Madhu bangarappa : ಸಚಿವರಿಗೆ ಎದುರಾಯ್ತು ಆಕಸ್ಮಿಕ ಘಟನೆ | ಕಾರಿನಿಂದ ಇಳಿದವರು ಏನು ಮಾಡಿದ್ರು ಗೊತ್ತಾ?

Malenadu Today

Madhu bangarappa : ಜಿಲ್ಲಾಪ್ರವಾಸದಲ್ಲಿರುವ ಸಚಿವ ಮಧು ಬಂಗಾರಪ್ಪರವರು ನಿನ್ನೆ ದಿನ ಸೊರಬದ ಕುಪ್ಪಗಡ್ಡೆ ಸಮೀಪ ತೆರಳುತ್ತಿದ್ದ ಬೈಕ್​​​ ಕಾರು ಡಿಕ್ಕಿಯಾಗಿ ಅಪಘಾತವಾಗಿದ್ದ ಜಾಗದಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು. ತಮ್ಮ ಕಾರಿನಲ್ಲಿಯೇ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಸಚಿವರು ತೋರಿದ ಕಾಳಜಿ, ಅಲ್ಲಿದ್ದವರ ಮೆಚ್ಚುಗೆ ಪಾತ್ರವಾಯಿತು.

Madhu bangarappa : ಮಧು ಬಂಗಾರಪ್ಪ

ಕುಪ್ಪಗಡ್ಡೆ ಗ್ರಾಮದಲ್ಲಿ ನಿನ್ನೆ ಸೋಮವಾರ ಕಾರು ಮತ್ತು ಬೈಕ್ ನಡುವೆ ಆಕ್ಸಿಡೆಂಟ್​ ಆಗಿತ್ತು. ಈ ಅಪಘಾತದಲ್ಲಿ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಅದೇ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಹಾಯ ಮಾಡಿದರು.

- Advertisement -

Madhu bangarappa : ಕಾಳಜಿ ಮೆರೆದ ಸಚಿವ ಮಧು ಬಂಗಾರಪ್ಪ

ಸಚಿವ ಮಧು ಬಂಗಾರಪ್ಪ ರವರು (Madhu bangarappa ) ನಿನ್ನೆದಿನ ಹೊಸನಗರದಲ್ಲಿ ನಿಗದಿಯಾಗಿದ್ದ ಜನಸ್ಪಂದನ ಸಭೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ಆಕ್ಸಿಡೆಂಟ್ ಆಗಿದ್ದನ್ನ ಕಾಣುತ್ತಲೇ ತಮ್ಮ ತಮ್ಮ ಸಿಬ್ಬಂದಿಗೆ ಹೇಳಿ ಕಾರು ನಿಲ್ಲಿಸಿದ್ದಾರೆ.

ಬಳಿಕ ಕಾರಿನಿಂದ ಕೆಳಕ್ಕೆ ಇಳಿದು ಗಾಯಾಳುಗಳ ಸ್ಥಿತಿ ವಿಚಾರಿಸಿ, ಉಪಚರಿಸಿ ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್‌ ಬರುವುದು ತಡವಾಗಬಹುದು ಎಂದು ತಮ್ಮ ವಾಹನದಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಜೊತೆಯಲ್ಲಿ ಸೊರಬ ತಾಲ್ಲೂಕು ಆಸ್ಪತ್ರೆ ವೈದ್ಯರಿಗೆ ಅಲ್ಲಿಂದಲೇ ಕರೆ ಮಾಡಿ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು.

Madhu bangarappa : ಕಾರು ಚಾಲಕನ ಪತ್ತೆಗೆ ಸೂಚನೆ

ಘಟನೆಯಲ್ಲಿ ಬೈಕ್​ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸೊರಬದ ಗೆಂಡ್ಲ ಹೊಸೂರು ಗ್ರಾಮದ ಮೆಹಬೂಬ್ ಸಾಬ್ ಹಾಗೂ ಪ್ರಜ್ವಲ್ ಎಂದು ಗೊತ್ತಾಗಿದೆ. ಇನ್ನೂ ಬೈಕ್​ಗೆ ಡಿಕ್ಕಿಯಾದ ಕಾರು ಚಾಲಕ, ವಾಹನ ಸಮೇತ ಅಲ್ಲಿಂದ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪತ್ತೆ ಮಾಡುವಂತೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ಮೇಲ್ವಿಚಾರಣೆ ನಡೆಸಿದ ಸಚಿವರು, ಸಂಜೆ ಹೊತ್ತಿಗೆ ಆರೋಪಿ ಅರೆಸ್ಟ್

ಇನ್ನೂ ತಮ್ಮ ಆಪ್ತ ಸಹಾಯಕರನ್ನು ಗಾಯಾಳು ಜೊತೆಗೆ ಕಳುಹಿಸಿದ ಸಚಿವರು, ಗಾಯಾಳುಗಳ ಆರೋಗ್ಯದ ಮಾಹಿತಿ ಒದಗಿಸುವಂತೆ ತಿಳಿಸಿದ್ದಷ್ಟೆ ಅಲ್ಲದೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸೂಚಿಸಿದರು. ಈ ನಡುವೆ ಸಚಿವರ ಸೂಚನೆ ಮೇರೆಗೆ ಪೊಲೀಸರು ಸಂಜೆ ಹೊತ್ತಿಗೆ ಕಾರು ಚಾಲಕನನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ. ಇನ್ನೂ ಗಾಯಗೊಂಡಿದ್ದ ಬೈಕ್ ಸವಾರರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

Share This Article