯಾನ್ಸರ್) ಎಂದು ವೈದ್ಯರು ಖಚಿತಪಡಿಸಿಕೊಂಡಿದ್ದರು. ಅಲ್ಲದೆ ಕ್ಯಾನ್ಸರ್ ಆರಂಭಿಕ ಹಂತದಲ್ಲಿತ್ತು. 

- Advertisement -

ಪರ್ಯಾಯ ಚಿಕಿತ್ಸೆಯ ಆಯ್ಕೆ

ಸಾಮಾನ್ಯವಾಗಿ ನಡೆಸುವ ಆಪರೇಷನ್​ ಮಾಡಿದ್ದರೆ, ರೋಗಿಯು ಯಕೃತ್ತಿನ ಬಹುತೇಕ ಭಾಗವನ್ನು ಕಳೆದುಕೊಳ್ಳುತ್ತಿದ್ದರು. ಏಕೆಂದರೆ, ಗಡ್ಡೆ ಇದ್ದ ಸ್ಥಳ ಅತಿ ಸೂಕ್ಷ್ಮವಾಗಿತ್ತು. ಅಲ್ಲದೆ ರೋಗಿಯು ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿದ್ದರು. ಹಾಗಾಗಿ ಕಾಮನ್ ಆಗಿ ನಡೆಸುವ ಶಸ್ತ್ರಚಿಕಿತ್ಸೆ ಕಷ್ಟಸಾಧ್ಯವಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸಾ ತಜ್ಞರ ತಂಡವು ಮೈಕ್ರೋವೇವ್ ಅಬ್ಲೇಶನ್ ತಂತ್ರಜ್ಞಾನವನ್ನು ಆಯ್ದುಕೊಂಡಿತು. 

Nanjappa Life Care : High-Tech Success: Shivamogga Nanjappa Life Care Cures Liver Cancer
Nanjappa Life Care : High-Tech Success: Shivamogga Nanjappa Life Care Cures Liver Cancer

ಬೆಳಗಾವಿ ಮಹಿಳೆಗೆ ಶಿವಮೊಗ್ಗದಲ್ಲಿ ನಡೆಯಿತು ವಿಶಿಷ್ಟವಾದ TAVI ಚಿಕಿತ್ಸೆ | ಇದೇ ಅಚ್ಚರಿಯ ವಿಷಯ

ಏನಿದು ಮೈಕ್ರೋವೇವ್ ಅಬ್ಲೇಶನ್ Microwave Ablation (MWA)

ಇದು ಚಿಕ್ಕ ರಂಧ್ರದ ಮೂಲಕ ಚಿಕಿತ್ಸೆ ನೀಡುವ ಆಧುನಿಕ ವಿಧಾನವಾಗಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ Minimally Invasive Procedure ಎಂದು ಹೇಳಲಾಗುತ್ತದೆ.. ಇದರ ಮೂಲಕ ಶಸ್ತ್ರಚಿಕಿತ್ಸೆ ಮಾಡದೆಯೇ ಕ್ಯಾನ್ಸರ್ ಗಡ್ಡೆಗಳನ್ನು ನಾಶಪಡಿಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ ವೈದ್ಯರು ಅಲ್ಟ್ರಾಸೌಂಡ್ (Ultrasound) ಅಥವಾ ಸಿ.ಟಿ. ಸ್ಕ್ಯಾನ್ (CT Scan) ಬಳಸಿಕೊಂಡು, ಒಂದು ಸಣ್ಣ ಸೂಜಿಯನ್ನು (Micro wave Antenna Probe) ನೇರವಾಗಿ ಕ್ಯಾನ್ಸರ್ ಗಡ್ಡೆ ಇರುವ ಸ್ಥಳಕ್ಕೆ ಸೇರಿಸುತ್ತಾರೆ. ಸೂಜಿಯು ಸೂಕ್ಷ್ಮ ತರಂಗಗಳ (Micro waves) ಮೂಲಕ ಹೆಚ್ಚಿನ ಶಕ್ತಿಯನ್ನು (ಶಾಖ) ಗಡ್ಡೆಗೆ ರವಾನಿಸುತ್ತದೆ. ಈ ತೀವ್ರವಾದ ಶಾಖದಿಂದಾಗಿ ಕ್ಯಾನ್ಸರ್ ಕೋಶಗಳು ಸುಟ್ಟುಹೋಗಿ, ಸಂಪೂರ್ಣವಾಗಿ ನಾಶವಾಗುತ್ತವೆ.ಶಸ್ತ್ರಚಿಕಿತ್ಸೆಗಿಂತ ಇದು ಹೆಚ್ಚು ಸುರಕ್ಷಿತ. ಏಕೆಂದರೆ ಇಲ್ಲಿ ದೊಡ್ಡದಾದ ಗಾಯ ಮಾಡಬೇಕಿಲ್ಲ. ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳುವುದಷ್ಟೆ ಅಲ್ಲದೆ  ಅಂಗಾಂಶಕ್ಕೆ ಕಡಿಮೆ ಹಾನಿಕಾರಕ 

