SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024
ಶಿವಮೊಗ್ಗದ ವಿಚಾರದಲ್ಲಿ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಈಗಾಗಲೇ ರಾಜ್ಯದ ಪ್ರತಿಷ್ಟಿತ ನಂದಿನಿ ಹಾಲು ದೆಹಲಿಗೆ ಸರಭರಾಜಾಗಾಗುತ್ತಿದೆ. ಅದೇ ಮಾದರಿಯಲ್ಲಿ KMF ಶಿವಮೊಗ್ಗ ಹಾಲು ಒಕ್ಕೂಟದಿಂದ ರಾಜಸ್ಥಾನಕ್ಕೆ ಹಾಲು ರವಾನಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ಜೈಪುರ ದಲ್ಲಿ ಆನಂತರ ಭೋಪಾಲ್, ಇಂದೋರ್ನಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಕೆಎಂಎಫ್ ಪ್ಲಾನ್ ಮಾಡಿದೆ.
ದೆಹಲಿಯಲ್ಲಿ ಸದ್ಯ ನಂದಿನಿ ಹಾಲಿಗೆ ಮಾರ್ಕೆಟ್ ಉತ್ತಮವಾಗಿದ್ದು, ದಿನ 15 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆಯಂತೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಹಾಲು ಕಳುಹಿಸಲು ಕೆಎಂಎಫ್ ಮುಂದಾಗಿದೆ. ಈ ಸಂಬಂಧ ಸಂಬಂಧ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಪತ್ರಿಕೆಯೊಂದರ ವರದಿಯನ್ನ ಕೋಟ್ ಮಾಡಿ ಪ್ರತಿಕ್ರಿಯಿಸಿರುವ ಕೆಎಂಎಫ್ನ ಅಧ್ಯಕ್ಷ ಭೀಮಾನಾಯ್ಕ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟು ಬ್ರಾಂಡ್ ಉತ್ಪನ್ನಗಳ ಜತೆಗೆ ರಾಜಸ್ಥಾನಕ್ಕೂ ಲಗ್ಗೆ ಇಡಲು ಚಿಂತಿಸಿದ್ದೇವೆ. ಈಗಾಗಲೆ ರಾಜಸ್ಥಾನದಲ್ಲಿ ಒಂದು ಹಂತದ ಸರ್ವೇ ಮಾಡಲಾಗಿದ್ದು, ಮಾರುಕಟ್ಟೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲು ಜೈಪುರ ದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುವುದು. ಬಳಿಕ ಭೋಪಾಲ್,ಇಂದೋರ್ನಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಯೋಚಿಸಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಮುಂದಿನ ಸವಂತ್ಸರದಲ್ಲಿ ಉತ್ತರ ಭಾರತದೆಲ್ಲೆಡೆ ಕನ್ನಡ ನಾಡಿನ ಹೆಮ್ಮೆಯ ನಮ್ಮ ನಂದಿನಿ ಬ್ರಾಂಡ್ ಅನ್ನು ವಿಸ್ತರಿಸುತ್ತೇವೆ ಎಂದಿದ್ದಾರೆ.
SUMMARY | KMF planned to supply Nandini milk to Rajasthan through Shimoga Milk Union Shimul. Nandini milk to Jaipur, Indore and Bhopal, Nandini milk from Shimoga to Rajasthan

KEY WORDS | KMF planned to supply Nandini milk to Rajasthan, Shimoga Milk Union, Shimul, Nandini milk to Jaipur, Indore , Bhopal, Nandini milk from Shimoga to Rajasthan