ಹಿಂದೂ ಯುವಕನ ಜೊತೆ ಏಕೆ ಓಡಾಡುತ್ತಿಯಾ ಎಂದು ಹಲ್ಲೆ ಆರೋಪ | 13 ಮಂದಿ ವಿರುದ್ಧ FIR
FIR against 13 people under Holehonnur police station limits
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024
ಹಿಂದೂ ಯುವಕನ ಜೊತೆ ಓಡಾಡುತ್ತಿಯಾ ಎಂದು ಯುವತಿ ಮೇಲೆ ಹಲ್ಲೆಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಅಡಿಯಲ್ಲಿ 13 ಮಂದಿ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಸೀದಿ ಸಮೀತಿಯವರು ಕರೆಯುತ್ತಿದ್ದಾರೆ ಎಂದು ಹೇಳಿ ತಾಯಿಯ ಎದುರಲ್ಲಿಯೇ ಯುವತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಆನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 13 ಮಂದಿ ವಿರುದ್ಧ FIR ದಾಖಲಿಸಿದ್ದಾರೆ.
ಯುವತಿ ಹಾಗೂ ಆಕೆಯ ಕುಟುಂಬಸ್ಥರು ನೀಡಿರುವ ದೂರನ್ನು ಆಧರಿಸಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ತಾನು ತಪ್ಪು ಮಾಡಿಲ್ಲವೆಂದರೂ ತನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.ಇದೀಗ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.
SUMMARY | FIR against 13 people under Holehonnur police station limits
KEYWORDS | Holehonnur police station limits