FLASH NEWS | ಶಿವಮೊಗ್ಗ ಪಾಲಿಕೆಯಲ್ಲಿ ಲೋಕಾಯುಕ್ತರ ಶಾಕ್...ಸಿಕ್ಕಿಬಿದ್ದ ಅಧಿಕಾರಿ

Shivamogga lokayuktha trap

FLASH NEWS | ಶಿವಮೊಗ್ಗ ಪಾಲಿಕೆಯಲ್ಲಿ ಲೋಕಾಯುಕ್ತರ ಶಾಕ್...ಸಿಕ್ಕಿಬಿದ್ದ ಅಧಿಕಾರಿ

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇವತ್ತು ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದಾರೆ ಗುತ್ತಿಗೆದಾರರೊಬ್ಬರಿಂದ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಅಧಿಕಾರಿ ಒಬ್ಬರನ್ನ ಟ್ರ್ಯಾಪ್ ಮಾಡಿದ್ದಾರೆ

ಇವತ್ತು ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ನಗರ ಪಾಲಿಕೆಯಲ್ಲಿ ರೈಡ್ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಕೌಂಟ್ ಸೆಕ್ಷನ್ ನಲ್ಲಿರುವ ಅಧಿಕಾರಿ ಸಿದ್ದೇಶ್ ಎಂಬ ಅವರನ್ನ ವಶಕ್ಕೆ ಪಡೆದಿದ್ದಾರೆ.

ಗುತ್ತಿಗೆದಾರ ಸುನಿಲ್ ಎಂಬಾತನಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆಯಲ್ಲಿಯೆ ಅಕೌಂಟ್ ಮ್ಯಾನೇಜರ್ ಸಿದ್ದೇಶ್ ರನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ.

ಲೋಕಾಯುಕ್ತ ಎಸ್ ಪಿ ಮಂಜುನಾಥ್ ಚೌದರಿ ಟೀಂನ ಇನ್ಸ್ಪೆಕ್ಟರ್ ಪ್ರಕಾಶ್ , ಸುರೇಶ್ ಹಾಗು ಇತರರನ್ನು ಒಳಗೊಂಡ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದು..ಪ್ರಕರದ ತನಿಖೆಯನ್ನ ಇನ್ಸ್ಪೆಕ್ಟರ್ ಪ್ರಕಾಶ್ ನಡೆಸಲಿದ್ದಾರೆ...