SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ಆಗಾಗ ತಮ್ಮ ಭವಿಷ್ಯದ ಮೂಲಕವೇ ಸಂಚಲನ ಮೂಡಿಸುವ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಮತ್ತೊಮ್ಮೆ ರಾಜ್ಯ ರಾಜಕಾರಣದ ಮುಂದಿನ ಸುಳಿವನ್ನ ತಿಳಿಸಿದ್ದಾರೆ.
ಹಾಲುಮತದ ಸಿದ್ದರಾಮಯ್ಯರವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಅಥವಾ ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ ಎಂದಿರುವ ಅವರು ಡಿಕೆ ಶಿವಕುಮಾರ್ ರವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದಾಗಿ ಹೇಳಿದರು.
ಗದಗದಲ್ಲಿ ಮಾತನಾಡಿದ ಅವರು ಮಾದ್ಯಮಗಳ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು. ಸಂಕ್ರಾಂತಿ ಹಾಗೂ ಯುಗಾದಿ ಭವಿಷ್ಯಗಳು ಹೇಳಲು ಬರುತ್ತದೆ. ಚಂದ್ರನ ಚಲನೆಯ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ. ಮುಂದಿನ ಯುಗಾದಿಗೆ ಭವಿಷ್ಯದ ಸೂಚನೆಗಳು ಸ್ಪಷ್ಟಗೊಳ್ಳಲಿದೆ ಎಂದರು ಶ್ರೀಗಳು, ಹಾಲು ಮತದವರ ಅಧಿಕಾರ ಕಿತ್ತುಕೊಳ್ಳುವುದು ಸುಲಭಸಾಧುವಲ್ಲ. ಹಕ್ಕಬುಕ್ಕರು ಸಹ ಹಾಲುಮತದವರು.
ಅದೇ ರೀತಿ ಸಿದ್ದರಾಮಯ್ಯರವರು ಸಹ ಹಾಲುಮತದವರು, ಈ ಹಿಂದೆ ಅವರಿಂದ ಅಧಿಕಾರ ಕಿತ್ತುಕೊಳ್ಳಲಾಗಲಿಲ್ಲ. ಈಗಲೂ ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ ಎಂದರು. ಅಲ್ಲದೆ , ರಾಷ್ಟ್ರ ರಾಜಕಾರಣದಲ್ಲಿ ಸುನಾಮಿ ಏಳುವ ಲಕ್ಷಣ ಇದೆ ಎಂದ ಶ್ರೀಗಳು , ಅದರ ಪರಿಣಾಮ ರಾಜ್ಯದ ಮೇಲೂ ಸಹ ಬೀಳಬಹುದು ಎಂದು ವಿವರಿಸಿದರು. ಈ ಎಲ್ಲಾ ವಿಚಾರಗಳ ಬಗ್ಗೆ ಯುಗಾದಿಯ ನಂತರ ಮಾಹಿತಿ ನೀಡುವುದಾಗಿ ತಿಳಿಸಿದರು.