young Scientist Competition 2025 : ಜರ್ಮನಿಯ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಮಿಶಾ ಹೆಗ್ಡೆ ಕಂದಾವರ ಪ್ರಥಮ

prathapa thirthahalli
Prathapa thirthahalli - content producer

young Scientist Competition 2025 : ಜರ್ಮನಿಯ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಮಿಶಾ ಹೆಗ್ಡೆ ಕಂದಾವರ ಪ್ರಥಮ

ಶಿವಮೊಗ್ಗ : ಜರ್ಮನಿಯ ಯುವ ವಿಜ್ಞಾನಿ ಸ್ಪರ್ಧೆಯ ಜೀವ ಶಾಸ್ತ್ರ ವಿಭಾಗದಲ್ಲಿ  ಶಿವಮೊಗ್ಗದ ಡಿ.ಕೆ.ಎಸ್. ಹೆಗ್ಡೆ ಮತ್ತು ಮಮತ ಹೆಗ್ಡೆ ಇವರ ಮೊಮ್ಮಗಳು ಹಾಗೂ. ಮಂಜುನಾಥ್ ಪ್ರಸಾದ್ ಹೆಗ್ಡೆ ಮತ್ತು ಮೀಲೀ ದಂಪತಿಯ ಪುತ್ರಿ ಮಿಶಾ ಹೆಗ್ಡೆ ಕಂದಾವರ ಪ್ರಥಮ ಸ್ಥಾನ ಪಡೆದಿದ್ದಾರೆ. 

young Scientist Competition ಮಿಶಾ ಹೆಗ್ಡೆ ಕಂದಾವರ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಹಲವು ಪ್ರಸಿದ್ಧ ಸಂಶೋಧನಾ ಸಂಸ್ಥೆಗಳ ಬೆಂಬಲದಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಕೃಷಿಯಲ್ಲಿ ಸಸ್ಯಗಳಿಗೆ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಗಳ ಗೊಬ್ಬರದ ಮಣ್ಣಿನಿಂದ ಪ್ರತ್ಯೇಕಿಸಿ ಹೊಸ ವೈರಸನ್ನು ಪರಿಸರ ಸ್ನೇಹಿ ರೀತಿಯಲ್ಲಿ ಬಳಸಿ ಬೆಳೆಗಳನ್ನ ಹೇಗೆ ರಕ್ಷಿಸಬಹುದು ಎಂಬುದರ ಸಂಶೋಧನೆ ಈ ಮಾನ್ಯತೆ ಸಿಕ್ಕಿದ್ದು, ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ‌. ಹಾಗೆಯೇ ಯೂರೋಪಿಯನ್ ಕಂಟೆಸ್ಟ್ ಫಾರ್ ಯಂಗ್ ಸೈಂಟಿಸ್ಟ್ ಸ್ಪರ್ಧೆ ಗೂ ಮಿಶಾ ಹೆಗ್ಡೆ ಕಂದಾವರ ಆಯ್ಕೆಯಾಗಿದ್ದಾರೆ. 

Share This Article