ತಿರ್ಥಹಳ್ಳಿಯಲ್ಲಿ ಮಡುಗಟ್ಟಿದ ದುಃಖ | ಒಂದೇ ದಿನ ಎರಡು ಘಟನೆ | ಇಬ್ಬರ ದುರಂತ ಅಂತ್ಯ | ಕ್ಯಾಶಿಯರ್‌ & ಬಾಣಂತಿ ಸಾವು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 15, 2025 ‌‌ 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಒಂದೇ ದಿನ ಎರಡು ದುರಂತ ಸಂಭವಿಸಿದೆ. ಒಂದು ಕಡೆ ಬಾಣಂತಿಯೊಬ್ಬಳು ಸಾವನ್ನಪ್ಪಿದ್ದರೇ, ಇನ್ನೊಂದೆಡೆ ಯುವಕನೊಬ್ಬ ಬೈಕ್‌ ಆಕ್ಸಿಡೆಂಟ್‌ನಲ್ಲಿ ಮೃತಪಟ್ಟಿದ್ದಾನೆ. ಬಾಳಿ ಬದುಕಬೇಕಾದ ಎರಡು ಜೀವಗಳು ಹೋಗಿರುವುದು ತೀರ್ಥಹಳ್ಳಿಯಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. 

ಬಾಣಂತಿ ಸಾವು

ತೀರ್ಥಹಳ್ಳಿ ತಾಲ್ಲೂಕು ಮಾಳೂರು ಸಮೀಪದ ಕಾವೇರಿ ಎನ್ನುವ ಸಣ್ಣ ಗ್ರಾಮದ ಮಗಳು 25 ವರ್ಷದ ಮಂಜಳಾಗೆ ಕಳೆದ ವಾರ ಹೆರಿಗೆ ಆಗಿತ್ತು. ಆಕೆಯನ್ನು ಫೆಬ್ರವರಿ 10 ಕ್ಕೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಅಡ್ಮಿಟ್‌ ಮಾಡಿದ್ದರು. ಆನಂತರ ಮಗುವಾಗಿದೆ. ವಾರದ ಬಳಿಕ ಅವರು ಸಾವನ್ನಪ್ಪಿದ್ದಾರೆ. ಸಹಜ ಹೆರಿಗೆಯ ವೇಳೆ ಸಿಬ್ಬಂದಿ ಯಡವಟ್ಟು ಮಾಡಿದ್ದರು, ಆದ್ದರಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ ಎಂಬುದು ಕುಟುಂಬಸ್ಥರು, ಸಂಬಂಧಿಕರ ಆರೋಪ.

ಜೆಸಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ, ಬಾಣಂತಿಗೆ ತೀವ್ರ ರಕ್ತಸ್ತ್ರಾವ ಆಗುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಅಲ್ಲಿ ನಾಲ್ಕೈದು ದಿನಗಳ ಚಿಕಿತ್ಸೆಯ ಬಳಿಕ ಆಕೆ ಮೃತಪಟ್ಟಿದ್ದಾರೆ.  

ಅಪಘಾತ ಕ್ಯಾಶಿಯರ್‌ ಸಾವು

ಇನ್ನೊಂದು ಘಟನೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಯಡೇಹಳ್ಳಿ ಕೆರೆ ಗ್ರಾಮದ ನಿವಾಸಿ 27 ವರ್ಷದ  ಸುಮಂತ್ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಮೂಡ್ ಬಾರ್ ನಲ್ಲಿ ಇವರು ಕೆಲಸ ಮಾಡುತ್ತಿದ್ದರು, ಮನೆಗೆ ಹೋಗುತ್ತಿದ್ದಾಗ ಇವರ ಬೈಕ್‌ ಯಡೇಹಳ್ಳಿ ಕೆರೆ ಬಳಿ ಆಕ್ಸಿಡೆಂಟ್‌ ಆಗಿದೆ. ಈ ವೇಳೇ ತೀವ್ರವಾಗಿ ಗಾಗಯೊಂಡು ಸುಮಂತ್‌ ಸಾವನ್ನಪ್ಪಿದ್ದಾರೆ.  

 

SUMMARY | two deaths in one day in thirthahalli

KEY WORDS | two deaths in one day in thirthahalli

Share This Article