ಕೇರಳದಿಂದ ಬಂದು ಕೋರ್ಟ್​ಗೆ ಹಾಜರಾದ ಶಂಕಿತ ನಕ್ಸಲ್​ ಮುಖಂಡ ಬಿಜಿ ಕೃಷ್ಣಮೂರ್ತಿ!

ಹಂಚಿಕೊಳ್ಳಿ
WhatsApp Facebook X Telegram
bg krishnamurthy

BG Krishnamurthy ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ / ಚಿಕ್ಕಮಗಳೂರು |ಶಂಕಿತ ನಕ್ಸಲ್ ಮುಖಂಡ ಬಿ ಜಿ ಕೃಷ್ಣಮೂರ್ತಿಯವರ ವಿಚಾರಣೆ ಮುಂದುವರಿದಿದೆ. ಶಿವಮೊಗ್ಗ ಕೋರ್ಟ್​ಗಳಲ್ಲಿ ವಿಚಾರಣೆ ನಡೆದಿರುವ ಬೆನ್ನಲ್ಲೆ ನಿನ್ನೆ ದಿನ ಗುರುವಾರ ಅವರನ್ನ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕೋರ್ಟ್​ಗೆ ಹಾಜರುಪಡಿಸಲಅಗಿತ್ತು. ಬಿ.ಜಿ.ಕೃಷ್ಣಮೂರ್ತಿಯನ್ನು ಪೊಲೀಸರು ಇಲ್ಲಿನ ಜೆಎಂಎಫ್‌ಸಿ ಕೇರಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಶುಕ್ರವಾರ

ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರೂರು ಗ್ರಾಮದ ಕಾನ್ ಎಸ್ಟೇಟ್‌ನ ನಿವಾಸಿಯಾಗಿರುವ ಬಿ.ಜಿ.ಕೃಷ್ಣಮೂರ್ತಿ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದಂತೆ ಒಟ್ಟು 54 ಪ್ರಕರಣಗಳಿವೆ. 2001 ರಿಂದ 2010 ರ ಅವಧಿಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಇವರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು.

ಪ್ರಸ್ತುತ ಈತ ಕೇರಳದ ತಿರುವನಂತಪುರಂ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜಿಕೆ ಅವರನ್ನು ವಿಚಾರಣೆ ಮುಗಿದ ನಂತರ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮತ್ತೆ ಕೇರಳಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಆರೋಪಿಯ ಕುಟುಂಬದವರು ಸ್ಥಳದಲ್ಲಿ ಹಾಜರಿದ್ದು, ಕೃಷ್ಣಮೂರ್ತಿ ಅವರೊಂದಿಗೆ ಮಾತನಾಡಿದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor