ಶಿವಮೊಗ್ಗ ಸಿಟಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ-ಪೊಲೀಸ್​ ಇಲಾಖೆಯ ಮಹತ್ವದ ಕ್ರಮ! ಇಲ್ಲಿದೆ ಡಿಸಿ ಆದೇಶ?

Malenadu Today

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS

ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರವೊಂಧನ್ನ ಕೈಗೊಂಡಿದೆ. ವಾಹನ ನಿಲುಗಡೆಗೆ ಕೆಲವೊಂದು ನಿಯಮಗಳನ್ನು ಅಳವಡಿಸಿದ್ದು, ದಿನಬಿಟ್ಟು ದಿನ ವೆಹಿಕಲ್​ಗಳನ್ನು ನಿಲ್ಲಿಸಲು ನಿಯಮ ರೂಪಿಸಿದೆ. ಈ ಸಂಬಂಧ    ಮೋಟಾರು ವಾಹನ ಕಾಯ್ದೆ 1988 ಕಲಂ 177 ರನ್ವಯ ಪೂರ್ವ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ  ಸುಗಮ ಸಂಚಾರಕ್ಕೆ  ದಿನ ಬಿಟ್ಟು ದಿನ  ವಾಹನ ನಿಲುಗಡೆಗೆ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ  (District Collector Dr. R. Selvamani) ಆದೇಶಿಸಿದ್ದಾರೆ. 

ಟ್ರಾಫಿಕ್​  ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ಬರುವ  ಪ್ರಮುಖ ರಸ್ತೆಗಳಲ್ಲಿ ದೇವಸ್ಥಾನ, ಆಸ್ಪತ್ರೆ, ಬ್ಯಾಂಕ್, ಹೋಟೆಲ್ ಮತ್ತು ಲಾಡ್ಜ್​​ಗಳು ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ  ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ  ದಿನಬಿಟ್ಟು ದಿನ ವಾಹನ ನಿಲುಗಡೆ ಸಹಕಾರಿಯಾಗಲಿದೆ 

ಯಾವೆಲ್ಲಾ ರಸ್ತೆಗಳಲ್ಲಿ ? 

ರತ್ನಮ್ಮ ಮಾಧವ ರಾವ್ ರಸ್ತೆಯ ಸುರಭಿ ಹೋಟೆಲ್ ಕ್ರಾಸ್‍ನಿಂದ ಆದಿತ್ಯ ಡಯಾಗ್ನೋಸ್ಟಿಕ್ ಕ್ರಾಸ್‍ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ.

ಪಾರ್ಕ್ ಬಡಾವಣೆಯ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಕ್ರಾಸ್ (ಹಳೆಯ ಸಿಂಡಿಕೇಟ್ ಬ್ಯಾಂಕ್ ) ನಿಂದ ಬಾಲ್ ರಾಜ್ ಅರಸ್ ರಸ್ತೆಯ ಜಾಯಾಲುಕಾಸ್ (ಮಧುರಾ ಪ್ಯಾರಡೈಸ್ ) ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. 

ವಾಸವಿ ವೃತ್ತದಿಂದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನಬಿಟ್ಟು ದಿನ ವಾಹನ ನಿಲುಗಡೆ. 

ತಿಲಕ್ ನಗರ ಮುಖ್ಯ ರಸ್ತೆಯ ಭರತ್ ನ್ಯೂರೋಕ್ಲೀನಿಕ್ ನಿಂದ ಪಾರ್ಕ್ ಬಡವಣೆಯ ಮುಖ್ಯ ರಸ್ತೆ (ರಾಘವೇಂದ್ರ ಸ್ವಾಮಿ ಮಠದ ಹಿಂಭಾಗ ರಸ್ತೆ) ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. 

ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ನಿಂದ ಶಿವಶಂಕರ ಗ್ಯಾರೇಜ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ. 

ದಿ|| ಪಂಡಿತ್ ದೀನ್ ದಯಾಳ್ ರಸ್ತೆಯ ಆಕಾಶ್ ಇನ್ ಹೋಟೇಲ್ ನಿಂದ ಪಂಚಮುಖಿ ಅಂಜನೇಯ ಸ್ವಾಮಿ ದೇವಸ್ಥಾನದವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ.

ವಾಹನ ನಿಲುಗಡೆ ನಿಷೇಧ ಮತ್ತು ವಾಹನ ನಿಲುಗಡೆ 

ತಿಲಕ್ ನಗರ ಮುಖ್ಯ ರಸ್ತೆಯಿಂದ ಭರತ್ ನ್ಯೂರೋಕ್ಲೀನಿಕ್ ರಸ್ತೆಯವರೆಗೆ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿ, ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆ. 

ತಿಲಕ್ ನಗರ ರಾಘವೇಂದ್ರಸ್ವಾಮಿ ಮಠದ ರಸ್ತೆಯಿಂದ ಜಿಲ್ಲಾ ಭೋವಿ ಸಮುದಾಯ ಭವನದವರೆಗೆ ಎಡಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿ, ಬಲಭಾಗದಲ್ಲಿ ವಾಹನ ನಿಲುಗಡೆ. 

ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಕ್ರಾಸ್ ನಿಂದ ಕೆನರಾ ಬ್ಯಾಂಕ್ ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ. 

ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ವರೆಗೆ ವಾಹನ ನಿಲುಗಡೆ ನಿಷೇಧ. ದಿ|| ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿ ಜ್ಯೋತಿ ಗಾರ್ಡನ್ ನಿಂದ ಆಕಾಶ್ ಇನ್ ಹೋಟೆಲ್ ವರೆಗೆ ವಾಹನ ನಿಲುಗಡೆ ನಿಷೇಧ. 

ದಿ|| ಪಂಡಿತ್ ದೀನ್ ದಯಾಳ್ ರಸ್ತೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಾಲಾಜಿ ಟೂರ್ಸ್ ಅಂಡ್ ಟ್ರಾವೆಲ್ಸ್‍ವರೆಗೆ ವಾಹನ ನಿಲುಗಡೆ ನಿಷೇಧ. 

ಕುವೆಂಪು ರಸ್ತೆಯ ಶಿವಶಂಕರ ಗ್ಯಾರೇಜ್‍ನಿಂದ ಬಿ.ಜೆ.ಪಿ ಪಾರ್ಟಿ ಆಫೀಸ್ ಕ್ರಾಸ್‍ವರೆಗೆ ಬಲಭಾಗದಲ್ಲಿ ಮಾತ್ರ ವಾಹನ ನಿಲುಗಡೆಗೆ ಆದೇಶಿಸಲಾಗಿದೆ.


ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಶಿವಮೊಗ್ಗದ ಮೂವರು ಹಣ್ಣಿನ ವ್ಯಾಪಾರಿಗಳ ಬಂಧನ! ಕಾರಣವೇನು?

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ  ಕಳ್ಳತನ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ಮೂಲದ  ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಮೂವರು ಹಣ್ಣಿನ ವ್ಯಾಪಾರಿಗಳಾಗಿದ್ದು, ಆರೋಪಿಗಳ ವಿರುದ್ಧ ಗುರುತರ ಆಪಾದನೆಯು ಕೇಳಿಬಂದಿದೆ. 

 

ಬಂಧಿತರು

ಹಣ್ಣಿನ ವ್ಯಾಪಾರಿಗಳಾದ ಮಹಮ್ಮದ ಕರೀಂ ಅಲಿಯಾಸ್ ಕರೀಂ (22), ಮಹಮ್ಮದ್ ಹಬಾಜ್ ಅಲಿಯಾಸ್  ಶಾಬಾ (21) ಮತ್ತು  ತಬ್ರೇಜ್ ಅಹಮ್ಮದ್ (36) 

ಆರೋಪಿಗಳಿಂದ ಬೆಲೆಬಾಳುವ ಬಂಗಾರ ವಶ

ಆರೋಪಿಗಳಿಂದ 38 ಗ್ರಾಂ ತೂಕದ ಸುಮಾರು 1,90,000 ಬೆಲೆ ಬಾಳುವ ಬಂಗಾರದ ಆಭರಣಗಳು, ₹3,000 ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಏನಾಗಿತ್ತು.

ಆ.11 ರಂದು ರಾತ್ರಿ ಕಳ್ಳರು ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದ ನಾಗಮ್ಮ ಮನೆ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ 10,000  ರೂ ನಗದು ಹಣ ಹಾಗೂ 2,16,000  ರೂ. ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article