ಅಧಿಕಾರಿಗಳ ವಿರುದ್ಧ ನಿಮ್ಮ ಕಂಪ್ಲೆಂಟ್‌ ಇದೆಯಾ? ಸೈಲೆಂಟ್‌ ಆಗಿ ಲೋಕಾಯುಕ್ತಕ್ಕೆ ತಿಳಿಸಿ | ಹೇಗೆ? ಡಿಟೇಲ್ಸ್‌ ಇಲ್ಲಿದೆ

This Article Written by / 13 / ಜನವರಿ 21, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 21, 2025 ‌‌ 

ಶಿವಮೊಗ್ಗ ಲೋಕಾಯುಕ್ತದಿಂದ ಮತ್ತೊಮ್ಮೆ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಹಾಗೂ ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸ ಮಾಡಲು ಲಂಚಕ್ಕೆ ಬೇಡಿಕೆ ಹೀಗೆ ಸರ್ಕಾರಿ ವ್ಯವಸ್ಥೆಯ ಬಗ್ಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ವತಿಯಿಂದ ನಡೆಯಲಿರುವ  ಸಾರ್ವಜನಿಕರ ಕುಂದು ಕೊರತೆಯ ಅರ್ಜಿ ಸ್ವೀಕಾರ ಸಭೆ  ಇದೇ  ಜನವರಿ 23, 24, 28 ಹಾಗೂ 29 ರಂದು ಬೆಳಿಗ್ಗೆ 11 ಗಂಟೆಯಿಂದ 12.30 ವರವರೆಗೆ ನಡೆಲಿದೆ

ಸಾರ್ವಜನಿಕ ಕುಂದು ಕೊರತೆ ಸಭೆಯ ವಿವರಗಳು

  1. ಜ.23 ರ ಬೆಳಿಗ್ಗೆ 11ಗಂಟೆಯಿಂದ12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಸೊರಬ, ತಾಲ್ಲೂಕು ಕಛೇರಿ ಸಭಾಂಗಣ ತೀರ್ಥಹಳ್ಳಿ, 

  2. ಜ.24 ರ ಬೆಳಿಗ್ಗೆ 11ಗಂಟೆಯಿಂದ12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಶಿಕಾರಿಪುರ, ತಾಲ್ಲೂಕು ಪಂಚಾಯಿತಿ ಸಭಾಂಗಣ ಸಾಗರ, 

  3. ಜ.28 ರ ಬೆಳಿಗ್ಗೆ 11ಗಂಟೆಯಿಂದ12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಹೊಸನಗರ, ಭದ್ರಾವತಿ ನಗರಸಭೆ ಸಭಾಂಗಣ ಭದ್ರಾವತಿ, 

  4. ಜ.29 ರ ಬೆಳಿಗ್ಗೆ 11ಗಂಟೆಯಿಂದ12.30 ರವರೆಗೆ ತಾಲ್ಲೂಕು ಪಂಚಾಯತ್ ಸಭಾಂಗಣ ಶಿವಮೊಗ್ಗ 

SUMMARY | Shimoga Lokayukta has convened a public grievances meeting once again

KEY WORDS | Shimoga Lokayukta , public grievances meeting  

ಮುಂದಿನ ಸುದ್ದಿ ಒದಿ

Leave a Comment