ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ರಾಮನಗರದ ಓರ್ವ ಸೇರಿ ಶಿವಮೊಗ್ಗದ ಐವರನ್ನ ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ನ್ಯಾಮತಿ ತಾಲ್ಲೂಕಿನ ಹೊನ್ನಾಳಿ-ಶಿವಮೊಗ್ಗ ರಸ್ತೆ ಯಲ್ಲಿರುವ ಸಾಲಬಾಳು ಕ್ರಾಸ್ ಸಮೀಪ ಆರೋಪಿಗಳು ಗಾಂಜಾ ಮಾರುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇಲ್ಲಿನ ಕಲ್ಬಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯ ಪಕ್ಕದ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಆರೋಪಿಗಳು ಗಾಂಜಾ ಮಾರಾಟಕ್ಕೆ ನಿಂತಿದ್ದರು.
ಈ ವೇಳೆ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದದ್ದಾರೆ. ನ್ಯಾಮತಿ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

Five Arrested with Ganja near Nyamathi
ಬಂಧಿತ ಆರೋಪಿಗಳು: ಅರ್ಬಾಜ್ ಖಾನ್ (ಶಿವಮೊಗ್ಗ), ಶಂಕರನಾಯ್ಕ (ಹೊಸಜೋಗ), ಮಹಮ್ಮದ್ ಹುಸೈನ್ ರಝ (ಶಿವಮೊಗ್ಗ), ಜಾಫರ್ ಸಾದೀಖ್ (ಶಿವಮೊಗ್ಗ), ಮತ್ತು ಮಹಮ್ಮದ್ ರೂಹಿತ್ (ರಾಮನಗರ). ಇವರಿಂದ 3 ಕೆ.ಜಿ. 154 ಗ್ರಾಂ ತೂಕದ ಗಾಂಜಾ, ಮೂರು ಮೊಬೈಲ್ ಫೋನ್, ಎರಡು ದ್ವಿಚಕ್ರ ವಾಹನವನ್ನ ಜಪ್ತಿ ಮಾಡಲಾಗಿದೆ.
ಬಂಧಿತ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
