hit-and-Run Accident Near Anandapura, Sagar ಅಪರಿಚಿತ ವಾಹನ ಡಿಕ್ಕಿ: ಸಾಗರದಲ್ಲಿ ಬೈಕ್ ಸವಾರ ಕೃಷ್ಣ ಸ್ಥಳದಲ್ಲೇ ಸಾವು
Shivamogga news / ಶಿವಮೊಗ್ಗ, ಕರ್ನಾಟಕ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ, ಹೊಸಕೊಪ್ಪ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಗೌತಮಪುರ ನಿವಾಸಿ ಕೃಷ್ಣ (30) [Krishna death] ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆನಂದಪುರದಲ್ಲಿ ಇತ್ತೀಚೆಗೆ ಹೊಸದಾಗಿ ‘ಎಕ್ಸಲೆಂಟ್ ಸಲೂನ್’ ಶಾಪ್ ತೆರೆದು ನಡೆಸುತ್ತಿದ್ದ ಕೃಷ್ಣ, ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪರಿಚಿತ ವಾಹನವೊಂದು [Hit and run] ಕೃಷ್ಣ ಅವರ ಬೈಕ್‌ಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣ ತೀವ್ರವಾಗಿ ಗಾಯಗೊಂಡು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು [Shivamogga Police] ಅಪರಿಚಿತ ವಾಹನ ಹಾಗೂ ಅದರ ಚಾಲಕನ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

Road Accident, Fatal Accident, Sagar Taluk, Shivamogga, Anandapura, Hosakoppa, Bike Accident, Hit and Run, Krishna, Death, Police Investigation, Karnataka News ,hit-and-Run Accident Near Anandapura