ಗಣಪತಿ ಹಬ್ಬ! ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

ಹಂಚಿಕೊಳ್ಳಿ
WhatsApp Facebook X Telegram
ಗಣಪತಿ ಹಬ್ಬ!  ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS

ಮುಂಬರುವ ಗಣೇಶನ ಹಬ್ಬದ ಹಿನ್ನೆಲೆಯಲ್ಲಿ  ನಿನ್ನೆ ಶಿವಮೊಗ್ಗ ಪೊಲೀಸ್ ಇಲಾಖೆ  ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ  ಶಿವಮೊಗ್ಗ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಲ್ಲಾ ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಸದಸ್ಯರುಗಳ ಸಭೆ ಯನ್ನು ನಡೆಸಿದೆ. ಈ ಸಭೆಯಲ್ಲಿ ಪಾಲ್ಗೊಂಡ ಎಸ್​ಪಿ ಮಿಥುನ್​ ಕುಮಾರ್​ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಿಗೆ ಮಹತ್ವದ ಸೂಚನೆಗಳನ್ನ ನೀಡಿದ್ದಾರೆ. 

ಗಣಪತಿ ಹಬ್ಬ! ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

ಸೂಚನೆಗಳು

1) ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧಗಳನ್ನು ವಿಧಿಸುವುದು ಅಥವಾ ಆಚರಣೆಗಳಲ್ಲಿ ಮಧ್ಯ ಪ್ರವೇಶಿಸುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿರುವುದಿಲ್ಲ, ಆದರೆ ಹಬ್ಬವನ್ನು ಶಾಂತಿಯಿಂದ ಮತ್ತು ವಿಜೃಂಭಣೆಯಿಂದ ಆಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನಿಮ್ಮಗಳ ಸಹಾಯಕ್ಕೆ ಪೊಲೀಸ್ ಇಲಾಖೆ ಸದಾ ಸನ್ನದ್ದವಾಗಿರುತ್ತದೆ. 

2) ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವ / ಸಾರ್ವಜನಿಕವಾಗಿ ಉಪಟಳ ನೀಡುವ ಜನರಿಂದ  ಸಾರ್ವಜನಿಕರನ್ನು ರಕ್ಷಿಸಿ, ಶಾಂತಿ ಕಾಪಾಡುವುದೇ  ಪೊಲೀಸ್ ಇಲಾಖೆಯ ಮೊದಲ ಆಧ್ಯತೆ ಆಗಿರುತ್ತದೆ. 

ಗಣಪತಿ ಹಬ್ಬ! ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

3)   ಹಬ್ಬವನ್ನು ಕಾನೂನು ಚೌಕಟ್ಟಿನಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲು ಸಹಕಾರಿಯಾಗುವ ನಿಟ್ಟಿನಲ್ಲಿ, ಸದರಿ ದಿನಗಳಂದು ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಮತ್ತು ಸಿಬ್ಬಂಧಿಗಳು ನಿಮ್ಮಗಳ ಸಹಾಯಕ್ಕೆಂದು ಎಲ್ಲರಿಗಿಂತ ಮುಂಚಿತವಾಗೆಯೇ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳೊಂದಿಗೆ ಸಿದ್ದರಿರುತ್ತಾರೆ.

ಗಣಪತಿ ಹಬ್ಬ! ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

4) ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ವಿಜೃಂಭಣೆಯಿಂದ ಹಬ್ಬದ ಆಚರಣೆಯನ್ನು ಮಾಡುವಾಗ ಕೆಲವು ಕಿಡಿಗೇಡಿಗಳು ಹಬ್ಬದ ಸಂಭ್ರಮಕ್ಕೆ ತೊಂದರೆ ನೀಡುವುದು, ಶಾಂತಿಭಂಗ ಮಾಡುವುದು ಮತ್ತು ಸೌಹಾರ್ದತೆಗೆ ದಕ್ಕೆತರುವುದು ಕಂಡು ಬಂದಲ್ಲಿ ಅಥವಾ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತಂದಲ್ಲಿ, ಅಂತಹವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುತ್ತದೆ. 

ಗಣಪತಿ ಹಬ್ಬ! ಗಣಪತಿಗಳ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಯ ಜೊತೆ ಎಸ್​ಪಿ ಸಭೆ ! ಮಹತ್ವದ ಸೂಚನೆ !

5) ಹಬ್ಬವನ್ನು ಭಯಬೀತರಾಗದೇ ಹಬ್ಬದ ವಾತಾವರಣದಲ್ಲಿ ಶಾಂತಿಯುತವಾಗಿ, ಉತ್ಸುಕತೆಯಿಂದ ಮತ್ತು ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡಿ ಮತ್ತು ಹಬ್ಬದ ಆಚರಣೆಯಲ್ಲಿ ಎಲ್ಲರೂ ಭಾಗವಹಿಸುವಂತಹ ವಾತಾವರಣವನ್ನು ನಾವೆಲ್ಲರೂ ಸೇರಿ ನಿರ್ಮಿಸೋಣ. 

 ಈ ಸಂದರ್ಭದಲ್ಲಿ   ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,   ಬಾಲರಾಜ್, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪ ವಿಭಾಗ,  ಶಿವಪ್ರಸಾದ್ ರಾವ್,  ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಇನ್ನಷ್ಟು ಸುದ್ದಿಗಳು

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor