ಕಾರು, ಕ್ಯಾಂಟರ್‌ಗೆ ಬೈಕ್‌ಗಳ ಡಿಕ್ಕಿ | ಹೊನ್ನಾಳಿಯ ಇಬ್ಬರು ಯುವಕರ ಸಾವು | ವಾಹನ ಓಡಿಸುವಾಗ ಎಚ್ಚರ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024 ‌ 

ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಎರಡು ಕಡೆಗಳಲ್ಲಿ ಅಪಘಾತ ಸಂಭವಿಸಿದ್ದು, ಈ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

- Advertisement -

Malenadu Today

 

ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಬಳಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕ್ಯಾಂಟರ್‌ ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.  ಆನವೇರಿ ಕಡೆಯಿಂದ ಕೈಮರದ ಕಡೆಗೆ ಬೈಕ್ನಲ್ಲಿ ಬಂದು ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಮಲ್ಲಾಪುರದ ಅಕ್ಕೀಮಟ್ಟಿ ಸಮೀಪ ಗೊಬ್ಬರದ ಕ್ಯಾಂಟರ್‌ ರಸ್ತೆ ಬದಿ ಗೊಬ್ಬರ ಇಳಿಸುತ್ತಿತ್ತು. ಈ ವೇಳೆ ಕ್ಯಾಂಟರ್‌ಗೆ  ಬೈಕ್ ಡಿಕ್ಕಿಯಾಗಿ   ಭುವನ ಎಂಬ ಹೆಸರಿನ 18 ವರ್ಷದ ಯವಕ ಸಾವನ್ನಪ್ಪಿದ್ದಾರೆ. ಈತ ಹೊನ್ನಾಳಿ ತಾಲೂಕು ಲಿಂಗಾಪುರ ಗ್ರಾಮದವನು ಎಂದು ಗೊತ್ತಾಗಿದೆ. 

ಇನ್ನೊಂದು ಘಟನೆಯಲ್ಲಿ ನಾಗಸಮುದ್ರ ಸಮೀಪ ಕಾರು ಹಾಗು ಬೈಕ್ ನಡುವೆ  ಅಪಘಾತ ಸಂಭವಿಸಿದ್ದು, ಸಾಗರ ಎಂಬ 25 ವರ್ಷದ ಯುವಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಇನ್ನೊಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. 

 

ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಿಂದ ಶಿವಮೊಗ್ಗದ ಕಡೆ ಬರುತಿದ್ದ ಕಾರು ಹಾಗು ಸನ್ಯಾಸಿಕೊಡಮಗ್ಗೆ ಕಡೆಯಿಂದ ನಾಗಸಮುದ್ರ ಕಡೆ ಬರುತಿದ್ದ ಬೈಕ್ ನಡುವೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಮೃತ ಯುವಕ ಹೊನ್ನಾಳಿ ತಾಲೂಕಿನ ಸೋಮಲಪುರ ಗ್ರಾಮದವನು ಎಂದು ತಿಳಿದು ಬಂದಿದೆ. 

Malenadu Today

SUMMARY | Two accidents took place under holehonnur police station limits in which two youths from Honnali were killed

KEY WORDS | Two accidents took place , holehonnur police station limits , two youths from Honnali killed

Share This Article
Leave a Comment

Leave a Reply

Your email address will not be published. Required fields are marked *