ನ್ಯಾಮತಿಯಲ್ಲಿ ದಾವಣಗೆರೆ ಪೊಲೀಸರ ಕಾರ್ಯಾಚರಣೆ! ಶಿಕಾರಿಪುರದ ಇಬ್ಬರ ಬಂಧನ! ಏನಿದು!

ಹಂಚಿಕೊಳ್ಳಿ
WhatsApp Facebook X Telegram
shimoga chikkamagaluru malnad crime news Annanagar Wife Conspires to Murder Husband in Shivamogga
shimoga chikkamagaluru Wife chikkamagaluru Conspires to Murder Husband in Shivamogga

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ದಾವಣಗೆರೆ ಜಿಲ್ಲೆ : ಇಲ್ಲಿನ ಪೊಲೀಸರು, ಶಿಕಾರಿಪುರದ ಇಬ್ಬರನ್ನ ಗಾಂಜ ಸಾಗಿಸ್ತಿದ್ದಾಗ ಅರೆಸ್ಟ್ ಮಾಡಿದ್ದಾರೆ. ಇಲ್ಲಿನ ನ್ಯಾಮತಿ ತಾಲ್ಲೂಕು ಮಾಚಗೊಂಡನಹಳ್ಳಿ ಬಳಿ ಜಿಲ್ಲಾ ಮಾದಕ ವಸ್ತು ನಿಗ್ರಹ ಪಡೆಯ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. 

ಶಿಕಾರಿಪುರ ಆಸ್ಪತ್ರೆಯಲ್ಲಿ ಮೂವರಿಗೆ ಇರಿತ! ಮೂವರ ವಿರುದ್ಧ FIR!

ಇಬ್ಬರು ಆರೋಪಿಗಳನ್ನು ಬಂಧಿಸಿದ್ದಷ್ಟೆ ಅಲ್ಲದೆ ಬಂಧಿತರಿಂದ ₹1.10 ಲಕ್ಷ ಮೌಲ್ಯದ 1 ಕೆ.ಜಿ. 160 ಗ್ರಾಂ ಗಾಂಜಾ ಸೊಪ್ಪು ಮತ್ತು ಆರೋಪಿಗಳ ಬೈಕ್ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಸೇರಿದ ಅಖಿಯಾಜ್ ಅಹಮ್ಮದ್ ಮತ್ತು ಹಾರನಹಳ್ಳಿಯ ಸೈಯದ್ ಶಫೀವುಲ್ಲಾ ಬಂಧಿತ ಆರೋಪಿ.

Near nyamati Davanagere
Near nyamati Davanagere

ದಾವಣಗೆರೆ ಜಿಲ್ಲಾ ಮಾದಕ ವಸ್ತು ನಿಗ್ರಹ ಪಡೆಯ ಸಿಬ್ಬಂದಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಅಕ್ಟೋಬರ್ 14 ರಂದು ಸಂಜೆ ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಅನುಮಾನಸ್ಪದವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಅವರನ್ನ ಹಿಡಿದು ಪರಿಶೀಲನೆಗೆ ಒಳಪಡಿಸಿದ್ದರು. ಈ ವೇಳೆ ಗಾಂಜಾ ಪತ್ತೆಯಾಗಿದ್ದರಿಂದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. 

Shivamogga PSI Transfers / ಶಿವಮೊಗ್ಗ ಜಿಲ್ಲೆಯಲ್ಲಿ 10 ಕ್ಕೂ ಹೆಚ್ಚು ಪೊಲೀಸ್​ ಅಧಿಕಾರಿಗಳ ಟ್ರಾನ್ಸಫರ್​!

Near nyamati Davanagere

Near nyamati Davanagere
Near nyamati Davanagere

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Ganja Smuggling Busted Two Arrested Near Machagondanahalli Davanagere

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor