Shivamogga PSI Transfers ಶಿವಮೊಗ್ಗ ಜಿಲ್ಲೆಯಲ್ಲಿ ಪಿಎಸ್‌ಐಗಳ ವರ್ಗಾವಣೆ: ಪೂರ್ವ ವಲಯ ಐಜಿಪಿ ರವಿಕಾಂತೇ ಗೌಡರಿಂದ ಆದೇಶ
Shivamogga news / ಶಿವಮೊಗ್ಗ, ಕರ್ನಾಟಕ: ಶನಿವಾರ ವಿವಿಧ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ. ಪೂರ್ವ ವಲಯ ಐಜಿಪಿ ರವಿಕಾಂತೇ ಗೌಡ ಈ ಆದೇಶ ಹೊರಡಿಸಿದ್ದು, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಪಿಎಸ್‌ಐ) ವರ್ಗಾವಣೆ [Shivamogga PSI Transfer] ವಿವರ ಹೀಗಿದೆ.
ಹೊಳೆಹೊನ್ನೂರು ಠಾಣೆಯ ಪಿಎಸ್‌ಐ ಮಂಜುನಾಥ್ ಎಸ್. ಕುರಿ ಅವರನ್ನು ಹಾವೇರಿ ಜಿಲ್ಲೆಯ ಬಂಕಾಪುರ ಠಾಣೆಗೆ ವರ್ಗಾಯಿಸಲಾಗಿದೆ. ಇದೇ ರೀತಿ, ಆಗುಂಬೆ ಠಾಣೆಯ ಪಿಎಸ್‌ಐ ರಂಗನಾಥ್ ಅಂತರಗಟ್ಟಿ ಅವರನ್ನು ಹಾವೇರಿ ಜಿಲ್ಲೆಯ ಸವಣೂರು ಠಾಣೆಗೆ ನಿಯೋಜಿಸಲಾಗಿದೆ. ಕಾರ್ಗಲ್ ಠಾಣೆಯ ಪಿಎಸ್‌ಐ ಹೊಳಬಸಪ್ಪ ಹೊಳಿ ಅವರು ನ್ಯಾಮತಿ ಠಾಣೆಗೆ ವರ್ಗಾವಣೆಗೊಂಡಿದ್ದರೆ, ಶಿವಮೊಗ್ಗ ಸಿಇಎನ್ ಠಾಣೆಯ ಶಿವನಗೌಡ ಅವರು ಆಗುಂಬೆ ಠಾಣೆಗೆ ತೆರಳಲಿದ್ದಾರೆ.

ವಿನೋಬನಗರ ಠಾಣೆಯ ಪಿಎಸ್‌ಐ ಬಿ.ಸಿ. ಸುನೀಲ್ ಅವರನ್ನು ತೀರ್ಥಹಳ್ಳಿ ಠಾಣೆಗೆ ವರ್ಗಾಯಿಸಲಾಗಿದ್ದು, ರಿಪ್ಪನ್‌ಪೇಟೆ ಠಾಣೆಯ ಎಸ್.ಪಿ. ಪ್ರವೀಣ್ ಅವರು ಆನಂದಪುರಂ ಠಾಣೆಗೆ ನಿಯೋಜನೆಗೊಂಡಿದ್ದಾರೆ. ಆನವಟ್ಟಿ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ಅವರನ್ನು ರಿಪ್ಪನ್‌ಪೇಟೆ ಠಾಣೆಗೆ ವರ್ಗಾಯಿಸಲಾಗಿದ್ದು, ದಾವಣಗೆರೆ ಡಿಸಿಆರ್‌ಬಿ ಠಾಣೆಯ ಪಿಎಸ್‌ಐ ಸುನೀಲ್ ಬಿ. ತೇಲಿ ಅವರು ಭದ್ರಾವತಿ ಓಲ್ಡ್ ಟೌನ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಆನಂದಪುರಂ ಪಿಎಸ್‌ಐ ಯುವರಾಜ ಮತ್ತು ಭದ್ರಾವತಿ ಓಲ್ಡ್ ಟೌನ್ ಪಿಎಸ್‌ಐ ಚಂದ್ರಶೇಖರ್ ನಾಯ್ಕ ಅವರಿಗೆ ವಲಯ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಐಜಿಪಿ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
Shivamogga PSI Transfers: IGP Ravikanthe Gowda Issues Order for Police Officers
PSI Transfer, Shivamogga Police, IGP Ravikanthe Gowda, Shivamogga, Police Department, Transfer Order, PSI, Ravikanthe Gowda, Karnataka Police, Law and Order, Police Administration, District News ,Shivamogga PSI Transfers