ಶಿಮುಲ್‌ ಚುನಾವಣೆ | ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ | ನಿನ್ನೆ ಏನೆಲ್ಲಾ ಆಯ್ತು | ಡಿಟೇಲ್ಸ್‌ ಓದಿ

shimul election Shivamogga | ಶಿವಮೊಗ್ಗದ ಮಾಚೇನಹ‍ಳ್ಳಿಯಲ್ಲಿರುವ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ

ಶಿಮುಲ್‌ ಚುನಾವಣೆ | ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ | ನಿನ್ನೆ ಏನೆಲ್ಲಾ ಆಯ್ತು | ಡಿಟೇಲ್ಸ್‌ ಓದಿ
ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ, ಶಿಮುಲ್‌ ,shimul election Shivamogga

SHIVAMOGGA | MALENADUTODAY NEWS | Aug 27, 2024 ಮಲೆನಾಡು ಟುಡೆ  

ಶಿವಮೊಗ್ಗ, ಚಿತ್ರದುರ್ಗ ದಾವಣಗೆರೆ ಹಾಲು ಒಕ್ಕೂಟ ಶಿಮುಲ್‌ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆ ಹೊಸನಗರದ ವಿದ್ಯಾಧರ ಗುರುಶಕ್ತಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಾವಣಗೆರೆಯ ಚೇತನ್ ಎಸ್. ನಾಡಿಗರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನಿನ್ನೆದಿನ ಶಿಮುಲ್‌ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಮಾಚೇನಹಳ್ಳಿ ಶಿಮುಲ್ ಕೇಂದ್ರ ಕಚೇರಿಯಲ್ಲಿ 14 ಮಂದಿ ನಿರ್ದೇಶಕರ ಸಭೆ ಕರೆಯಲಾಗಿತ್ತು. ಆ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ವಿದ್ಯಾಧರ ಹಾಗೂ ಚೇತನ್‌ರವರನ್ನ ಆಯ್ಕೆ ಮಾಡಲಾಗಿದೆ.  

ಇನ್ನೂ ಬಗ್ಗೆ ಮಾತನಾಡಿರುವ ಆರ್‌ಎಂ ಮಂಜುನಾಥ್‌ ಗೌಡ ಇದೊಂದು ಅಪರೂಪದ ಬೆಳವಣಿಗೆ. ಎಲ್ಲ ನಿರ್ದೇಶಕರು ಒಟ್ಟಾಗಿ ಅಧ್ಯಕ್ಷರನ್ನ ಆಯ್ಕೆ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಶಿಮುಲ್‌ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದಿದ್ಧಾರೆ. ಇತ್ತ ಶಾಸಕ ಬೇಳೂರು ಗೋಪಾಲಕೃಷ್ಣರವರು ಮಾತನಾಡುತ್ತ ನಾವು ಒಮ್ಮತದಿಂದ ಅಧ್ಯಕ್ಷರನ್ನ ಆಯ್ಕೆ ಮಾಡಿದ್ದು, ಇದು ಮುಂದೆ ಮಾದರಿಯಾಗಲಿ ಎಂದರು,  ಅವರ ಎಲ್ಲಾ ಕೆಲಸಗಳಿಗೆ ನಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ.  

ಇನ್ನಷ್ಟು ಸುದ್ದಿಗಳು