ಸೋಶಿಯಲ್ ಮೀಡಿಯಾದಲ್ಲಿ, ಪ್ರೀತಿಸಲು ನಿರಾಕರಿಸಿದ ಯುವತಿ ವಿಡಿಯೋ ಅಪ್ಲೋಡ್​! ದಾಖಲಾಯ್ತು ಕೇಸ್​

Here is the details of the case registered at Shimoga CEN Police Station ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಪ್ರಕರಣದ ವಿವರ ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ,  ಪ್ರೀತಿಸಲು ನಿರಾಕರಿಸಿದ ಯುವತಿ ವಿಡಿಯೋ ಅಪ್ಲೋಡ್​! ದಾಖಲಾಯ್ತು ಕೇಸ್​

KARNATAKA NEWS/ ONLINE / Malenadu today/ Oct 27, 2023 SHIVAMOGGA NEWS

ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಫೋಟೋ, ವಿಡಿಯೋಗಳನ್ನ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸಿಇಎನ್​ ಠಾಣೆಯಲ್ಲಿ ದೂರು ದಾಖಳಲಾಗಿದೆ. 

ವಿದ್ಯಾರ್ಥಿನಿಯೊಬ್ಬರಿಗೆ ಸೋಶಿಯಲ್ ಮೀಡಿಯಾದ ಮೂಲಕ ಒಬ್ಬಾತ ಪರಿಚಯವಾಗಿದ್ದನಂತೆ,  ಆತ ಚಾಟ್​ ಆರಂಭಿಸಿ ಮಾತನಾಡ್ತಾ ಸ್ವಲ್ಪದಿನಗಳ ಬಳಿಕ ಪ್ರೀತಿಸುವಂತೆ ತಿಳಿಸಿದ್ದನಂತೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಈ ವೇಳೆ ನಿನ್ನ ಖಾಸಗಿ ಫೋಟೋ, ವಿಡಿಯೋ ಕಳುಹಿಸದಿದ್ದರೆ ಎಡಿಟ್ ಮಾಡಿದ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. 

ಇದಕ್ಕೆ ಬೆದರಿದ ವಿದ್ಯಾರ್ಥಿನಿ ಖಾಸಗಿ ಫೋಟೋ ವಿಡಿಯೋವನ್ನ ಕಳುಹಿಸಿ ಆತನ ನಂಬರ್ ಬ್ಲ್ಯಾಕ್ ಮಾಡಿದ್ದಳು. ಆದರೆ ಆತ ಸುಮ್ಮನಾಗದ ಆ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಯ ಬೆನ್ನಬಿದ್ದಿದ್ದಾರೆ ಪೊಲೀಸರು.  



READ : ಸರ್ಕಾರಿ ಶಾಲೆಯಲ್ಲಿ ಎಸ್​.ಬಂಗಾರಪ್ಪರವರ ಜನ್ಮದಿನ | ಹುಲಿ ಉಗುರು ಬಗ್ಗೆ ಎಚ್ಚರಿಕೆ ನೀಡಿದ ಮಧು ಬಂಗಾರಪ್ಪ





ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೂ ಇದೇ ಶ್ರೇಣಿಯ ಭದ್ರತೆ ನೀಡಲಾಗಿತ್ತು. ಆದರೆ, ಸರ್ಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಭದ್ರತೆಯನ್ನು ವಾಪಸ್ ಪಡೆದಿತ್ತು. ಇದನ್ನ ಗಮನಿಸಿ ಕೇಂದ್ರ ಗುಪ್ತದಳ ಸರ್ಕಾರಕ್ಕೆ ಸೂಚಿಸಿದೆ. ಇನ್ನೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಿಎಸ್​ವೈ ಮನವಿ ಮಾಡಿಲ್ಲ ಎನ್ನಲಾಗಿದೆ.  

 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!