SHIVAMOGGA NEWS TODAY

sagara jambagaru railway station 13-05-25 : ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾರವರ ಹೆಸರಿಡಿ | ಕಲ್ಲೂರು ಮಂಜುನಾಥ್​

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

sagara jambagaru railway station : ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾರವರ ಹೆಸರಿಡಿ | ಕಲ್ಲೂರು ಮಂಜುನಾಥ್​

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಹಿರಿಯ ಸಮಾಜವಾದಿ ಮುಖಂಡರಾದ ರಾಮಮನೋಹರ ಲೋಹಿಯಾ ರವರ ಹೆಸರನ್ನು  ಇಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಲ್ಲೂರು ಮೇಘರಾಜ್ ಹೇಳಿದರು.

sagara jambagaru railway station ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ” ಹಿರಿಯ ಸಮಾಜವಾದಿ ಮುಖಂಡರಾದ ಡಾ. ರಾಮಮನೋಹರ ಲೋಹಿಯಾ ” ರವರ ಹೆಸರನ್ನು ಮರುನಾಮಕರಣ ಮಾಡಲು ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾ ರವರಿಗೆ ನಮ್ಮ ಸಂಘಟನೆಯು ಪ್ರತ್ಯೇಕ ಪತ್ರ ಬರೆದು ಒತ್ತಾಯಿಸಿದ್ದೇವೆ.

sagara jambagaru railway station ಜೂನ್​ 13-1951 ರಂದು ಸಾಗರದ ಕಾಗೋಡು ಗ್ರಾಮದಲ್ಲಿ ನಡೆಯುತ್ತಿದ್ದ ಉಳುವವನೇ ಹೊಲದೊಡೆಯ ಸಿದ್ಧಾಂತದ ಐತಿಹಾಸಿಕ ಕಾಗೋಡು ಸತ್ಯಾಗ್ರಹದಲ್ಲಿ ಡಾ. ರಾಮಮನೋಹರ ಲೋಹಿಯಾರವರು ಭಾಗವಹಿಸಿ, ಅಂದು ತಡರಾತ್ರಿ ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಈ ಡಾ. ರಾಮಮನೋಹರ ಲೋಹಿಯಾರವರ ಬಂಧನ ನಡೆದು ಜೂನ್​ 13-2025ಕ್ಕೆ 74 ವರ್ಷಗಳು ತುಂಬಲಿದೆ. ಡಾ. ರಾಮಮನೋಹರ ಲೋಹಿಯಾರವರು ಸಾಗರದಲ್ಲಿ ನಡೆದ ಇತಿಹಾಸ ಪ್ರಸಿದ್ದ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಸುದ್ದಿಯು ಅಂತರರಾಷ್ಟ್ರೀಯ ಸುದ್ದಿಯಾಯಿತು. ಲೋಹಿಯಾರವರ ಬಂಧನದ ಕಾವಿನಲ್ಲಿ ಕಾಗೋಡು ಸತ್ಯಾಗ್ರಹಕ್ಕೆ ಅಂತರರಾಷ್ಟ್ರೀಯ ಖ್ಯಾತಿ ಬಂದು, ನಂತರ ಕರ್ನಾಟಕದಲ್ಲಿ ದಿ: 13-3-1974ಕ್ಕೆ ಅನ್ವಯವಾಗುವಂತೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸುರವರು ಗೇಣಿದಾರರಿಗೆ ಭೂ ಒಡೆತನ ನೀಡುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು..

ಈ ಹಿನ್ನಲೆಯಲ್ಲಿ ನಮ್ಮ ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳ 35 ಜನರ ನಿಯೋಗ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು, ಅಂದಿನ ಕೇಂದ್ರದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿದ್ದ ಶ್ರೀ ಶ್ರೀನಿವಾಸ ಪ್ರಸಾದ್ ರವರ ಮೂಲಕ ಅಂದಿನ ಕೇಂದ್ರದ ಗೃಹ ಸಚಿವರಾಗಿದ್ದ ಶ್ರೀ ಎಲ್. ಕೆ. ಅದ್ವಾನಿ ಇವರನ್ನು ಭೇಟಿ ಮಾಡಿ, ಸಾಗರ ಜಂಬುಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯಾರವರ ಹೆಸರಿಡಲು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೆವು ಆದರೆ ಅದು ಕಾರ್ಯಗತವಾಗಲಿಲ್ಲ.

sagara jambagaru railway station ನಂತರ 2000  ಜೂನ್ 13 ರಂದು ಸಾಗರದ ಜಂಬಗಾರು ರೈಲ್ವೆ ನಿಲ್ದಾಣದ ಎದುರು ನಮ್ಮ ಟ್ರಸ್ಟ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅರುಣ್ ಪ್ರಸಾದ್‌ರವರ ನೇತೃತ್ವದ ಶಿವಮೊಗ್ಗ ಜಿಲ್ಲಾಭಿವೃದ್ಧಿ ಸಮಿತಿಯು ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡು, ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯಾರವರ ಹೆಸರಿಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದೆವು. ಮ್ಯಾಗ್ನಸ್ ಪ್ರಶಸ್ತಿ ವಿಜೇತ ಸಾಹಿತಿ ಕೆ. ವಿ. ಸುಬ್ಬಣ್ಣನವರು ನಾವು ನಡೆಸುತ್ತಿದ್ದ ಕಾರ್ಯಕ್ರಮಕ್ಕೆ ಪತ್ರವೊಂದನ್ನು ಕಳಿಸಿ ” ನಾನು ಇನ್ನು ಮುಂದೆ ಸಾಗರದ ರೈಲ್ವೆ ನಿಲ್ದಾಣಕ್ಕೆ ಡಾ. ರಾಮಮನೋಹರ ರೈಲ್ವೆ ನಿಲ್ದಾಣವೆಂದೇ ” ಕರೆಯುವುದಾಗಿ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ನಾನು ಮತ್ತು ಅರುಣ್ ಪ್ರಸಾದ್ ಸೇರಿ ಒಂದು ನಾಮ ಫಲಕವನ್ನು ಬರೆಸಿ ರೈಲ್ವೆ ನಿಲ್ದಾಣದ ಎದುರು ಆಳವಡಿಸಿದ್ದೆವು ಇಷ್ಟೆಲ್ಲಾ ಪ್ರಯತ್ನಗಳು ನಡೆದರೂ ಯಾವುದೇ ಉಪಯೋಗ ಆಗಲಿಲ್ಲ.

ಆದ್ದರಿಂದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮಮನೋಹರ ಲೋಹಿಯಾರವರ ಹೆಸರಿಡಲು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಹಾಗೂ ಯಾವುದೇ ರೈಲ್ವೆ ನಿಲ್ದಾಣಗಳ ಹೆಸರನ್ನು ಪುನರ್‌ ನಾಮಕರಣ ಮಾಡುವ ಹೊಣೆ ಹೊತ್ತಿರುವ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ರವರನ್ನು ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ನಾಯಕರುಗಳ ಪರವಾಗಿ ನಮ್ಮ ಸಂಘಟನೆ ಇವರುಗಳಿಗೆ ಪತ್ರ ಬರೆದು ವಿನಂತಿದ್ದೇವೆ  ಎಂದರು.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.