SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025
ಶಿವಮೊಗ್ಗ ನಗರಪಾಲಿಕೆಯ ಸಿಬ್ಬಂದಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಕಾರ್ಪೊರೇಟರ್ ಹಾಗೂ ಅವರ ಕಡೆಯವರ ಕಿರುಕುಳದಿಂದ ಸಾಯುವುದು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ ಎಂದು ವಿಷದ ಬಾಟಲಿಯೊಂದನ್ನ ತೋರಿಸುತ್ತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಮೂರ್ತಿ ಎಂದು ಹೇಳಲಾಗಿದೆ. ಇವರು ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿದ್ದು ವಾರ್ಡ್ ವೊಂದರಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರನ್ನ ಮೂಲ ಕೆಲಸಕ್ಕೆ ಅಂದರೆ ಸ್ವಚ್ಚತಾ ಕೆಲಸಕ್ಕೆ ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದರಂತೆ. ಆದರೆ ತಮಗೆ ಸೊಂಟ ನೋವಿರುವುದರಿಂದ ಹೋಗಲಾಗುತ್ತಿಲ್ಲ. ಇದನ್ನ ಹೇಳಿ ಮನವಿ ಮಾಡಿಕೊಂಡರೂ ಸಹ ತನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಮೂರ್ತಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಮೂರ್ತಿಯವರಿಗಾಗಿ ಅಧಿಕಾರಿಗಳು ಹಾಗೂ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.
SUMMARY | Video of Shivamogga City Corporation staff goes viral
KEY WORDS | Video of Shivamogga City Corporation staff