ನವೆಂಬರ್ 18, 2025 : ಮಲೆನಾಡು ಟುಡೆ : ಇಂದಿನ ಜಾತಕ, ಇಂದಿನ ಪಂಚಾಂಗ ವಿವರ: ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತುವಿನ ಕಾರ್ತಿಕ ಮಾಸ, ತ್ರಯೋದಶಿ ಉ.6.40 ರವರೆಗೆ, ನಂತರ ಚತುರ್ದಶಿ , ಸ್ವಾತಿ ನಕ್ಷತ್ರ, ಅಮೃತ ಘಳಿಗೆ: ಮಾ.11:00 ರಿಂದ ರಾ.1:10 ರವರೆಗೆ, ರಾಹು ಕಾಲ: ಮಧ್ಯಾಹ್ನ 3.00 ರಿಂದ 4.30 ರವರೆಗೆ, ಯಮಗಂಧ: ಬೆಳಿಗ್ಗೆ 9.00 ರಿಂದ 10.30 ರವರೆಗೆ

ಆಗುಂಬೆಯಲ್ಲಿ 7 ತಿರುವಿನಿಂದ 9 ತಿರುವಿನವರೆಗೆ ಉರುಳಿದ ಪಿಕಪ್! ಮಂಗಳೂರಿಗೆ ಸಾಗಿಸ್ತಿದ್ದ ದಾಳಿಂಬೆ ನಾಶ
ಪಂಚಾಂಗದ ಆಧಾರದ ಮೇಲೆ ಎಲ್ಲಾ 12 ರಾಶಿಗಳ ದೈನಂದಿನ ಜಾತಕ ಫಲ
ಮೇಷ : ಕೈಗೆತ್ತಿಕೊಳ್ಳುವ ಕೆಲಸ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಪೂರ್ಣಗೊಳ್ಳುತ್ತವೆ. ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಗಮನಾರ್ಹ ಪ್ರಗತಿ
ವೃಷಭ : ಉತ್ತಮ ಅವಕಾಶಗಳು ದೊರೆಯುತ್ತವೆ. ಗೌರವ ಹೆಚ್ಚಾಗುತ್ತದೆ ಹಾಗೂ ಗಣ್ಯ ವ್ಯಕ್ತಿಗಳೊಂದಿಗೆ ಸಭೆ ನಡೆಯಲಿದೆ. ವಾಹನ ಖರೀದಿಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಹೊಂದಾಣಿಕೆಯ ವಾತಾವರಣ
ನ್ಯಾಮತಿಯಲ್ಲಿ ದಾವಣಗೆರೆ ಪೊಲೀಸರ ಕಾರ್ಯಾಚರಣೆ! ಶಿಕಾರಿಪುರದ ಇಬ್ಬರ ಬಂಧನ! ಏನಿದು!
ಮಿಥುನ : ಕುಟುಂಬದೊಳಗೆ ಕೆಲವು ಚಿಕ್ಕಪುಟ್ಟ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಮುಖ್ಯ ಕೆಲಸ ಅಡೆತಡೆಗಳಿಂದ ಕೂಡಿರುತ್ತವೆ. ದೃಷ್ಟಿಯಾಗುವ ಸಾಧ್ಯತ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿ.
ಕರ್ಕಾಟಕ : ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ವಿಳಂಬಕ್ಕೆ ಬೇಸರ. ಅನಾರೋಗ್ಯ ನಿಮ್ಮನ್ನು ಕಾಡಬಹುದು. ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಿವಾದಗಳು. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು.
ಸಿಂಹ : ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.ಆರ್ಥಿಕ ಪರಿಸ್ಥಿತಿಯು ಸುಧಾರಣೆಯ ಹಾದಿಯಲ್ಲಿ ಸಾಗಲಿದೆ. ಭಿನ್ನಾಭಿಪ್ರಾಯಗಳು ಬಗೆಹರಿಯಲಿದೆ. ವಸ್ತು ರೂಪದ ಲಾಭ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ.

