SHIVAMOGGA | MALENADUTODAY NEWS | ಮಲೆನಾಡು ಟುಡೆ Jan 21, 2025
ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಗುರುತು ಪರಿಚಯ ಸಿಗದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಬಸ್ ಸ್ಟ್ಯಾಂಡ್‌ನಲ್ಲಿ ಸುಸ್ತಾಗಿ ಬಿದ್ದಿದ್ದ ಅಪರಿಚಿತ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ವೇಳೇ ಆಕೆ ಸಾವನ್ನಪ್ಪಿರುವುದು ಖಚಿತವಾಗಿದೆ.
ಇದೀಗ ಆಕೆಯ ಗುರುತು ಪತ್ತೆಗಾಗಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಪ್ರಕಟಣೆಯಲ್ಲಿ ಮಹಿಳೆಯ ಗುರುತನ್ನು ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಹೀಗೆ ವಿವರಿಸಿದ್ದಾರೆ. ಅಪರಿಚಿತ ಮಹಿಳೆಯು ಸುಮಾರು 50 ರಿಂದ 55 ವರ್ಷದವರಾಗಿದ್ದಾರೆ. ಸುಮಾರು 5 ಅಡಿ 5 ಇಂಚು ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ.
ಸುಮಾರು 8 ಇಂಚಿನ ಉದ್ದದ ಕಪ್ಪು ಬಿಳಿಯ ಬಣ್ಣದ ತಲೆ ಕೂದಲು, ಹಣೆಯ ಮೇಲ್ಬಾಗದ ಮಧ್ಯದಲ್ಲಿ ಜೋಳದ ಕಾಳು ಗಾತ್ರದ ಕಪ್ಪು ನರಗುಳ್ಳೆ, ಮೈಮೇಲೆ ಕೆಂಪು ಬಣ್ಣದ ರವಿಕೆ, ಹಸಿರು ಬಣ್ಣದ ಸೀರೆ ಹಾಗು ಗುಲಾಬಿ ಬಣ್ಣದ ಲಂಗ ಇದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ: 08182261414/9916882544 ಗೆ ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
SUMMARY | unidentified woman died near the KSRTC bus stand in Shivamogga city. Doddapete Police Station
KEY WORDS | unidentified woman died , KSRTC bus stand in Shivamogga city, Doddapete Police Station