zipline in jog falls / ಮುಂದಿನ 3 ತಿಂಗಳಲ್ಲಿ ಜೋಗ ಜಲಪಾತದಲ್ಲಿ ಮತ್ತೊಂದು ದೊಡ್ಡ ಯೋಜನೆ ! ಪ್ರವಾಸಿಗರಿಗೆ ಸಿಹಿಸುದ್ದಿ

ajjimane ganesh

zipline in jog falls ಜೋಗ ಜಲಪಾತದ ಮೇಲೆ ಶೀಘ್ರದಲ್ಲೇ ಜಿಪ್‌ಲೈನ್ 

Shivamogga news ಶಿವಮೊಗ್ಗ, ಜೂನ್ 21, 2025: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಜೋಗ ಜಲಪಾತದಲ್ಲಿ ಜಿಪ್‌ಲೈನ್ ಕಾಮಗಾರಿ ಶೀಘ್ರದಲ್ಲಿಯೇ ಶುರವಾಗಲಿದೆ. ಈ ಹಿಂದಿನ ಯೋಜನೆಗೆ ಈಗ ಮರುಜೀವ ಸಿಕ್ಕಿದ್ದು ಮೂರು ತಿಂಗಳಿನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. 

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗ ನಿರ್ವಹಣಾ ಪ್ರಾಧಿಕಾರ (JMA) ಜಿಪ್‌ಲೈನ್ ಯೋಜನೆಗೆ ಮತ್ತೆ ಜೀವ ತುಂಬಿದೆ. ಮೊದಲ ಬಾರಿಗೆ 2020 ರಲ್ಲಿ ಪ್ರಸ್ತಾಪಿಸಲಾಗಿದ್ದ ಜಿಪ್‌ಲೈನ್ ಯೋಜನೆಯು ಕೋವಿಡ್ ಸಾಂಕ್ರಾಮಿಕ ಮತ್ತು ಜೋಗ ಜಲಪಾತದ ಸಮಗ್ರ ನಿರ್ವಹಣಾ ಯೋಜನೆಯಡಿಯಲ್ಲಿ ಕೈಗೊಂಡ ₹130 ಕೋಟಿ ವೆಚ್ಚದ ಸುಧಾರಣಾ ಕಾರ್ಯಗಳಿಂದಾಗಿ ಸ್ಥಗಿತಗೊಂಡಿತ್ತು. ಈಗ, ಈ ಸಂಬಂಧ ಪ್ರಾಧಿಕಾರ ಟೆಂಡರ್ ಆಹ್ವಾನಿಸಿದೆ. 

- Advertisement -

zipline in jog falls

tour to joga
tour to joga

ಜಿಪ್‌ಲೈನ್ ಸುಮಾರು 460 ಮೀಟರ್ ಉದ್ದವಿರಲಿದ್ದು, ಯಾತ್ರಿ ನಿವಾಸದ ಪ್ರವೇಶ ದ್ವಾರದ ಬಳಿ ಪ್ರಾರಂಭವಾಗಿ ವೀಕ್ಷಣಾ ಡೆಕ್ 2 ರಲ್ಲಿ ಕೊನೆಗೊಳ್ಳಲಿದೆ. ಸದ್ಯ ಇಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿದ ಬೆನ್ನಲ್ಲೆ ಜಿಪ್​ಲೈನ್ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಿಪ್​ ಲೈನ್ ನಿರ್ವಹಣಾ ಸಂಸ್ಥೆಗಳ ಪೈಕಿ  ₹45 ಲಕ್ಷಕ್ಕಿಂತ ಹೆಚ್ಚು ಬಿಡ್ ಮಾಡುವವರಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದ್ದು, ಮೂರು ವರ್ಷಗಳ ಕಾಲ ಜಿಪ್‌ಲೈನ್ ಅನ್ನು ನಿರ್ವಹಿಸುವ ಮತ್ತು ನಿರ್ವಹಣೆ ಮಾಡುವ ಅವಕಾಶ ನೀಡಲು ತೀರ್ಮಾನಿಸಲಾಗಿದೆ. 

ನಿಯಮಗಳು ಮತ್ತು ದಂಡಗಳು: zipline in jog falls

Jog falls open to public timings
Jog falls open to public timings

ಸಾರ್ವಜನಿಕರೊಂಧಿಗೆ ದುರ್ವರ್ತನೆ ತೋರಿದರೆ ₹10,000 ದಂಡ , ಮೂರಕ್ಕಿಂತ ಹೆಚ್ಚು ಬಾರಿ ಪುನರಾವರ್ತಿತ ಉಲ್ಲಂಘನೆಗಳಾದರೆ ಪರವಾನಗಿ ರದ್ದು, ನಿರ್ವಾಹಕರ ಯಾವುದೇ ಸಿಬ್ಬಂದಿ ಕೆಲಸದಲ್ಲಿ ಮದ್ಯಪಾನ ಮಾಡಿರುವ ಕಂಡುಬಂದರೆ, ₹10,000 ದಂಡ, ಹೀಗೆ ಕಠಿಣ ಷರತ್ತುಗಳನ್ನು ಅನ್ವಯಿಸಿ ಟೆಂಡರ್ ಕರೆಯಲಾಗಿದೆ.   

ಜೋಗ ಜಲಪಾತಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ನೋಡಿ : ಜೋಗ ಜಲಪಾತ

Share This Article
1 Comment

Leave a Reply

Your email address will not be published. Required fields are marked *