ಕನ್ಯಾ: ಕೆಲಸಗಳಲ್ಲಿ ಇಂದು ಕೆಲವು ಅಡೆತಡೆ ಉಂಟಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಭಿನ್ನಾಭಿಪ್ರಾಯ ಮೂಡಬಹುದು. ಅನಾರೋಗ್ಯ, ದೂರ ಪ್ರಯಾಣ, ಉದ್ಯೋಗ ಮತ್ತು ವ್ಯವಹಾರದ ವಿಚಾರದಲ್ಲಿ ಕಿರಿಕಿರಿ ಅನುಭವಿಸುವಿರಿ.
ತುಲಾ : ವೃತ್ತಿಪರ ಪ್ರಯತ್ನಗಳಿಗೆ ಯೋಗ್ಯ ಫಲಿತಾಂಶ ದೊರೆಯುತ್ತವೆ. ಹಳೆಯ ಸಾಲ ಮರಳಿ ಸಂಗ್ರಹ. ಹೊಸ ವಾಹನ ಖರೀದಿಸುವ ಯೋಗವಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ಕಂಡುಬರುತ್ತದೆ.
ವೃಶ್ಚಿಕ : ಹಣಕಾಸಿನ ವಹಿವಾಟು ನಿರೀಕ್ಷಿಸಿದಷ್ಟು ಯಶಸ್ಸು ನೀಡುವುದು, ಶ್ರಮವು ಹೆಚ್ಚಾಗಲಿದ್ದು, ಕೆಲಸದಲ್ಲಿ ಅಡೆತಡೆ. ಅನಾರೋಗ್ಯದ ಚಿಂತೆ. ದೂರದ ಸಂಬಂಧಿಕರ ಭೇಟಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಬದಲಾವಣೆ ಕಾಣಿಸಿಕೊಳ್ಳಬಹುದು.
ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಧನು : ಕೆಲಸ ಉತ್ಸಾಹದಿಂದ ಮತ್ತು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಅಮೂಲ್ಯವಾದ ಮಾಹಿತಿ ಅಥವಾ ಜ್ಞಾನವನ್ನು ಪಡೆದುಕೊಳ್ಳುವಿರಿ.ದೂರದ ಸಂಬಂಧಿಕರನ್ನು ಭೇಟಿ ಮಾಡುವ ಅವಕಾಶ ದೊರೆಯಲಿದೆ. ವಸ್ತು ಲಾಭ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹ.
ಮಕರ : ಕೀರ್ತಿ ಇಂದು ಹೆಚ್ಚಾಗುತ್ತದೆ. ಆಸ್ತಿ ಲಾಭ. ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ರಿಯಲ್ ಎಸ್ಟೇಟ್ ಸಂಬಂಧಿತ ವಿವಾದ ಬಗೆಹರಿಯುತ್ತವೆ. ಸಮಾರಂಭಕ್ಕೆ ಆಹ್ವಾನಗಳು ದೊರೆಯುತ್ತವೆ. ಉದ್ಯೋಗ ಮತ್ತು ವ್ಯವಹಾರ ಉತ್ಸಾಹಭರಿತವಾಗಿ ಮುಂದುವರಿಯುತ್ತವೆ.

ಕುಂಭ : ಸಾಲ ತೀರಿಸುವ ಪ್ರಯತ್ನಕ್ಕೆ ಫಲ. ಆಲೋಚನೆಗಳು ಸ್ಥಿರವಾಗಿಲ್ಲದೆ ಗೊಂದಲಮಯ.ವ್ಯವಹಾರಗಳು ನಿಧಾನಗತಿಯಲ್ಲಿ ಮುಂದುವರಿಯುತ್ತವೆ. ಉದ್ಯೋಗದಲ್ಲಿ ನಿರಾಸೆಯನ್ನು ಅನುಭವಿಸುವ ಸಾಧ್ಯತೆ ಇದೆ.
Zodiac Signs ಮೀನ : ಆಸ್ತಿ ಸಂಬಂಧಿತ ವಿವಾದ ಕಾಡಬಹುದು. ಕೆಲಸದ ಸ್ಥಳದಲ್ಲಿ ಅಡೆತಡೆ. ಆರ್ಥಿಕ ತೊಂದರೆ ಮತ್ತು ಬಿಗಿಯಾದ ಹಣಕಾಸಿನ ಪರಿಸ್ಥಿತಿ. ಉದ್ಯೋಗ ಮತ್ತು ವ್ಯವಹಾರ ನಿಧಾನಗತಿಯಲ್ಲಿ ಸಾಗಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
