anandapura news ಮಳೆಗಾಲದಲ್ಲಿ ಕ್ವಾರೆ ಸಲುವಾಗಿ ಅರಣ್ಯ ಪ್ರದೇಶದಲ್ಲಿ ಲಾರಿ ಸಂಚರಿಸುತ್ತಿರುವುದರಿಂದ ತೊಂದರೆ ಉಂಟಾಗುತ್ತಿದೆ ಎಂದ ವ್ಯಕ್ತಿಯ ಮೇಲೆ ಹೆಲ್ಮೆಟ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
anandapura news : ಎಫ್ಐಆರ್ನಲ್ಲಿ ಏನಿದೆ
ಸಿರುಗುಪ್ಪದ ಈಶ್ವರಪ್ಪ ಗೌಡ, ಸದಾನಂದ ಗೌಡ, ಮಲ್ಲಿಕಾರ್ಜುನ್ ಎಂಬುವವರು ಮಳೆಗಾಲದಲ್ಲಿ ಕ್ವಾರಿ ನಿಲ್ಲಿಸಿ, ಅಲ್ಲಿ ಸಂಚರಿಸುವ ಲಾರಿಗಳಿಂದ ನಮಗೆ ತೊಂದರೆಯಾಗುತ್ತದೆ ಎಂದು ಸಂಬಂಧಪಟ್ಟ ವ್ಯಕ್ತಿಗಳಿಗೆ ಮನವಿ ಮಾಡಿದ್ದರು. ಆದರೆ ಇದರಿಂದ ಕೋಪಗೊಂಡ ಸಂಬಂಧಪಟ್ಟ ವ್ಯಕ್ತಿಗಳು ಈಶ್ವರಪ್ಪ ಗೌಡ ಎಂಬುವವರ ಮನೆಗೆ ನುಗ್ಗಿ ಹೊಡೆದಿದ್ದಾರೆ ಹಾಗೆಯೇ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ಈಶ್ವರಪ್ಪ ಗೌಡ ಅವರು ಆನಂದಪುರ ಪೋಲೀಸ್ ಠಾಣೆಗೆ ಬಂದು ದೂರನ್ನು ನೀಡಿದ್ದಾರೆ. ನಂತರ ಕೇಸ್ ವಿಚಾರವಾಗಿ ದೇವರಾಜ್ ಎಂಬುವವರನ್ನು ಪೊಲೀಸರು ಠಾಣೆಗೆ ಕರೆದಿದ್ದಾರೆ. ಆ ವೇಳೆ ದೇವರಾಜ್ ಪೊಲೀಸ್ ಠಾಣೆಗೆ ಹೋಗುವ ಸಂದರ್ಭದಲ್ಲಿ ಪಿಗಿನಬೈಲು ಕ್ರಾಸ್ ನಲ್ಲಿ 4 ಜನ ದೇವರಾಜ್ ಬೈಕನ್ನು ಅಡ್ಡಗಟ್ಟಿ ಹೆಲ್ಮೆಟ್ ನಿಂದ ತಲೆಗೆ ಬಲವಾಗಿ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆನಂದಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
