bakrid festival 07-06-2025 :  ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

prathapa thirthahalli
Prathapa thirthahalli - content producer

bakrid festival :  ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಮುಸ್ಲಿಂ ಸಮುದಾಯ ಇಂದು ದೇಶದಾದ್ಯಂತ ಸಂಭ್ರಮ ಸಡಗರದಿಂದ ಬಕ್ರೀದ್​​ ಹಬ್ಬವನ್ನು ಆಚರಿಸುತ್ತಿದ್ದಾರೆ. ಹಾಗೆಯೇ ಮಸೀದಿ ಸೇರಿದಂತೆ ಇನ್ನಿತರೇ ಪವಿತ್ರ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನ ಸಲ್ಲಿಸಿದ್ದಾರೆ.

ಅದರಂತೆ ಇಂದು ಬೆಳಿಗ್ಗೆ  ಶಿವಮೊಗ್ಗದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು  ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.  ಒಬ್ಬರನ್ನೊಬ್ಬರು ತಬ್ಬಿಕೊಂಡು ಪರಸ್ಪರ ಶುಭಾಶಯವನ್ನು ಕೋರಿದರು. ಈ ಸಂದರ್ಭದಲ್ಲಿ ಮೈದಾನದಲ್ಲಿ ಸಾವಿರಾರು ಮುಸಲ್ಮಾನರು ಭಾಗಿಯಾಗಿದ್ದು, ಮನ್ನೆಚ್ಚರಿಕೆ ಕ್ರಮವಾಗಿ  ಪೊಲೀಸರು  ನಗರದಾದ್ಯಂತ ಬಿಗಿ ಬಂದೋಬಸ್ತ್​ ಏರ್ಪಡಿಸಿದ್ದರು.

ರಂಜಾನ್​ ನಂತರ ಬಕ್ರೀದ್​ ಮುಸಲ್ಮಾನರಿಗೆ ಪವಿತ್ರ ಹಬ್ಬವಾಗಿದ್ದು, ಇದು ತ್ಯಾಗ ಬಲಿದಾನದ ಸಂಕೇತವಾಗಿದೆ.

 

Share This Article