SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಭದ್ರಾವತಿಯಲ್ಲಿ ಕಳೆದ ಆಕ್ಟೋಬರ್ 17 ರಂದು ದಾಖಲಾಗಿದ್ದ ಕಾಡುಕೋಣ ಹತ್ಯೆ ಪ್ರಕರಣ ತೀವ್ರ ಕುತೂಹಲ ಪಡೆದುಕೊಳ್ಳುತ್ತಿದೆ. ಈ ಸಂಬಂಧ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನ ಅರಣ್ಯ ಇಲಾಖೆ ಅರೆಸ್ಟ್ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿದೆ.
ಕಾಡುಕೋಣವೊಂದನ್ನ ಇಲ್ಲಿ ಪ್ರದೇಶವೊಂದರಲ್ಲಿ ಹತ್ಯೆ ಮಾಡಿ ಹೂತು ಹಾಕಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿ, ಅರಣ್ಯ ವಿಭಾಗದ ಅಧಿಕಾರಿಗಳು, ಮೂವರ ವಿರುದ್ಧ ಕೇಸ್ ಮಾಡಿದ್ದರು.


ಆನಂತರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಅರಣ್ಯ ಅಧಿಕಾರಿ ಬಿ.ಎಚ್. ದುಗ್ಗಪ್ಪ ಅವರ ನೇತೃತ್ವದ ತಂಡ ತಲಾಶ್ ನಡೆಸಿತ್ತು. ಇದೀಗ ಆರೋಪಿಗಳು ಪತ್ತೆಯಾಗಿದ್ದು, ಅವರನ್ನ ಕೋರ್ಟ್‌ಗೆ ಹಾಜರುಪಡಿಸಿ ತನಿಖೆ ಮುಂದುವರಿಸಿದ್ದಾರೆ.
SUMMARY | bison killing case, which was registered on October 17 in Bhadravathi, is gaining a lot of curiosity. The forest department has arrested two absconding accused in this connection and produced them before the court.
KEYWORDS | bison killing case, Bhadravathi, forest department,produced before the court.