Nanjappa Life Care : High-Tech Success: Shivamogga Nanjappa Life Care Cures Liver Cancer
Nanjappa Life Care : High-Tech Success: Shivamogga Nanjappa Life Care Cures Liver Cancer

ಹೊಟ್ಟೆಯ ರಕ್ತನಾಳದ ಗಂಭೀರ ಶಸ್ತ್ರಚಿಕಿತ್ಸೆ: ಮಹಿಳೆಯ ಜೀವ ಉಳಿಸಿದ ಮ್ಯಾಕ್ಸ್ ಆಸ್ಪತ್ರೆ ವೈದ್ಯರು

ಒಂದೇ ದಿನದಲ್ಲಿ ರೋಗಿ ಆಸ್ಪತ್ರೆಯಿಂದ ಬಿಡುಗಡೆ

ಇನ್ನೂ ನಂಜಯ್ಯರವರ ಅನುಮತಿಯೊಂದಿಗೆ ನಂಜಪ್ಪ ಲೈಫ್​ ಕೇರ್ ಆಸ್ಪತ್ರೆಯ ವೈದ್ಯರು ಮೈಕ್ರೋವೇವ್ ಅಬ್ಲೇಶನ್ ಮೂಲಕ ಆಪರೇಶನ್​ಗೆ ಅವರನ್ನು ಅಡ್ಮಿಟ್ ಮಾಡಿಕೊಂಡರು.  ಅರಿವಳಿಕೆ ತಜ್ಞ ಡಾ. ಪ್ರವೀಣ್ ಕುಮಾರ್ ಕೆ.ಆರ್. ಅವರು ಲೋಕಲ್ ಅನಾಸ್ತೇಷಿಯ ನೀಡಿದರು. ಎಂಡೋ ವ್ಯಾಸ್ಕ್ಯುಲರ್ ರೇಡಿಯಾಲಜಿಸ್ಟ್ ಡಾ. ನಿಶಿತಾ ಅವರು ಅಲ್ಟ್ರಾಸೌಂಡ್ ಮಾರ್ಗದರ್ಶನ ಪಡೆದು  ಶಸ್ತ್ರ ಚಿಕಿತ್ಸೆ ನೀಡಿದರು. ಪೆನ್ ರಿಫಿಲ್‌ನಷ್ಟಿದ್ದ ‘ಮೈಕ್ರೋವೇವ್ ಆಂಟೆನಾ ಪ್ರೋಬ್’ ಎಂಬ ಸಾಧನ ಬಳಸಿ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ಸುಡಲಾಯಿತು. ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು. ಹೀಗಾಗಿ ಅಂದೇ ಸಂಜೆ ಕೆಲವು ಔಷಧಿಗಳೊಂದಿಗೆ ಅವರನ್ನು ಮನೆಗೆ ಕಳುಹಿಸಲಾಯಿತು. 

ಚಿಕಿತ್ಸೆಯ ಕೆಲವು ವಾರಗಳ ನಂತರದ ಎಂ.ಆರ್.ಐ. ಸ್ಕ್ಯಾನ್ ವರದಿಯಲ್ಲಿ ಗಡ್ಡೆ ಸಂಪೂರ್ಣವಾಗಿ ನಾಶವಾಗಿರುವುದು ದೃಢಪಟ್ಟಿದೆ. ಶಸ್ತ್ರಚಿಕಿತ್ಸೆ ಕಷ್ಟಸಾಧ್ಯ ಎಂಬಂತಹ ಪ್ರಕರಣಗಳಲ್ಲಿ ಈ ವಿಧಾನವು ಉತ್ತಮ ಆಯ್ಕೆಯಾಗಿದೆ. ಚಿಕಿತ್ಸೆಯ ನಂತರ ರೋಗಿಗಳು ಒಂದು ಅಥವಾ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ. ಬಳಿಕ ಅವರು ಎಂದಿನಂತೆ ತಮ್ಮ ಸಾಮಾನ್ಯ ಜೀವನಕ್ಕೆ ಶೀಘ್ರವಾಗಿ ಮರಳಬಹುದು. ಈ ವಿಧಾನದಲ್ಲಿ ರಕ್ತಸ್ರಾವ, ಸೋಂಕು ಅಥವಾ ಯಕೃತ್ತಿನ ವೈಫಲ್ಯದಂತಹ ಗಂಭೀರ ಅಪಾಯಗಳು ಕಡಿಮೆ. ಇಲ್ಲಿ ಕ್ಯಾನ್ಸರ್ ಗಡ್ಡೆ ಮಾತ್ರ ನಾಶವಾಗುತ್ತದೆ. ಆರೋಗ್ಯಕರ ಯಕೃತ್ತಿನ ಭಾಗ ಸಂರಕ್ಷಿಸಲ್ಪಡುತ್ತದೆ.

“ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆಯು ಚಿಕ್ಕ ರಂದ್ರದ ಮೂಲಕ ಕ್ಯಾನ್ಸರ್ ಕೋಶಗಳು ಅಥವಾ ಗೆಡ್ಡೆಯನ್ನು ವಿದ್ಯುತ್ ಶಾಖದ ಮೂಲಕ ನಾಶ ಮಾಡುವ ಆಧುನಿಕ ಕಾರ್ಯವಿಧಾನವು ಇದೀಗ ಶಿವಮೊಗ್ಗದಲ್ಲಿ ಇರುವ ನಂಜಪ್ಪ ಲೈಫ್ ಕೇರ್ ನಲ್ಲಿ ಲಭ್ಯವಿದೆ. ಇನ್ನು ಮುಂದೆ ಇಂತಹ ಚಿಕಿತ್ಸೆಗಳಿಗಾಗಿ ದೊಡ್ಡ ನಗರಗಳಿಗೆ ಪ್ರಯಾಣಿಸಬೇಕಿಲ್ಲ ಅತ್ಯಾಧುನಿಕ ಚಿಕಿತ್ಸೆ ಮತ್ತು ಆರೈಕೆ ಇಲ್ಲಿಯೇ ಲಭ್ಯವಿದೆ.”-ಡಾ|| ನಿಶಿತ, ಎಂಡೋ ವ್ಯಾಸ್ಕೂಲರ್ ಇಂಟರ್ವೆನ್ಷನಲ್ ರೇಡಿಯೋಲೋಜಿಸ್ಟ್
Nanjappa Life Care : High-Tech Success: Shivamogga Nanjappa Life Care Cures Liver Cancer
Nanjappa Life Care : High-Tech Success: Shivamogga Nanjappa Life Care Cures Liver Cancer

ಹೆಪಟೋಸೆಲ್ಯೂಲರ್ ಕಾರ್ಸಿನೋಮ (ಯಕೃತ್ತಿನ ಕ್ಯಾನ್ಸರ್) ಎಂದರೇನು?

ಹೆಪಟೋಸೆಲ್ಯೂಲರ್ ಕಾರ್ಸಿನೋಮ ಎಂದರೆ ಯಕೃತ್ತಿನ ಕೋಶಗಳಿಂದಲೇ (Hepatocytes) ಉದ್ಭವಿಸುವ ಅತ್ಯಂತ ಸಾಮಾನ್ಯ ವಿಧದ ಯಕೃತ್ತಿನ (ಲಿವರ್) ಕ್ಯಾನ್ಸರ್. ಯಕೃತ್ತಿನ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವ ಕೋಶಗಳಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಪ್ರಾರಂಭಿಸಿದಾಗ ಇದನ್ನು ಹೆಪಟೋಸೆಲ್ಯೂಲರ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ದೀರ್ಘಕಾಲದವರೆಗೆ ಯಕೃತ್ತಿಗೆ ಹಾನಿಯುಂಟುಮಾಡುವ ಕಾಯಿಲೆಗಳಿಂದ ಇದು ಉಂಟಾಗುತ್ತದೆ. ಉದಾಹರಣೆಗೆ, ಹೆಪಟೈಟಿಸ್ ಬಿ ಅಥವಾ ಸಿ ಸೋಂಕುಗಳು ಮತ್ತು ಸಿರೋಸಿಸ್ (ಯಕೃತ್ತಿನ ಗಂಭೀರವಾದ ಗಾಯ ಅಥವಾ ಗುರುತು). ಯಕೃತ್ತಿನಲ್ಲಿ ಒಂದೇ ಒಂದು ದೊಡ್ಡ ಗಡ್ಡೆಯಾಗಿ (ಟ್ಯೂಮರ್) ಕಾಣಿಸಿಕೊಳ್ಳಬಹುದು, ಅಥವಾ ಅದು ಹಲವಾರು ಸಣ್ಣ ಗಡ್ಡೆಗಳಾಗಿ ಹರಡಬಹುದು. ಆರಂಭಿಕ ಹಂತದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಅತ್ಯಗತ್ಯ.

Nanjappa Life Care : High-Tech Success: Shivamogga Nanjappa Life Care Cures Liver Cancer
Nanjappa Life Care : High-Tech Success: Shivamogga Nanjappa Life Care Cures Liver Cancer

ಸರ್ಜಿ ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆಯಿಂದ 9 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಜಿಲ್ಲೆಯಲ್ಲಿ ಇದೇ ಮೊದಲು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Nanjappa Life Care : High-Tech Success: Shivamogga Nanjappa Life Care Cures Liver Cancer

Share This Article