ಬಿಜೆಪಿ ಕಾರ್ಯಕರ್ತೆ ಶಕಂತುಲಾ ನಟರಾಜ್‌ ಪುತ್ರ ಆತ್ಮಹತ್ಯೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 11, 2025 ‌‌  

ಬಿಜೆಪಿ ನಾಯಕಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಶಕುಂತಲಾ ನಟರಾಜ್‌ರವರ 13 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿರುವ ಅವರ ನಿವಾಸದಲ್ಲಿ 7 ಕ್ಲಾಸ್‌ ಓದುತ್ತಿದ್ದ ಮಗ ತ್ರೀಶಾಲ್‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜ್ಯದ ಮಾಧ್ಯಮ ವರದಿ ಪ್ರಕಾರ, ಮೃತ ತ್ರಿಶಾಲ್ ಶಾಲೆಯೊಂದರಲ್ಲಿ ಓದುತ್ತಿದ್ದು, ಡೆತ್‌ ನೋಟ್‌ ಬರೆದಿಟ್ಟು ಸಮವಸ್ತ್ರದಲ್ಲಿಯೇ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಶಂಕುತಲಾರವರು ಇಲ್ಲದ ವೇಳೆಯಲ್ಲಿ ಘಟನೆ ನಡೆದಿದೆ. ಇನ್ನೂ ತ್ರಿಶಾಲ್‌ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಈಗಾಗಲೇ ಹಲವು ಮಾಹಿತಿಗಳು ಹರಿದಾಡುತ್ತಿದ್ದು, ಪೊಲೀಸರು ಡೆತ್‌ನೋಟ್‌ ಪರಿಶೀಲನೆ ನಡೆಸಿದ್ದು, ಈ ಸಂಬಂಧ ವಿಚಾರಣೆ ನಡೆಸ್ತಿದ್ದಾರೆ. ತುಮಕೂರಿನ ಪೊಲೀಸರು ಪ್ರಕರಣ ಸಹ ದಾಖಲಿಸಿಕೊಂಡಿದ್ದಾರೆ.  

SUMMARY |BJP leader Shakuntala Nataraj’s son commits suicide

KEY WORDS |‌ BJP leader, Shakuntala Natarajs son commits suicide

Share This Article